Kia 9 Seater: 9 ಆಸನಗಳ ಈ ಕಿಯಾ ಕಾರಿನ ಮುಂದೆ ಬೇಡಿಕೆ ಕಳೆದುಕೊಂಡ ಇನ್ನೋವಾ, 14 Km ಮೈಲೇಜ್ ಕೊಡುವ ಕಾರ್.

14 ಕಿಲೋಮೀಟರ್ ಮೈಲೇಜ್ ಕೊಡುವ 8 ಆಸನದ Kia Car.

Kia Carnival MPV: ಭಾರತೀಯ ಆಟೋ ವಲಯದಲ್ಲಿ Kia ಕಂಪನಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಈಗಾಗಲೇ Kia India ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತಿವೆ. Kia ಮಾರುಕಟ್ಟೆಯಲ್ಲಿ ಇತ್ತೀಚಿಗೆ ತನ್ನ Seltos ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. Kia seltos ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದ ಬೆನ್ನಲ್ಲೇ ಇದೀಗ Kia ಇನ್ನೊಂದು ಮಾದರಿಯನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

Kia Carnival MPV
Image Credit: Zigwheels

Kia Carnival
ಮಾರುಕಟ್ಟೆಯಲ್ಲಿ ಕುಟುಂಬದ ಕಾರೆಂದು ಖ್ಯಾತಿ ಗಳಿಸಿರುವ Kia Carnival ಶೀಘ್ರದಲ್ಲೇ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಕಂಪನಿಯು ನವೀಕರಿಸಿದ ನಾಲ್ಕನೇ ತಲೆಮಾರಿನ ಕಾರ್ನಿವಲ್ MPV ಹೊರಭಾಗದ ಲುಕ್ ಅನ್ನು ಕಂಪನಿಯು ಪರಿಚಯಿಸಿದೆ. ಇದೀಗ ಈ ಕಾರಿನ ಬಗ್ಗೆ ಹೆಚ್ಚಿನ ವಿವರ ಬಹಿರಂಗವಾಗಿದೆ. ಕೊರಿಯಾದಲ್ಲಿ ಬುಕ್ಕಿಂಗ್‌ ಗಳು ಈಗಾಗಲೇ ಪ್ರಾರಂಭವಾಗಿದ್ದು, ಈ ವರ್ಷಾಂತ್ಯದ ವೇಳೆಗೆ ಮಾರಾಟವನ್ನು ಪ್ರಾರಂಭಿಸಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ.

Kia Carnival ಕಾರ್ ನ ವಿಶೇಷತೆ
ಇದು ಮುಂದಿನ ವರ್ಷದ (2024) ಆರಂಭದಲ್ಲಿ ಭಾರತದಲ್ಲಿ ಬಹುತೇಕ ಬಿಡುಗಡೆಯಾಗಲಿದೆ. ಹೊಸ ಕಾರ್ನಿವಲ್ MPV ವಿನ್ಯಾಸದಲ್ಲಿ ಸಾಕಷ್ಟು ಅತ್ಯಾಧುನಿಕವಾಗಿದ್ದು ಮುಂಭಾಗದ L- ಆಕಾರದ LED DRL ಗಳು, ಆಕರ್ಷಕ ಹೆಡ್‌ ಲೈಟ್‌ ಗಳನ್ನು ಹೊಂದಿದೆ. ರೇಡಿಯೇಟರ್ ಗ್ರಿಲ್ ಮೊದಲಿಗಿಂತ ಸ್ವಲ್ಪ ದೊಡ್ಡದಾಗಿದೆ. ಇದು ಮರುವಿನ್ಯಾಸಗೊಳಿಸಲಾದ ಬಂಪರ್, ಡ್ಯುಯಲ್ ಟೋನ್ ಮಿಶ್ರಲೋಹದ ಚಕ್ರಗಳನ್ನು ಪಡೆಯುತ್ತದೆ.

Kia Carnival MPV Price
Image Credit: Forbes

9 ಆಸನಗಳ ಈ ಕಿಯಾ ಕಾರಿನ ಮುಂದೆ ಬೇಡಿಕೆ ಕಳೆದುಕೊಂಡ ಇನ್ನೋವಾ
ನೂತನ Kia Carnival ನಲ್ಲಿ 9 ಆಸನಗಳ ಆಯ್ಕೆಯನ್ನು ಕಾಣಬಹುದಾಗಿದೆ. ಡ್ಯಾಶ್ ಬೋರ್ಡ್ ವಿನ್ಯಾಸ ವಿಭಿನ್ನವಾಗಿದ್ದು, Curved display, twin 12.3-inch display for infotainment and instrument cluster, AC vents, front Miror , Digital Key, Ambient Lighting, Fingerprint Sensor, Level-2 ADAS ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ.

14 Km ಮೈಲೇಜ್ ಕೊಡುವ ಕಾರ್ ಗೆ ಜನರು ಫಿದಾ
ಕಿಯಾ ಕಾರ್ನಿವಲ್ MPV ಭಾರತದಲ್ಲಿ 2.2 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಮತ್ತು ಸ್ವಯಂಚಾಲಿತ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಹಳೆಯ ಮಾದರಿಗೆ ಹೋಲಿಸಿದರೆ ನೂತನ Carnival 72 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದ್ದು, ಪ್ರತಿ ಲೀಟರ್ ಗೆ 14km ಮೈಲೇಜ್ ನೀಡುತ್ತದೆ ಎನ್ನುವ ಬಗ್ಗೆ ವರದಿಯಾಗಿದೆ. ಇನ್ನು ಹೊಚ್ಚ ಹೊಸ Kia Carnival ಕಾರ್ ನ ಬೆಲೆಯ ಬಗ್ಗೆ ಕಂಪನಿ ಅಧಿಕೃತ ಮಾಹಿತಿ ನೀಡಿಲ್ಲವಾದರೂ ಮಾರುಕಟ್ಟೆಯಲ್ಲಿ ಸುಮಾರು 40 ಲಕ್ಷ ರೂ. ಗಳಲ್ಲಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group