Kia: ಒಮ್ಮೆ ಚಾರ್ಜ್ ಮಾಡಿದರೆ ಭರ್ಜರಿ 750 Km ಮೈಲೇಜ್, ಈ KIA ಕಾರಿನ ಮುಂದೆ ಸೋತ ಟಾಟಾ ಮಾತ್ತು ಹುಂಡೈ.
ಒಮ್ಮೆ ಚಾರ್ಜ್ ಮಾಡಿದರೆ 750 Km ಮೈಲೇಜ್ ಕೊಡುವ ಕಾರ್ ಲಾಂಚ್ ಮಾಡಿದ ಕಿಯಾ.
Kia EV6 Electric Car: ಪ್ರಸ್ತುತ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಏರಿಕೆಯಿಂದಾಗಿ ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೇಡಿಕೆಗೆ ಅನುಗುಣವಾಗಿ ಸಾಕಷ್ಟು ಪ್ರತಿಷ್ಠಿತ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಿದ್ದಾರೆ. ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗಿ ಜನರ ಪೆಟ್ರೋಲ್, ಡೀಸೆಲ್ ಖರ್ಚನ್ನು ಕಡಿಮೆ ಮಾಡುತ್ತಿವೆ.
ಅತಿ ಕಡಿಮೆ ಬೆಲೆಯಲ್ಲಿನ ಹೆಚ್ಚಿನ ಮೈಲೇಜ್ ನೀಡುವ ಸಾಕಷ್ಟು ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಗೊಂಡಿದೆ. ಇದೀಗ ಕಿಯಾ (Kia) ಕಂಪನಿ ಕೂಡ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಎಲೆಕ್ಟ್ರಿಕ್ ಕಾರ್ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಸಿಗಲಿದ್ದು ಹೆಚ್ಚಿನ ಮೈಲೇಜ್ ನೀಡಲಿದೆ.
ಕಿಯಾ EV6 ಎಲೆಕ್ಟ್ರಿಕ್ ಕಾರ್ (Kia EV6 Electric Car)
ಇದೀಗ ಪ್ರತಿಷ್ಠಿತ ಎಲೆಕ್ಟ್ರಿಕ್ ಕಾರ್ ತಯಾರಿಕಾ ಕಂಪನಿಯಾದ ಕಿಯಾ (KIA) ತನ್ನ ಮೊದಲ ಎಲೆಕ್ಟ್ರಿಕ್ ಕ್ರಾಸ್ ಓವರ್ EV6 ಅನ್ನು ಪರಿಚಯಿಸಿದೆ. ಕಿಯಾ EV6 ಎಲೆಕ್ಟ್ರಿಕ್ ಕಾರ್ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಕಿಯಾ EV6 ಎಲೆಕ್ಟ್ರಿಕ್ ಕ್ರಾಸ್ ಓವರ್ 77.4kWh ಬ್ಯಾಟರ್ ಪ್ಯಾಕ್ ಮತ್ತು ಸಿಂಗಲ್ ಮೋಟಾರ್ ಅನ್ನು ಹೊಂದಿರುತ್ತದೆ. ಇದರ ಬ್ಯಾಟರಿ ಸಾಮರ್ಥ್ಯವು 350kW DC ಚಾರ್ಜರ್ ಮೂಲಕ ಕೇವಲ 18 ನಿಮಿಷಗಳಲ್ಲಿ 100 ರಿಂದ 80 ಪ್ರತಿಶತದಷ್ಟು ಚಾರ್ಜ್ ಆಗುತ್ತದೆ.
ಒಮ್ಮೆ ಚಾರ್ಜ್ ಮಾಡಿದರೆ ಭರ್ಜರಿ 750 Km ಮೈಲೇಜ್ ನೀಡಲಿದೆ ಈ ಕಾರ್
ಕಿಯಾ EV6 ಎಲೆಕ್ಟ್ರಿಕ್ ಕಾರ್ RWD ಮತ್ತು ಡ್ಯುಯಲ್ ಮೋಟಾರ್, AWD ಸೆಟಪ್ ಗಳೊಂದಿಗೆ ಬರುತ್ತದೆ. RWD ರೂಪಾಂತರವು 229bhp ಪವರ್ ಮತ್ತು 350 Nm ಟಾರ್ಕ್ ಅನ್ನು ನೀಡುತ್ತದೆ. ಈ ಕಾರಿಗೆ ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 750 ಕಿಲೋ ಮೀಟರ್ ಚಲಿಸುತ್ತದೆ.
ಕಿಯಾ EV6 ಎಲೆಕ್ಟ್ರಿಕ್ ಕಾರ್ ಬೆಲೆ
KIA EV6 ಐಷಾರಾಮಿ ಎಲೆಕ್ಟ್ರಿಕ್ ಕಾರ್ ಆಗಿದೆ. ನೂತನ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಿರುವ ಕಾರಣ ಎಲೆಕ್ಟ್ರಿಕ್ ಕಾರಿನ ಬೆಲೆ ಸ್ವಲ್ಪ ಅಧಿಕವಾಗಿದೆ. ಈ ಕಾರ್ ನ ಬೆಲೆ ಸುಮಾರು 60 ರಿಂದ 65 ಲಕ್ಷ ರೂಪಾಯಿ ಆಗಿದೆ. ಸ್ವಯಂ ಚಾಲಿತ ಹವಾಮಾನ ನಿಯಂತ್ರಣ, ಕಡಿಮೆ ಇಂಧನ ಎಚ್ಚರಿಕೆ, ಹೀಟರ್, ಹಿಂಬದಿ ಸೀಟ್ ಹೆಡ್ ರೆಸ್ಟ್, ಸೀಟ್ ಲುಂಬರ್ ಸಪೋರ್ಟ್, ಎಂಜಿನ್ ಸ್ಟಾರ್ಟ್ ಸ್ಟಾಪ್, ಪನರೊಮಿಕ್ ಸನ್ ರೂಪ್ ಸೇರಿದಂತೆ ಇನ್ನಿತರ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.