Kia EV5: ಸಿಂಗಲ್ ಚಾರ್ಜ್ ನಲ್ಲಿ 750 Km ರೇಂಜ್, ಗೇಮ್ ಚೇಂಜ್ ಮಾಡಲು ಬಂತು ಇನ್ನೊಂದು ಅಗ್ಗದ KIA ಕಾರ್.

ಸಿಂಗಲ್ ಚಾರ್ಜ್ ನಲ್ಲಿ 750 Km ಮೈಲೇಜ್ ಕೊಡುಸಿವ ಕಾರ್ ಲಾಂಚ್ ಮಾಡಿದ KIA

Kia EV5 Electric SUV: ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ (Electric) ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. ಈ ಕಾರಣಕ್ಕೆ ವಾಹನ ತಯಾರಕ ಕಂಪನಿಗಳು ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಪರಿಚಯಿಸುತ್ತಿವೆ. ಮಾರುಕಟ್ಟೆಯ್ಲಲಿ ಈಗಾಗಲೇ ಸಾಕಷ್ಟು ಮಾದರಿಯ ಎಲೆಕ್ಟ್ರಿಕ್ ಕಾರ್ ಗಳಿವೆ.

ವಿವಿಧ ಕಂಪನಿಗಳು ಸೇರಿದಂತೆ ದೇಶದ ಜನಪ್ರಿಯ ಕಂಪೆನಿಯಾಗಿರುವ KIA ಮಾರುಕಟ್ಟೆಯಲ್ಲಿ ಅನೇಕ ಎಲೆಕ್ಟ್ರಿಕ್ ರೂಪಾಂತರದ ಕಾರ್ ಗಳನ್ನೂ ಪರಿಚಯಿಸಿದೆ. ಇನ್ನು ಕಿಯಾ ಎಲೆಕ್ಟ್ರಿಕ್ ವಿಭಾಗಕ್ಕೆ EV1 ರಿಂದ EV9 ವರೆಗೆ ಮೀಸಲಾಗಿ ಎಲೆಕ್ಟ್ರಿಕ್ ಶ್ರೇಣಿಯನ್ನು ಪರಿಚಯಿಸಿದೆ. ಈಗಾಗಲೇ ಈ ಎಲ್ಲ ವಿಭಾಗದ ಕಾರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸದ್ಯ ನೂತನವಾಗಿ ಕಿಯಾ EV5 SUV ಯನ್ನು ಚೀನಾ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

Kia EV5 Electric SUV
Image Credit: Hindustantimes

Kia EV5 Electric SUV 
Kia ಇದೀಗ ತನ್ನ ಎಸ್ ಯುವಿ ವಿಭಾಗದಲ್ಲಿ ಕಿಯಾ EV5 ಎಲೆಕ್ಟ್ರಿಕ್ ಎಸ್ ಯುವಿಯನ್ನು ಸದ್ಯದಲ್ಲೇ ಪರಿಚಯಿಸಲಿದೆ. ಕಿಯಾ ತನ್ನ ನೂತನ ಎಲೆಕ್ಟ್ರಿಕ್ SUV EV5 ಅನ್ನು ಚೆಂಗ್ಡು ಮೋಟಾರ್ ಶೋನಲ್ಲಿ ಅಧಿಕೃತವಾಗಿ ಬಹಿರಂಗಪಡಿಸಿದೆ. ಆಕರ್ಷಕ ವಿನ್ಯಾಸವನ್ನು ಹೊಂದಿರುವ ಕಿಯಾ EV5 ಎಲೆಕ್ಟ್ರಿಕ್ ಎಸ್ ಯುವಿ ತನ್ನ ವಿಭಿನ್ನ ನೋಟದಲ್ಲೇ ಗ್ರಾಹಕರನ್ನು ಸೆಳೆಯಲಿದೆ.

ಕಿಯಾ EV5 ಎಲೆಕ್ಟ್ರಿಕ್ ಎಸ್ ಯುವಿಯಲ್ಲಿ ಪ್ರಯಾಣಕ್ಕಾಗಿ ಆರಾಮದಾಯಕ ಆಸನಗಳನ್ನು ಅಳವಡಿಸಲಾಗಿದೆ. ಸೆಟ್-ಬ್ಯಾಕ್ ಡಿ-ಪಿಲ್ಲರ್‌ ಗಳನ್ನು ಕೂಡ ಇರಿಸಲಾಗಿದೆ. ಇನ್ನು ವಾಹನ ಸವಾರರ ಸುರಕ್ಷತೆಗಾಗಿ ಹೆಚ್ಚಿನ ಸುಧಾರಿತ ವೈಶಿಷ್ಟ್ಯಗಳನ್ನು ಈ ಕಾರ್ ನಲ್ಲಿ ಅಳವಡಿಸಲಾಗಿದೆ. ಇನ್ನು ಈ ನೂತನ ಮಾದರಿಯಲ್ಲಿ ವೇಗದ ಚಾರ್ಜಿಂಗ್ ಅನ್ನು ನೀಡಲಾಗಿದೆ.

Kia EV5 Electric SUV Price
Image Credit: Original Source

ಸಿಂಗಲ್ ಚಾರ್ಜ್ ನಲ್ಲಿ 750 Km ರೇಂಜ್
Kia EV5 Electric SUV EV5 e-GMP ಪ್ಲಾಟ್‌ ಫಾರ್ಮ್ ಅನ್ನು ಆಧರಿಸಿದೆ. ಚೀನಾದಲ್ಲಿ EV5 64.2 kWh ಬ್ಯಾಟರಿ ಪ್ಯಾಕ್ ಅನ್ನು 160-kW ಎಲೆಕ್ಟ್ರಿಕ್ ಮೋಟರ್‌ ಗೆ ಸಂಪರ್ಕಿಸುತ್ತದೆ. ಈ ಬ್ಯಾಟರಿ ಪ್ಯಾಕ್ LFP ರಾಸಾಯನಿಕವನ್ನು ಅಳವಡಿಸಲಾಗಿದೆ ಮತ್ತು ಚೀನಾದಲ್ಲಿ BYD ನಿಂದ ತಯಾರಿಸಲ್ಪಟ್ಟಿದೆ ಇದು ಒಂದೇ ಚಾರ್ಜ್ ನಲ್ಲಿ 530 ಕಿಮೀ ಶ್ರೇಣಿಯನ್ನು ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

Join Nadunudi News WhatsApp Group

EV5 ನ ದೀರ್ಘ ಶ್ರೇಣಿಯ ರೂಪಾಂತರವು 88 kWh ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದೆ, ಇದು 750 ಕಿಮೀ ವ್ಯಾಪ್ತಿಯನ್ನು ಒದಗಿಸುತ್ತದೆ. ಎರಡೂ ಮಾದರಿಗಳು ಒಂದೇ ರೀತಿಯ 160 kW ಎಲೆಕ್ಟ್ರಿಕ್ ಮೋಟರ್ ನೊಂದಿಗೆ ಅಳವಡಿಸಲ್ಪಟ್ಟಿವೆ. ದೀರ್ಘ ಶ್ರೇಣಿಯ ಮಾದರಿಯ ಬೆಲೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

Kia EV5 Electric SUV Feature
Image Credit:
Onmanorama

Kia EV5 Electric SUV Feature
*4-spoke steering wheel with dual screens
*gear lever
*ADAS
*7 airbags
*L2 level assisted driving
*Remote control smart parking
*Semi-automatic lane change

Join Nadunudi News WhatsApp Group