Kia: ಒಮ್ಮೆ ಚಾರ್ಜ್ ಮಾಡಿದರೆ ಭರ್ಜರಿ 600 Km ರೇಂಜ್, Kia ಈ ಕಾರಿಗೆ ದೇಶದಲ್ಲಿ ಹೆಚ್ಚಾಗಿದೆ ಬೇಡಿಕೆ.

ಇದೀಗ Kia ಮೋಟಾರ್ಸ್ ಬಿಡುಗಡೆ ಮಾಡಿರುವ ಈ ಹೊಸ ಎಲೆಕ್ಟ್ರಿಕ್ ಕಾರ್ ನ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

Kia EV5 Launch: ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಪ್ರತಿಷ್ಠಿತ ವಾಹನ ತಯಾರಕ ಕಂಪನಿಗಳು ಹೆಚ್ಚು ಹೆಚ್ಚು Electric ಮಾದರಿಯ ಕಾರ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಜಾಗತಿಕ ಮಟ್ಟದಲ್ಲಿ ಹಲವಾರು ವಾಹನ ತಯಾರಕ ಕಂಪನಿಗಳಿವೆ ಅದರಲ್ಲಿ Kia ಮೋಟಾರ್ಸ್ (Kia Motors) ಕೂಡ ಒಂದಾಗಿದೆ.

ಹೌದು ಕಿಯಾ ಮೋಟರ್ಸ್ ಈಗಾಗಲೇ ಕೆಲ;ಅವು ಎಲೆಕ್ಟ್ರಿಕ್ ಮಾದರಿಯ ಕಾರುಗಳನ್ನ ಮಾರುಕಟ್ಟೆಗೆ ಲಾಂಚ್ ಮಾಡಿದ್ದು ಈಗ ಇನ್ನೊಂದು ಹೊಸ ಎಲೆಕ್ಟ್ರಿಕ್ ಕಾರನ್ನ ಮಾರುಕಟ್ಟೆಗೆ ಲಾಂಚ್ ಮಾಡಲು ಮುಂದಾಗಿದೆ. ಈ ಕಾರ್ ಸುಮಾರು 600 ಕಿಲೋಮೀಟರ್ ಮೈಲೇಜ್ ಕೊಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದೀಗ Kia ಮೋಟಾರ್ಸ್ ಬಿಡುಗಡೆ ಮಾಡಿರುವ ಈ ಹೊಸ ಎಲೆಕ್ಟ್ರಿಕ್ ಕಾರ್ ನ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

Kia EV5 Battery Capacity
Image Credit: Electrek

Kia EV5
ಕಂಪನಿಯು ಆಟೋ ಎಕ್ಸ್ಪೋ ದಲ್ಲಿ ತನ್ನ ಅನೇಕ EV ಮೋಟಾರ್ ಶೋಗಳನ್ನು ಪ್ರಸ್ತುತಪಡಿಸುತ್ತದೆ. ಇತ್ತೀಚಿಗೆ ಕಂಪನಿಯು Kia EV 5 ಅನ್ನು ಬಿಡುಗಡೆ ಮಾಡುವ ಮೊದಲು ಕಂಪನಿಯು ಈ ಎಲೆಕ್ಟ್ರಿಕ್ SUV ಅನ್ನು ಚೀನಾದಲ್ಲಿ ನೆಡೆದ ಚೆಂಗ್ಡು ಮೋಟಾರ್ ಶೋ ನಲ್ಲಿ ಅನಾವರಣಗೊಳಿಸಿದೆ.

Kia EV5 Battery Capacity
Kia EV5 218hp ಮತ್ತು 310Nm ಟಾರ್ಕ್ ಅನ್ನು ಉತ್ಪದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯು BYD ಯ LFP ಬ್ಲೇಡ್ ಬ್ಯಾಟರಿಯನ್ನು EV5 ಪ್ರಮಾಣೀಕೃತ ಶ್ರೇಣಿಯೊಂದಿಗೆ ಬಳಸುತ್ತದೆ. Kia EV5 ಪೂರ್ಣ ಚಾರ್ಜ್ ನಲ್ಲಿ 600 ಗಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿರುತ್ತದೆ.

Kia EV5 Launch
Image Credit: Roadandtrack

Kia EV5 Launch
Kia EV5 ಅನ್ನು ಮೊದಲು ಚೀನಾದಲ್ಲಿ ಬಿಡುಗಡೆ ಮಾಡಲಿದೆ, ನಂತರ ಕಂಪನಿಯು ಇದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ಒಮ್ಮೆ ಬಿಡುಗಡೆಯಾದ ನಂತರ Kia EV5 ನೇರವಾಗಿ Volkswagen ID.4 ಮತ್ತು Skoda Enyaq iV ಯೊಂದಿಗೆ ಸ್ಪರ್ದಿಸುತ್ತದೆ.

Join Nadunudi News WhatsApp Group

Join Nadunudi News WhatsApp Group