Ads By Google

Kia EV6: ಒಮ್ಮೆ ಚಾರ್ಜ್ ಮಾಡಿದರೆ 700 Km ರೇಂಜ್, ಇತಿಹಾಸ ಸೃಷ್ಟಿಸಲು ತಯಾರಾದ KIA ಕಾರ್.

Kia EV6 electric car will enter the Indian market.

Image Credit: youtube

Ads By Google

Kia EV6 Electric Car: ಕಚ್ಚಾ ತೈಲಗಳ ಬೆಲೆ ಏರಿಕೆಯಿಂದಾಗಿ ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೇಡಿಕೆಗೆ ಅನುಗುಣವಾಗಿ ಸಾಕಷ್ಟು ಪ್ರತಿಷ್ಠಿತ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಿದ್ದಾರೆ.

ಅತಿ ಕಡಿಮೆ ಬೆಲೆಯಲ್ಲಿನ ಹೆಚ್ಚಿನ ಮೈಲೇಜ್ ನೀಡುವ ಸಾಕಷ್ಟು ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಗೊಂಡಿದೆ. ಇದೀಗ ಕಿಯಾ (KIA) ಕಂಪನಿ ಕೂಡ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಎಲೆಕ್ಟ್ರಿಕ್ ಕಾರ್ ನ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

Image Credit: Cnet

ಕಿಯಾ EV6 ಎಲೆಕ್ಟ್ರಿಕ್ ಕಾರ್ (Kia EV6 Electric Car)
ಇದೀಗ ಪ್ರತಿಷ್ಠಿತ ಎಲೆಕ್ಟ್ರಿಕ್ ಕಾರ್ ತಯಾರಿಕಾ ಕಂಪನಿಯಾದ ಕಿಯಾ (KIA) ತನ್ನ ಮೊದಲ ಎಲೆಕ್ಟ್ರಿಕ್ ಕ್ರಾಸ್ ಓವರ್ EV6 ಅನ್ನು ಪರಿಚಯಿಸಿದೆ. ಕಿಯಾ EV6 ಎಲೆಕ್ಟ್ರಿಕ್ ಕಾರ್ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಕಿಯಾ EV6 ಎಲೆಕ್ಟ್ರಿಕ್ ಕ್ರಾಸ್ ಓವರ್ 77.4kWh ಬ್ಯಾಟರ್ ಪ್ಯಾಕ್ ಮತ್ತು ಸಿಂಗಲ್ ಮೋಟಾರ್ ಅನ್ನು ಹೊಂದಿರುತ್ತದೆ. ಇದರ ಬ್ಯಾಟರಿ ಸಾಮರ್ಥ್ಯವು 350kW DC ಚಾರ್ಜರ್ ಮೂಲಕ ಕೇವಲ 18 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಹೋಗುತ್ತದೆ.

ಒಮ್ಮೆ ಚಾರ್ಜ್ ಮಾಡಿದರೆ 700 Km ರೇಂಜ್ ನೀಡಲಿದೆ ಈ ಕಾರ್
ಕಿಯಾ EV6 ಎಲೆಕ್ಟ್ರಿಕ್ ಕಾರ್ RWD ಮತ್ತು ಡ್ಯುಯಲ್ ಮೋಟಾರ್, AWD ಸೆಟಪ್ ಗಳೊಂದಿಗೆ ಬರುತ್ತದೆ. RWD ರೂಪಾಂತರವು 229bhp ಪವರ್ ಮತ್ತು 350 Nm ಟಾರ್ಕ್ ಅನ್ನು ನೀಡುತ್ತದೆ. ಈ ಕಾರಿಗೆ ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 700 ಕಿಲೋ ಮೀಟರ್ ಚಲಿಸುತ್ತದೆ.

Image Credit: Cnet

KIA EV6 ಎಲೆಕ್ಟ್ರಿಕ್ ಕಾರಿನ ಬೆಲೆ ಸ್ವಲ್ಪ ಅಧಿಕವಾಗಿದೆಯೇ. ಈ ಕಾರ್ ನ ಬೆಲೆ ಸುಮಾರು 60 ಲಕ್ಷ ರೂಪಾಯಿ ಆಗಿದೆ. ಸ್ವಯಂ ಚಾಲಿತ ಹವಾಮಾನ ನಿಯಂತ್ರಣ, ಕಡಿಮೆ ಇಂಧನ ಎಚ್ಚರಿಕೆ, ಹೀಟರ್, ಹಿಂಬದಿ ಸೀಟ್ ಹೆಡ್ ರೆಸ್ಟ್, ಸೀಟ್ ಲುಂಬರ್ ಸಪೋರ್ಟ್, ಎಂಜಿನ್ ಸ್ಟಾರ್ಟ್ ಸ್ಟಾಪ್ ಸೇರಿದಂತೆ ಇನ್ನಿತರ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in