Kia: 205 Km ಮೈಲೇಜ್ ಕೊಡುವ ಇನ್ನೊಂದು ಚಿಕ್ಕ Kia ಕಾರ್ ಕಡಿಮೆ ಬೆಲೆಗೆ, ಸಂಕಷ್ಟದಲ್ಲಿ MG ಕಾಮೆಟ್.
205 Km ಮೈಲೇಜ್ ಕೊಡುವ ಇನ್ನೊಂದು ಕಾರ್ ಕಡಿಮೆ ಬೆಲೆಗೆ ಲಾಂಚ್ ಮಾಡಿದ ಕಿಯಾ.
Kia Ray Electric Car: ದೇಶದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಸೇರಿದಂತೆ ವಿವಿಧ ಸ್ಟಾರ್ಟ್ ಅಪ್ ಕಂಪನಿಗಳು ಕೂಡ ಎಲೆಕ್ಟ್ರಿಕ್ ಮಾದರಿಯ ವಾಹನಗಳ ತಯಾರಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಮಾರುಕಟ್ಟೆಯಲ್ಲಿ ಕೂಡ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಕಂಪನಿಗಳು ಎಲೆಕ್ಟ್ರಿಕ್ ಮಾದರಿಯ ಕಾರ್, ಬೈಕ್ ತಯಾರಿಕೆಗೆ ಹೆಚ್ಚಿನ ಗಮನ ನೀಡುತ್ತಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ವಿವಿಧ ಕಾರ್ ತಯಾರಕ ಕಂಪನಿಗಳು ತನ್ನ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ನೂತನ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಲೆ ಇರುತ್ತದೆ. ಇದೀಗ ಮಾರುಕಟ್ಟೆಯಲ್ಲಿ ಜನಪ್ರಿಯ ಕಂಪನಿಯಾಗಿರುವ ಕಿಯಾ (Kia) ನೂತನ ಮಾದರಿಯಾ ಎಲೆಕ್ಟ್ರಿಕ್ ಕಾರ್ ಅನ್ನು ಪರಿಚಯಿಸಲು ಸಜ್ಜಾಗಿದೆ. ಈ ನೂತನ ಎಲೆಕ್ಟ್ರಿಕ್ ಮಾದರಿ ತನ್ನ ಲುಕ್ ನಲ್ಲಿಯೇ ಹೆಚ್ಚಿನ ಗ್ರಾಹಕರನ್ನು ಸೆಳೆಯಲಿದೆ.
ನೂತನ ವಿನ್ಯಾಸದ ಕಿಯಾ ರೇ
ಕಿಯಾ ಕಂಪನಿಯು ಇದೀಗ ಮಾರುಕಟ್ಟೆಯಲ್ಲಿ ಕಿಯಾ ರೇ ಮಾದರಿಯನ್ನು ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ಈ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ 17 ಲಕ್ಷ ಬೆಲೆಯನ್ನು ನಿಗದಿಪಡಿಸಲಾಗಿದೆ. ಇನ್ನು ದಕ್ಷಿಣ ಕೊರಿಯಾ ಮಾರುಕಟ್ಟೆಯಲ್ಲಿ ಇದರ ಬೆಲೆ 27.35 ಮಿಲಿಯನ್ ವೋನ್ ಆಗಿದೆ. ಈ ನೂತನ ಕಿಯಾ ರೇ ಕಾರ್ 10.25 ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕಾಲಮ್ – ಟೈಪ್ ಎಲೆಕ್ಟ್ರಾನಿಕ್ ಶಿಫ್ಟ್ ಲಿವರ್, ಸೆಂಟ್ರಲ್ ಕ್ಲಸ್ಟರ್ ನಲ್ಲಿ ಹೊಸ ಎಶಿ ಡಿಸ್ ಪ್ಲೇ ಮತ್ತು ಸ್ಟೋರೇಜ್ ಸ್ಪೇಸ್ ಅನ್ನು ಪಡೆಯಲಿದೆ.
ಭರ್ಜರಿ 205 ಕಿಲೋಮೀಟರ್ ರೇಂಜ್ ನೀಡಲಿದೆ ಈ ಕಾರ್
ನವೀಕರಿಸಿದ ವಿನ್ಯಾಸದ ಕಿಯಾ ರೇ ಕಾರ್ ನಲ್ಲಿ 35.2 kWh ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಈ ಬ್ಯಾಟರಿ ಪ್ಯಾಕಪ್ ಹೆಚ್ಚಿನ ರೇಂಜ್ ನಿಡಲು ಸಹಾಯ ಮಾಡಲಿದೆ. ಈ ಹಿಂದಿನ ಮಾದರಿಯ ಕಾರ್ 138 ಕಿಲೋಮೀಟರ್ ಮೈಲೇಜ್ ನೀಡುತ್ತಿತ್ತು. ಆದರೆ ಈ ನವೀಕರಿಸಿದ ಕಿಯಾ ರೇ ಭರ್ಜರಿ 205 ಕಿಲೋಮೀಟರ್ ರೇಜ್ ನೀಡಲಿದೆ. 7 kW ಚಾರ್ಜರ್ ನ ಮೂಲಕ ನೀವು ಕೇವಲ ಐದಾರು ಗಂಟೆಯಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಬಹುದು.