KIA Seltos 2026 Launch In India: ಇತ್ತೀಚಿಗೆ ಟಾಟಾ ಕಂಪನಿ Sierra ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಸಾಕಷ್ಟು ಸುದ್ದಿಯಾಗಿತ್ತು. ಅದೇ ರೀತಿಯಲ್ಲಿ ಈಗ ಟಾಟಾ Sierra ಕಾರಿಗೆ ಪೈಪೋಟಿ ಕೊಡಲು KIA ತನ್ನ ಹೊಸ ಮಾದರಿಯ Seltos ಕಾರ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೀಗ ಕಿಯಾ ಕಂಪನಿ ತನ್ನ ಹೊಸ ಮಾದರಿಯ ಕಿಯಾ ಸೆಲ್ಟೋಸ್ 2026 ಕಾರನ್ನು ಜನವರಿ 2 ರಂದು ಬಿಡುಗಡೆ ಮಾಡಲಿದೆ. ಈ ಹೊಸ ಮಾದರಿಯ ಕಿಯಾ ಸೆಲ್ಟೋಸ್ 2026 ಬಗ್ಗೆ ನಾವೀಗ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
ಕಿಯಾ ಸೆಲ್ಟೋಸ್ 2026 SUV
ಇದೀಗ ಹೊಸ ವಿನ್ಯಾಸ ಮತ್ತು ವೈಶಿಷ್ಟ್ಯಗಳಿಂದ ಮತ್ತೆ ಮಾರುಕಟ್ಟೆಗೆ ಕಾಲಿಟ್ಟಿದೆ ಕಿಯಾ ಸೆಲ್ಟೋಸ್ 2026. ಈ ಹೊಸ ಮಾದರಿಯ ಬುಕಿಂಗ್ ಡಿಸೆಂಬರ್ 11, 2025 ರಿಂದ ಆರಂಭವಾಗಿದೆ. ಇನ್ನು ಜನವರಿ 2 2026 ರಂದು ಬಿಡುಗಡೆ ಮಾಡಲಾಗುತ್ತಿದೆ. ಇನ್ನು ಜನವರಿ 15 ರಿಂದ ಡೆಲಿವರಿ ಆರಂಭವಾಗುತ್ತದೆ. ಹೊಸ KIA Seltos ಹುಂಡೈ, ಕ್ರೆಟಾ, ಟಾಟಾ ಸಿಯೆರಾಗಳಿಗೆ ನೇರವಾಗಿ ಪೈಪೋಟಿ ನೀಡುತ್ತದೆ.
New Kia Seltos Design
ಕಿಯಾ ಸೆಲ್ಟೋಸ್ 2026 ಹಳೆಯ ಕಿಯಾ ಸೆಲ್ಟೋಸ್ 2026 ಗಿಂತ 95 ಮೀ. ಮೀ. ಉದ್ದವಾಗಿದೆ. ಹೊಸ ಕಿಯಾ ಸೆಲ್ಟೋಸ್ 4460 ಮೀ. ಮೀ. ಉದ್ದ, 1830 ಮೀ. ಮೀ. ಅಗಲ, 1635 ಮೀ. ಮೀ. ಎತ್ತರವನ್ನು ಪಡೆದುಕೊಂಡಿದೆ. ಹಾಗೆ ಕಿಯಾ ಕಾರುಗಳ ಗ್ಲೋಬಲ್ ಟೈಗರ್ ನೋಸ್ ಗ್ರಿಲ್ (Kia ಕಾರುಗಳ ವಿನ್ಯಾಸದ ಒಂದು ಪ್ರಮುಖ ಭಾಗ), LED DRL ಗಳು, ಪ್ರೊಜೆಕ್ಟರ್ ಹೆಡ್ ಲಾಂಪ್ ಮತ್ತು ಸ್ಟಾರ್ ಮ್ಯಾಪ್ ಟೈಲ್ ಲ್ಯಾಂಪ್ ಗಳನ್ನೂ ಅಳವಡಿಸಲಾಗಿದೆ. ಮತ್ತು ಸೈಡ್ ನಲ್ಲಿ 18 ಇಂಚ್ ಅಲಾಯ್ ವೀಲ್ ಗಳು, ಆಟೋ ಡೋರ್ ಹ್ಯಾಂಡಲ್ ಗಳು ಇದೆ.
KIA Seltos ಒಳಾಂಗಣ ಸೌಕರ್ಯಗಳು
ಕಿಯಾ ಸೆಲ್ಟೋಸ್ 2026 ನಲ್ಲಿ 10.25 inch instrument cluster and infotainment, leatherette seats, ambient lighting, new steering wheel with drive mode button ಗಳನ್ನೂ ಅಳವಡಿಸಲಾಗಿದೆ, ಇನ್ನು ರಿಯರ್ ಸೀಟ್ ಹೆಚ್ಚು ಸ್ಪೇಸ್ ನೀಡುತ್ತದೆ. ಹಾಗೆ ಇದು ಕುಟುಂಬ ಪ್ರಯಾಣಕ್ಕೆ ಉತ್ತಮವಾಗಿದೆ.
KIA Seltos ಇಂಜಿನ್ ಸಾಮರ್ಥ್ಯ
ಕಿಯಾ ಸೆಲ್ಟೋಸ್ 2026 ನಲ್ಲಿ 3 ಎಂಜಿನ್ ಆಯ್ಕೆಯನ್ನು ನೀಡಲಾಗಿದೆ. Naturally Aspirated Petrol (115 PS, 144 Nm), Turbo Petrol (160 PS, 253 Nm), Diesel (116 PS, 250 Nm). ಇನ್ನು ಮ್ಯಾನುಯಲ್, iMT, CVT, ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ KIA ಕಾರಿನಲ್ಲಿ ಕಾಣಬಹುದು. ಕಿಯಾ ಸೆಲ್ಟೋಸ್ 2026 ಪೆಟ್ರೋಲ್ ಮಾದರಿಯಲ್ಲಿ 17 ಕಿಲೋಮೀಟರ್ ಮೈಲೇಜ್ ಮತ್ತು ಡಿಸೇಲ್ ಮಾದರಿಯಲ್ಲಿ 20.7 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.
ಹೊಸ KIA Seltos ಸುರಕ್ಷತೆ
ಕಿಯಾ ಸೆಲ್ಟೋಸ್ 2026 ನಲ್ಲಿ ಸುರಕ್ಷತೆಗಾಗಿ 6 ಏರ್ ಬ್ಯಾಗ್, 360 ಡಿಗ್ರಿ ಕ್ಯಾಮರಾ, ಇಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಟೈರ್ ಪ್ರೆಶರ್ ಮಾನಿಟರಿಂಗ್, ಲೆವೆಲ್ 2 ADAS ಅನ್ನು ಅಳವಡಿಸಲಾಗಿದೆ.
ಹೊಸ KIA seltos ಕಾರಿನ ಬೆಲೆ
ಕಿಯಾ ಸೆಲ್ಟೋಸ್ 2026 ನ ಆರಂಭಿಕ ಬೆಲೆ ಸುಮಾರು 10.99 ಲಕ್ಷದಿಂದ 20.80 ಲಕ್ಷದ ವರೆಗೆ ಇರಬಹುದು. ಇನ್ನು 10 ವಿವಿಧ ಬಣ್ಣಗಳಲ್ಲಿ (Morning Haze, Magma Red, Imperial Blue, Gravity Grey, Aurora Black Pearl, etc) ಕಿಯಾ ಸೆಲ್ಟೋಸ್ 2026 ಲಭ್ಯವಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

