Seltos 2023: ಹೊಸ ಕಿಯಾ Seltos ಮೈಲೇಜ್ ಕಂಡು ಜನರು ಫಿದಾ, ಕಡಿಮೆ ಬೆಲೆಗೆ ಐಷಾರಾಮಿ ಕಾರ್ ಫೀಚರ್.
ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ಕಾರಿನ ಬೆಲೆ ಹಾಗೂ ಮೈಲೇಜ್ ಬಗ್ಗೆ ಮಾಹಿತಿ ತಿಳಿಯಿರಿ.
Kia Seltos 2023 Mileage: ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹೊಸ ಕಾರುಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಇತ್ತೀಚಿಗಂತೂ ವಿವಿಧ ಮಾದರಿಯ ಕಾರುಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬಿಡುಗಡೆಯಾಗಿದೆ. ಇದೀಗ ಕಿಯಾ ಕಂಪನಿಯ ಕಾರಿನ ಬಗ್ಗೆ ಚರ್ಚೆ ಆಗುತ್ತಿದೆ. ಕಿಯಾ (Kia) ಕಂಪನಿ ಇತ್ತೀಚಿಗೆ ಹೊಸ ಮಾದರಿಯ ಕಾರು ಒಂದನ್ನು ಬಿಡುಗಡೆ ಮಾಡಿದ್ದು ಸಾಕಷ್ಟು ಜನರು ಈ ಕಾರನ್ನು ಖರೀದಿಸಿದ್ದಾರೆ.
ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ಕಾರಿನ ಬೆಲೆ
ದಕ್ಷಿಣ ಕೊರಿಯಾದ ಪ್ರಮುಖ ವಾಹನ ತಯಾರಕ ಕಂಪನಿ ಕಿಯಾ ಕಾರುಗಳು ಭಾರತಕ್ಕೆ ಬಂದು ಕೆಲವೇ ವರ್ಷಗಳಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದಿದೆ. ಇತ್ತೀಚಿಗೆ ಕಂಪನಿಯು ಸೆಲ್ಟೋಸ್ ಫೇಸ್ ಲಿಫ್ಟ್ ಅನ್ನು ರೂಪಾಯಿ 10.89 ಲಕ್ಷ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ ಮತ್ತು ಟಾಪ್ ಎಂಡ್ ಬೆಲೆ ಸುಮಾರು 19 ಲಕ್ಷ ರೂಪಾಯಿ ಆಗಿದೆ.
ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ಕಾರಿನ ಮೈಲೇಜ್
ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ಕಾರಿನ HTE , HTK , HTK + ಹಾಗು HTX ರೂಪಾಂತರಗಳು 1.5 ಲೀಟರ್ ಪಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ. ಈ ಕಾರು 133 bhp ಪವರ್ ಹಾಗು 144 nm ಪೀಕ್ ಟಾರ್ಕ್ ಉತ್ಪಾದಿಸುತ್ತವೆ. ಮ್ಯಾನುವಲ್ ಟ್ರಾನ್ಸ್ಮಿಷನ್ ಹೊಂದಿರುವ ಕಾರುಗಳು 17 kmpl , CVT ಗೇರ್ ಬಾಕ್ಸ್ ಪಡೆದಿರುವ ಕಾರುಗಳು 17.7 Kmpl ಮೈಲೇಜ್ ನೀಡುತ್ತವೆ.
ಕಿಯಾ ಸೆಲ್ಟೋಸ್ ಎಸ್ ಯು ವಿಯ ರೂಪಾಂತರಗಳು
ಈ ಎಸ್ ಯು ವಿಯ HTK , HTK + , HTX + GTX + ಮತ್ತು X – ಲೈನ್ ರೂಪಾಂತರಗಳು 1.5 ಲೀಟರ್ GDi ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದೆ. ಈ ಕಾರು 158 bhp ಗರಿಷ್ಠ ಪವರ್ 253 nm ಪೀಕ್ ಟಾರ್ಕ್ ಹೊರಹಾಕುತ್ತವೆ. 6 ಸ್ಪೀಡ್ ಕ್ಲಚ್ ಲೆಸ್ ಮ್ಯಾನುವಲ್, 7 ಸ್ಪೀಡ್ DCT ಗೇರ್ ಬಾಕ್ಸ್ ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 17.7 Kmpl ರಿಂದ 17.9 kmpl ಮೈಲೇಜ್ ನೀಡುತ್ತದೆ.
ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ಎಸ್ ಯು ವಿಯ ಎಲ್ಲ ರೂಪಾಂತರಗಳು 1 .5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. 114 bhp ಗರಿಷ್ಠ ಪವರ್ ಹಾಗು 250 nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮಥ್ಯ ಪಡೆದಿದೆ.
6 ಸ್ಪೀಡ್ iMT ಅಥವಾ 6 ಸ್ಪೀಡ್ AT ಗೇರ್ ಬಾಕ್ಸ್ ಹೊಂದಿದೆ. iMT ಗೇರ್ ಬಾಕ್ಸ್ ಇರುವ ಕಾರುಗಳು 20 .7 Kmpl , AT ಆಯ್ಕೆಯನ್ನು ಹೊಂದಿರುವವ ಕಾರುಗಳು 19.1 Kmpl ಮೈಲೇಜ್ ನೀಡುತ್ತದೆ.