Kia Mileage Car: ಸಂಕಷ್ಟಕ್ಕೆ ಸಿಲುಕಿಕೊಂಡ ಸ್ವಿಫ್ಟ್, ಅಗ್ಗದ ಬೆಲೆ 20 Km ಮೈಲೇಜ್ ಕೊಡುವ ಈ ಕಿಯಾ ಕಾರಿಗೆ ಹೆಚ್ಚಾಗಿದೆ ಬೇಡಿಕೆ
ಸ್ವಿಫ್ಟ್ ಕಾರಿಗೆ ಪೈಪೋಟಿ ಕೊಡಲು ಕಡಿಮೆ ಬೆಲೆಗೆ 20 Km ಮೈಲೇಜ್ ಕೊಡುವ ಕಿಯಾ ಕಾರ್ ಲಾಂಚ್
Kia Sonet 2024 Price And Mileage: ಕಿಯಾ (Kia) ಕಂಪನಿಯ ಹೊಸ ಕಾರು ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಈ ಹೊಸ ಕಾರು ಇತರ ಕಾರುಗಳಿಗೆ ಪೈಪೋರ್ಟಿ ನೀಡುವಲ್ಲಿ ಯಾವುದೇ ಅನುಮಾನವಿಲ್ಲ. ಕಿಯಾದ ಹೊಸ ಕಾರಿನ ಹೆಸರು ಕಿಯಾ ಸೊನೆಟ್ (Kia Sonet) ಫೇಸ್‌ಲಿಫ್ಟ್ ಆಗಿದ್ದು, ಈ ಕಾರು ಇದೆ ತಿಂಗಳ ಕೊನೆಗೆ ಬಿಡುಗಡೆ ಆಗುತ್ತಿದ್ದು, ಬಿಡುಗಡೆಗೂ ಮುನ್ನ ಹೊಸ ಕಾರಿನ ಅಧಿಕೃತ ಇಂಧನ ದಕ್ಷತೆಯ ಮಾಹಿತಿಯನ್ನು ಹಂಚಿಕೊಂಡಿದೆ. ಈ ಹೊಸ ಕಿಯಾ ಸೊನೆಟ್ ಕಾರು ಬಹಳ ಕಡಿಮೆ ಬೆಲೆಗೆ, ಉತ್ತಮ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಕಿಯಾ ಸೊನೆಟ್ ಫೇಸ್‌ಲಿಫ್ಟ್ ಕಾರಿನ ವಿಶಿಷ್ಟತೆಗಳು
ಕಿಯಾ ಸೊನೆಟ್ ಫೇಸ್‌ಲಿಫ್ಟ್ ಕಾರಿನಲ್ಲಿ ಟಾಪ್ ಎಂಡ್ ವೆರಿಯೆಂಟ್ ಗಳಲ್ಲಿ ಹೆಚ್ಚುವರಿಯಾಗಿ ಕೂಲ್ಡ್ ಫ್ರಂಟ್ ಸೀಟ್ ಗಳು, ಬಾಷ್ ಆಡಿಯೋ ಸಿಸ್ಟಂ, ಸನ್ ರೂಫ್, ಎಲ್‌ಇಡಿ ಆಯಂಬಿಯೆಂಟ್ ಲೈಟಿಂಗ್ಸ್ ಮತ್ತು ಡ್ಯುಯಲ್ ಕಲರ್ ಇಂಟಿರಿಯರ್ ನೀಡಲಾಗಿದೆ. ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಮೊದಲ ಬಾರಿಗೆ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ನೀಡಲಾಗಿದ್ದು, ಇದು ಸೆನ್ಸಾರ್ ಮತ್ತು ರಡಾರ್ ಸೌಲಭ್ಯಗಳೊಂದಿಗೆ ಸಂಭಾವ್ಯ ಅಪಘಾತಗಳನ್ನು ತಡೆಯಲು ಸಾಕಷ್ಟು ಸಹಕಾರಿಯಾಗಿದೆ.
ಹೊಸ ಎಡಿಎಎಸ್ ಸೌಲಭ್ಯವನ್ನು ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈ ವೆನ್ಯೂನಲ್ಲೂ ಈಗಾಗಲೇ ನೀಡಲಾಗಿದ್ದು, ಎಡಿಎಎಸ್ ಪ್ಯಾಕೇಜ್ ನಲ್ಲಿ ಫಾರ್ವಡ್ ಕೂಲಿಷನ್ ವಾರ್ನಿಂಗ್, ಲೇನ್ ಡಿಪಾರ್ಚರ್ ವಾರ್ನಿಂಗ್, ಫಾರ್ವಡ್ ಕೂಲಿಷನ್ ಅವಾಯ್ಡ್ಡೆನ್ಸ್ ಅಸಿಸ್ಟ್, ಹೈ ಬೀಮ್ ಅಸಿಸ್ಟ್, ಲೇನ್ ಕೀಪ್ ಅಸಿಸ್ಟ್ ಸೌಲಭ್ಯಗಳನ್ನು ಒಳಗೊಂಡಿದೆ.
ಎಡಿಎಎಸ್ ಜೊತೆಗೆ ಹೊಸ ಕಾರಿನಲ್ಲಿ ಈ ಬಾರಿ ಆರು ಏರ್ ಬ್ಯಾಗ್ ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಕಾರ್ನರಿಂಗ್ ಲ್ಯಾಂಪ್ಸ್, ನಾಲ್ಕು ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್ ವ್ಯೂ ಮಾನಿಟರ್ ಸೌಲಭ್ಯಗಳನ್ನು ಪಡೆದುಕೊಂಡಿದೆ.
ಕಿಯಾ ಸೊನೆಟ್ ಫೇಸ್‌ಲಿಫ್ಟ್ ಕಾರಿನ ಎಂಜಿನ್ ಸಾಮರ್ಥ್ಯ ಹಾಗು ಮೈಲೇಜ್ ಬಗ್ಗೆ ವಿವರ
ಸೊನೆಟ್ ಫೇಸ್‌ಲಿಫ್ಟ್ ನಲ್ಲಿ ಗ್ರಾಹಕರ ಆದ್ಯತೆಗೆ ಅನುಗುಣವಾಗಿ ಹಿಂದಿನ 1.2 ಲೀಟರ್ ಎನ್‌ಎ ಪೆಟ್ರೋಲ್, 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಇವು ಬಿಎಸ್ 6 2ನೇ ಹಂತದ ಮಾಲಿನ್ಯ ನಿಯಂತ್ರಣ ಮಾನದಂಡಗಳೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿವೆ.
ಹೊಸ ಕಾರಿನಲ್ಲಿರುವ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪ್ರೇರಿತ 1.2 ಲೀಟರ್ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್ ಗೆ 18.83 ಕಿ.ಮೀ ಮೈಲೇಜ್ ನೀಡಿದ್ದಲ್ಲಿ 1.0 ಲೀಟರ್ ಟರ್ಬೊ ಪೆಟ್ರೋಲ್ ಐಎಂಟಿ ಮಾದರಿಯು 18.7 ಕಿ.ಮೀ ಮತ್ತು ಡಿಸಿಟಿ ಮಾದರಿಯು 19.2 ಕಿ.ಮೀ ಮೈಲೇಜ್ ನೀಡುತ್ತದೆ. ಹೊಸ ಕಾರಿನಲ್ಲಿರುವ 1.5 ಲೀಟರ್ ಡೀಸೆಲ್ 6-ಸ್ಪೀಡ್ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್ ಗೆ 22.3 ಕಿ.ಮೀ ಮೈಲೇಜ್ ನೀಡದರೆ ಆಟೋಮ್ಯಾಟಿಕ್ ಮಾದರಿಯು 18.6 ಕಿ.ಮೀ ಮೈಲೇಜ್ ನೀಡಲಿದೆ.
ಕಿಯಾ ಸೊನೆಟ್ ಫೇಸ್‌ಲಿಫ್ಟ್ ಕಾರಿನ ಬೆಲೆ
ಕಿಯಾ ಸೊನೆಟ್ ಫೇಸ್‌ಲಿಫ್ಟ್ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 8.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 15.50 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ ಎಂದು ಕಂಪನಿ ಹೇಳಿದೆ. ಹಲವು ಹಣಕಾಸು ಕಂಪನಿಗಳ ಸಹಾಯದ ಮೂಲಕ ಕಡಿಮೆ EMI ಮೂಲಕ ಕೂಡ ಕಾರ್ ಖರೀದಿ ಮಾಡಬಹುದಾಗಿದೆ.