Sudeep About Pathaan: ನಾನು ಪಠಾಣ್ ಚಿತ್ರ ನೋಡಿಲ್ಲ ಮತ್ತು ನನಗೆ ನಾನೆ ಸ್ಟಾರ್, ಪಠಾಣ್ ಬಗ್ಗೆ ಕಿಚ್ಚನ ಮಾತು.

Actor Kiccha Sudeep About Pathan Movie: ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ (Kiccha Sudeep) ಇದೀಗ ಸುದ್ದಿಯಲ್ಲಿದ್ದಾರೆ.

ನಟ ಕಿಚ್ಚ ಸುದೀಪ್ ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಪಠಾಣ್ ಸಿನಿಮಾದ ಬಗ್ಗೆ ಮಾತನಾಡಿದ ಹೇಳಿಕೆ ಒಂದು ವೈರಲ್ ಆಗಿದೆ.

Actor Kichcha Sudeep said in an interview that he has not yet seen the film Pathan and will see it in the coming days.
Image Credit: instagram

ಪಠಾಣ್ ಸಿನಿಮಾದ ಬಗ್ಗೆ ಮಾತಾಡಿದ ನಟ ಸುದೀಪ್
ಖಾಸಗಿ ವಾಹಿನಿಯ ಸಂವಹನದಲ್ಲಿ ಭಾಗಿಯಾಗಿದ್ದ ನಟ ಕಿಚ್ಚ ಸುದೀಪ್ ಪಠಾಣ್ (Pathaan) ಸಿನಿಮಾದ ಕುರಿತು ಮಾತನಾಡಿದ್ದಾರೆ. ಅಷ್ಟೇ ಅಲ್ಲ ಸ್ಟಾರ್ ಯಾರು ಎನ್ನುವ ಪ್ರಶ್ನೆಗೆ ನಟ ಸುದೀಪ್ ಉತ್ತರ ನೀಡಿದ್ದಾರೆ.

ನಟ ಸುದೀಪ್ ಅವರ ಮಾತಿಗೆ ಹಿಂದಿ ಮಂದಿ ದಂಗ್ ಆಗಿದ್ದಾರೆ ಎನ್ನಬಹುದು. ನಿರೂಪಕಿ ಒಬ್ಬರು ಕಿಚ್ಚ ಸುದೀಪ್ ಅವರಿಗೆ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ನೋಡಿದ್ದೀರಾ ಮತ್ತು ಸದ್ಯ ಅತ್ಯಂತ ದೊಡ್ಡ ಸ್ಟಾರ್ ಅಥವಾ ಶ್ರೇಷ್ಠ ನಟ ಯಾರು ಎಂದು ಭಾವಿಸುತ್ತೀರಿ ಎಂದು ಪ್ರಶ್ನೆ ಮಾಡಿದ್ದರು.

Actor Sudeep said that he is busy watching Kannada films and will watch a Pathan film in the near future.
Image Credit: instagram

ಇದಕ್ಕೆ ನಟ ಕಿಚ್ಚ ಸುದೀಪ್ ಸರಿಯಾಗಿ ತಿರುಗೇಟು ನೀಡಿದ್ದಾರೆ. ನಟ ಸುದೀಪ್ ಅವರ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Join Nadunudi News WhatsApp Group

ನನಗೆ ನಾನೇ ಸ್ಟಾರ್ ಎಂದು ಹೇಳಿಕೊಂಡ ನಟ ಕಿಚ್ಚ ಸುದೀಪ್.
ನಿರೂಪಕಿಯ ಪ್ರಶ್ನೆಯಿಂದ ಕೊಂಚ ಗರಂ ಆದ ಕಿಚ್ಚ ನಾನು ಪಠಾಣ್ ನೋಡಿಲ್ಲ, ನನಗೆ ನಾನೇ ಸ್ಟಾರ್ ಎಂದು ಹೇಳಿದರು.

Sudeep is the actor who told me that I am a star after seeing the film Pathan
Image Credit: instagram

ಮೇಡಂ ನಾನು ಸ್ಟಾರ್ ಆಗಿ ನಾನು ನಾನೇ ದೊಡ್ಡ ಸ್ಟಾರ್ ಎಂದು ಹೇಳುತ್ತೀನಿ. ನನ್ನ ಬಗ್ಗೆ ನಾನು ಏಕೆ ಹೇಳಬಾರದು. ನಾನು ನನ್ನ ಜೀವನದ ಸ್ಟಾರ್ ಮತ್ತು ನಾನು ಇತರ ನಟರನ್ನು ಗೌರವಿಸುತ್ತೇನೆ ಎಂದು ಹೇಳಿದರು.

ತನ್ನನ್ನು ತಾನು ಕಿಚ್ಚ ಯಾವತ್ತೂ ಸ್ಟಾರ್ ಅಲ್ಲ, ಗ್ರೇಟ್ ಅಲ್ಲ ಎಂದು ಹೇಳಿಕೊಂಡಿಲ್ಲ. ಸಂವಾದದಲ್ಲೂ ಕೂಡ ಕಿಚ್ಚ ತನ್ನನ್ನು ತಾನು ಹೊಗಳಿಕೊಂಡರು.

Actor Kichcha Sudeep spoke about the film Shah Rukh Pathan
Image Credit: instagram

ಪಠಾಣ್ ಸಿನಿಮಾ ನೋಡಿದ್ದೀರಾ ಎಂದು ಕಿಚ್ಚನ ಬಳಿ ಕೇಳಿದ್ದಕ್ಕೆ ನಾನು ಇನ್ನು ಪಠಾಣ್ ನೋಡಿಲ್ಲ. ಆದರೆ ಸದ್ಯದಲ್ಲಿಯೇ ನೋಡುತ್ತೇನೆ. ನಾನು ಕನ್ನಡ ಸಿನಿಮಾ ನೋಡುವುದರಲ್ಲೇ ಬ್ಯುಸಿಯಾಗಿದ್ದೀನಿ. ಕನ್ನಡದಲ್ಲಿ ದೊಡ್ಡ ಪಟ್ಟಿಯೇ ಇದೆ. ಅದನ್ನೆಲ್ಲವನ್ನು ಮುಗಿಸಿ ಪಠಾಣ್‌ ನೋಡುತ್ತೇನೆ ಎಂದು ಹೇಳಿದರು. ಕಿಚ್ಚನ ಈ ಮಾತಿಗೆ ಕನ್ನಡಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Join Nadunudi News WhatsApp Group