Kiccha Sudeep: ಕಿಚ್ಚ ಸುದೀಪ್ ಫೋಟೋ ಹಂಚಿಕೊಂಡು ಹೊಗಳಿದ ಕ್ರಿಕೆಟಿಗ ಪ್ರಥ್ವಿ ಶಾ.
ಸಾಮಾಜಿಕ ಜಾಲತಾಣದಲ್ಲಿ ನಟ ಕಿಚ್ಚ ಸುದೀಪ್ ಜೊತೆಗಿನ ಫೋಟೋ ಹಂಚಿಕೊಂಡ ಕ್ರಿಕೆಟಿಗ ಪ್ರಥ್ವಿ ಶಾ.
Kiccha Sudeep And Prithvi Shaw: ಸಿನಿಮಾ ನಟ ನಟಿಯರಿಗೂ ಹಾಗು ಕ್ರಿಕೆಟ್ ಆಟಗಾರರರಿಗೂ ಹಿಂದಿನಿಂದಲೂ ಉತ್ತಮವಾದ ಸಂಬಂಧವಿದೆ ಸಿನಿಮಾ ನಟರು ಕ್ರಿಕೆಟ್ ಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸುವುದು ಹಾಗು ಸಿನಿಮಾಗಳ ಟ್ರೈಲರ್ ಲಾಂಚ್ ಹಾಗು ಸೆಲಬ್ರೆಟಿ ಪ್ರೀಮಿಯರ್ ಶೋ ಗಳಿಗೆ ಬಂದು ಸಿನಿಮಾ ವೀಕ್ಷಿಸುವುದು ಕಾಮನ್ ಆಗಿಬಿಟ್ಟಿದೆ.
ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್
ನಟ ಕಿಚ್ಚ ಸುದೀಪ್ ಅವರು ಸ್ಟಾರ್ ಕ್ರಿಕೆಟಿಗರ ಜೊತೆ ಉತ್ತಮ ಸ್ನೇಹ ಬಾಂಧವ್ಯವನ್ನು ಹೊಂದಿದ್ದಾರೆ ಹಾಗು ಹೆಚ್ಚು ಕ್ರಿಕೆಟಿಗರ ಪರಿಚಯ ಇರುವುದು ಕಿಚ್ಚ ಸುದೀಪ್ ಅವರಿಗೆ ಮಾತ್ರ ಎಂದೇ ಹೇಳಬಹುದು. ಕನ್ನಡ ಚಿತ್ರರಂಗದಲ್ಲಿ ಕ್ರಿಕೆಟ್ ಕ್ರೇಜ್ ಅನ್ನು ಹೆಚ್ಚಿಸಿ ಕನ್ನಡ ಚಲನಚಿತ್ರ ಕಪ್ ಸೇರಿದಂತೆ ಕೆಲವು ಸೆಲೆಬ್ರೆಟಿ ಕ್ರಿಕೆಟ್ ಟೂರ್ನಿಗಳು ನಡೆದಿವೆ ಎಂದರೆ ಅದಕ್ಕೆ ಸುದೀಪ್ ಬಹುಮುಖ್ಯ ಕಾರಣ ಎಂದರೆ ತಪ್ಪಾಗುವುದಿಲ್ಲ.
ಕಿಚ್ಚ ಸುದೀಪ್ ಫೋಟೋ ಹಂಚಿಕೊಂಡ ಕ್ರಿಕೆಟಿಗ ಪ್ರಥ್ವಿ ಶಾ
ಸ್ಟಾರ್ ಕ್ರಿಕೆಟಿಗರ ಜೊತೆ ಉತ್ತಮ ಒಡನಾಟ ಹೊಂದಿರುವ ಕಿಚ್ಚ ಸುದೀಪ್ ಎಂದರೆ ಕ್ರಿಕೆಟಿಗರಿಗೂ ಸಹ ಅಷ್ಟೇ ಪ್ರೀತಿ ಇದೆ. ಬೆಂಗಳೂರಿಗೆ ಭೇಟಿ ನೀಡಿದಾಗೆಲ್ಲ ಅನೇಕ ಕ್ರಿಕೆಟಿಗರು ಸುದೀಪ್ ಮನೆಗೆ ಭೇಟಿ ನೀಡಿ ಭೋಜನ ಸವಿದು ಒಳ್ಳೆಯ ಸಮಯ ಕಳೆದು ನಂತರ ಅದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಅದೇ ರೀತಿ ಇದೀಗ ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ಯುವ ಕ್ರಿಕೆಟಿಗ ಪ್ರಥ್ವಿ ಶಾ ಸಹ ಸಾಮಾಜಿಕ ಜಾಲತಾಣದಲ್ಲಿ ನಟ ಕಿಚ್ಚ ಸುದೀಪ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಬೆಂಗಳೂರಿಗೆ ಭೇಟಿ ನೀಡಿರುವ ಪ್ರಥ್ವಿ ಶಾ ದ ಅಲ್ಟಿಮೇಟ್ ಬಾಸ್, ಕಿಚ್ಚ ಬಾಸ್ ಕಿಚ್ಚ ಬಾಸ್, ಪ್ರೀತಿಯ ಮನುಜ. ಇವರನ್ನು ಭೇಟಿ ಮಾಡುವುದು ಹಾಗು ಒಟ್ಟಿಗೆ ಸಮಯ ಕಳೆಯುವುದು ಯಾವಾಗಲೂ ವಿಶೇಷ ಎಂದು ಬರೆದುಕೊಂಡಿದ್ದಾರೆ.
ಇನ್ನು ಪ್ರಥ್ವಿ ಶಾ ಅವರ ಈ ಪೋಸ್ಟ್ ನೋಡಿದ ಕಿಚ್ಚ ಸುದೀಪ್ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಗೆ ಕಾಮೆಂಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಈ ಪೋಸ್ಟ್ ನ ಸ್ಕ್ರೀನ್ ಶಾಟ್ ತೆಗೆದು ಫೇಸ್ ಬುಕ್ ಹಾಗು ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಇದು ನಮ್ಮ ನಟನ ರೇಂಜ್ ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.