Ads By Google

5 ವರ್ಷ ಪ್ರೀತಿಸಿ ಮದುವೆಯಾದರು ಕಿಚ್ಚ ಸುದೀಪ್ ಡೈವೋರ್ಸ್ ಕೊಡಲು ಮುಂದಾಗಿದ್ದು ಯಾಕೆ, ನಿಜಕ್ಕೂ ಆಗಿದ್ದೇನು ನೋಡಿ.

Kiccha sudeep news
Ads By Google

ನಟ ಸುದೀಪ್ ಕನ್ನಡ ಚಿತ್ರರಂಗ ಖ್ಯಾತ ನಟರಲ್ಲಿ ಒಬ್ಬರು. ಹಲವು ಭಾಷೆಯ ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟ ಕಿಚ್ಚ ಸುದೀಪ್ ಅವರಿಗೆ ಬರಿ ಕರ್ನಾಟಕ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಅಪಾರವಾದ ಅಭಿಮಾನಿ ಬಳಗ ಇದೆ ಎಂದು ಹೇಳಬಹುದು. ಇನ್ನು ಸ್ಟಾರ್ ನಟ ನಟಿಯರು ಯಾವುದೇ ಕೆಲಸ ಮಾಡಿದರು ಅದೂ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಾಗುತ್ತದೆ. ಇನ್ನು ಅದೇ ರೀತಿಯಲ್ಲಿ ಕೆಲವು ಸಮಯದ ಹಿಂದೆ ನಟ ಸುದೀಪ್ ಅವರ ದಾಂಪತ್ಯ ಜೀವನದ ವಿಷಯ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿತ್ತು ಎಂದು ಹೇಳಬಹುದು. ಹೌದು ನಟ ಸುದೀಪ್ ಅವರು ಪತ್ನಿಗೆ ವಿಚ್ಛೇಧನ ಕೊಡುತ್ತಾರೆ ಅನ್ನುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಸುಮಾರು ಐದು ವರ್ಷಗಳ ಕಾಲ ಪ್ರೀತಿ ಮಾಡಿ ಮದುವೆಯಾದ ಸುದೀಪ್ ದಂಪತಿಗಳು ವಿಚ್ಛೇಧನ ಪಡೆದುಕೊಳ್ಳಲು ಮುಂದಾಗಿದ್ದು ಯಾಕೆ ಮತ್ತು ಅವರಿಬ್ಬರ ನಡುವೆ ಆಗಿದ್ದೇನು ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ನಟ ಸುದೀಪ್ ಅವರಿಗೆ ಬಹಳ ಹೆಸರು ತಂದುಕೊಟ್ಟ ಚಿತ್ರವೆಂದರೆ ಅದೂ ಸ್ಪರ್ಶ ಚಿತ್ರವೆಂದು ಹೇಳಬಹುದು. ಸ್ಪರ್ಶ ಚಿತ್ರದ ಯಶಸ್ಸಿನ ನಂತರ ಸುದೀಪ್ ಅವರು ಹುಚ್ಚ ಚಿತ್ರದಲ್ಲಿ ಬಹಳ ಚನ್ನಾಗಿ ನಟನೆಯನ್ನ ಮಾಡಿ ಸೈ ಎನಿಸಿಕೊಂಡಿದ್ದರು. ಹುಚ್ಚ ಚಿತ್ರದ ಯಶಸ್ಸಿನ ನಂತರ ಸುದೀಪ್ ಮತ್ತು ಪ್ರಿಯಾಂಕಾ ಅವರ ಪ್ರೀತಿಯ ವಿಷಯ ಮನೆಯಲ್ಲಿ ತಿಳಿಯುತ್ತದೆ.

ಇನ್ನು ಇವರಿಬ್ಬರ ಪ್ರೀತಿಗೆ ಮನೆಯವರು ಒಪ್ಪಿ ಇಬ್ಬರು ಮದುವೆಯನ್ನ ಮಾಡಿಸುತ್ತಾರೆ ಮತ್ತು ಮದುವೆಯ ಎರಡು ವರ್ಷದ ನಂತರ ಇಬ್ಬರು ಒಂದು ಹೆಣ್ಣು ಮಗು ಕೂಡ ಜನಿಸುತ್ತದೆ. ಇನ್ನು ಮದುವೆಯ ನಂತರ ಕೆಲಸದಲ್ಲಿ ತುಂಬಾ ಬ್ಯುಸಿ ಆದ ನಟ ಕಿಚ್ಚ ಸುದೀಪ್ ಅವರಿಗೆ ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನವನ್ನ ಕೊಡಲು ಸಾಧ್ಯವಾಗಲಿಲ್ಲ. ಸುದೀಪ್ ಅವರು ತಮಗೆ ಹೆಚ್ಚಿನ ಸಮಯ ಕೊಡುತ್ತಿಲ್ಲ ಮತ್ತು ಅವರು ಕೇಳಾದ ಬಹಳ ಬ್ಯುಸಿ ಆಗಿರುವುದನ್ನ ಪದೇ ಪದೇ ಸಹಿಸಿಕೊಳ್ಳುತ್ತಿದ್ದ ಪ್ರಿಯಾಂಕಾ ನಂತರ ವಿಚ್ಛೇಧನ ಕೊಡಲು ಮುಂದಾಗುತ್ತಾರೆ.

ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು. ಇನ್ನು ಇದರ ನಂತರ ಸುದೀಪ್ ಮತ್ತು ಪತ್ನಿ ಪ್ರಿಯಾಂಕಾ ಅವರು ಕೂತು ಮಗಳಿಗೋಸ್ಕರ ತಮ್ಮ ನಿರ್ಧಾರವನ್ನ ಹಿಂದಕ್ಕೆ ತೆಗೆದುಕೊಳ್ಳುತ್ತಾರೆ. ಈ ಕಾಲದಲ್ಲಿ ಒಂದು ಬಾರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೆ ಡೈವರ್ಸ್ ಆಗೋದೇ ಜಾಸ್ತಿ, ಅಂತದ್ರಲ್ಲಿ ಇವರು ಎಲ್ಲವನ್ನೂ ಮೀರಿ ಮತ್ತೆ ಒಂದಾಗಿರುವುದು ನಿಜಕ್ಕೂ ಮೆಚ್ಚಲೇಬೇಕಾದ ಸಂಗತಿ. ಸಂಸಾರದಲ್ಲಿ ಸಮಸ್ಯೆ ಬರುವುದು ಮಾಮೂಲಿ ಅದನ್ನ ಸರಿಪಡಿಸಿಕೊಳ್ಳುವುದೇ ಜೀವನ ಅನ್ನುವುದನ್ನ ಸಾಭೀತು ಮಾಡಿದರು ಸುದೀಪ್ ಮತ್ತು ಪ್ರಿಯಾಂಕಾ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field