Ads By Google

Actor Sudeep Cry: ಈ ಒಂದು ಕಾರಣಕ್ಕೆ ವೇದಿಕೆಯ ಮೇಲೆ ಕಣ್ಣೀರು ಹಾಕಿದ ಕಿಚ್ಚ, ವಿಡಿಯೋ ವೈರಲ್.

kiccha sudeep cry 1
Ads By Google

Actor Sudeep Cry: ಬಿಗ್ ಬಾಸ್ ಸೀಸನ್ 9 ಇದೀಗ ಗ್ರಾಂಡ್ ಫಿನಾಲೆ ಮುಗಿಸಿ ಸೀಸನ್ 10ರ ಅತ್ತ ಮುಖ ಮಾಡಿದೆ. ಬಿಗ್ ಬಾಸ್ ಶೋ ಅತಿ ಹೆಚ್ಚು ವೀಕ್ಷಕರನ್ನು ಪಡೆದುಕೊಂಡಿದೆ. ಬಿಗ್ ಬಾಸ್ ಅನ್ನು ನಟ ಕಿಚ್ಚ ಸುದೀಪ್ (Kiccha Sudeep) ನಿರೂಪಣೆ ಮಾಡುತ್ತಾರೆ.

ಬಿಗ್ ಬಾಸ್ ಶೋ (Bigg Boss Show) ವೀಕ್ಷಕರನ್ನು ರಂಜಿಸುತ್ತಿದ್ದ ಶೋ ಆಗಿತ್ತು. ಆದರೆ ಈಗ ಬಿಗ್ ಬಾಸ್ ಮುಗಿದಿರುವುದು ವೀಕ್ಷಕರಿಗೆ ಮನೋರಂಜನೆ ಇಲ್ಲದಂತೆ ಆಗಿದೆ. ಬಿಗ್ ಬಾಸ್ ಸೀಸನ್ 9 ಗ್ರಾಂಡ್ ಫಿನಾಲೆ ಯಲ್ಲಿ ನಟ ಸುದೀಪ್ ಅದ್ದೂರಿಯ ಡ್ರೆಸ್ ಹಾಕಿ ಮಿಂಚಿದ್ದರು, ಅಲ್ಲದೆ ತಮ್ಮ ಮಾತಿನ ಮೂಲಕ ಸ್ಪರ್ಧಿಗಳ ಭಾವುಕತೆಗೆ ಕಾರಣವಾಗಿದ್ದಾರೆ.

Image Credit: indiatvnews

ಬಿಗ್ ಬಾಸ್ ಗ್ರಾಂಡ್ ಫಿನಾಲೆಬಿಗ್ ಬಾಸ್ ಗ್ರಾಂಡ್ ಫಿನಾಲೆಯಲ್ಲಿ ಸ್ಪರ್ಧಿಗಳ ಜೊತೆ ನಟ ಸುದೀಪ್ ಕೂಡ ಭಾವುಕರಾಗಿದ್ದಾರೆ. ನಟ ಸುದೀಪ್ (Actor Sudeep) ಅವರಿಂದ ಬಿಗ್ ಬಾಸ್ ಶೋ ಗೆ ಮೆರಗು ಸಿಕ್ಕಿದೆ ಎಂದರೆ ತಪ್ಪಾಗುವುದಿಲ್ಲ. ಬಿಗ್ ಬಾಸ್ ಮೊದಲ ಸೀಸನ್ ನಿಂದಲೂ ಸುದೀಪ್ ತುಂಬಾ ಅಚ್ಚುಕಟ್ಟಾಗಿ ಈ ಶೋ ಅನ್ನು ನಡೆಸಿಕೊಡುತ್ತ ಬಂದಿದ್ದಾರೆ.

ಕೆಲವೊಮ್ಮೆ ಸ್ಪರ್ಧಿಗಳ ನಡವಳಿಕೆ ಮಿತಿ ಮೀರುವುದು ಉಂಟು. ಅನಂತಹ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರು ತುಂಬಾ ಘನತೆಯಿಂದ ಶೋ ಅನ್ನು ನಿಭಾಯಿಸಿದ್ದಾರೆ. ಡಿಸೆಂಬರ್ 31 ರಂದು ಬಿಗ್ ಬಾಸ್ ಗ್ರಾಂಡ್ ಫಿನಾಲೆ ವೇದಿಕೆಯಲ್ಲಿ ಅವರು ಕಣ್ಣೀರು ಹಾಕಿ ಭಾವುಕರಾಗಿದ್ದನ್ನು ನೋಡಿ ಕೆಲವರಿಗೆ ಅಚ್ಚರಿ ಮೂಡಿದೆ.

Image Credit: tv9kannada

ಬಿಗ್ ಬಾಸ್ ಫಿನಾಲೆಯಲ್ಲಿ ಭಾವುಕರಾದ ನಟ ಸುದೀಪ್
ಬಿಗ್ ಬಾಸ್ ಗ್ರಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಸ್ಪರ್ಧಿ ಎಲಿಮಿನೇಟ್ ಆದಾಗ ಜರ್ನಿಯನ್ನು ಮೆಲುಕು ಹಾಕುವ ವಿಡಿಯೋ ಪ್ಲೇ ಮಾಡಲಾಗುತ್ತದೆ .

ಅದೇ ರೀತಿ, ಕೊನೆ ಸಂಚಿಕೆ ಆದ್ದರಿಂದ ಸುದೀಪ್ ಅವರ ಬೆಸ್ಟ್ ಕ್ಷಣಗಳನ್ನು ನೆನಪಿಸುವಂತಹ ವಿಡಿಯೋ ವನ್ನು ಶನಿವಾರ ಡಿಸೆಂಬರ್ 31 ರಂದು ಪ್ರಸಾರ ಮಾಡಲಾಯಿತು. ಅವರ ಬದ್ಧತೆ, ನಾಯಕತ್ವ, ನಿರೂಪಣೆಯ ಶೈಲಿ ಹಾಗೂ ಒಟ್ಟಾರೆ ವ್ಯಕ್ತಿತ್ವವನ್ನು ಅದರಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಯಿತು. ಆ ವಿಡಿಯೋ ನೋಡಿ ಸುದೀ​ಪ್​ ಎಮೋಷನಲ್​ ಆದರು.

Image Credit: voot

ಭಾವುಕರಾಗಿ ಮಾತನಾಡಿದ ನಟ ಸುದೀಪ್
ಫಿನಾಲೆ ಮಧ್ಯೆ ಈ ರೀತಿ ವಿಡಿಯೋ ಪ್ರದರ್ಶನ ಆಗಿದ್ದು ನೋಡಿ ಸುದೀಪ್ ಅವರು ಭಾವುಕರಾಗಿ ಕಣ್ಣೀರು ಸುರಿಸಿದರು. ಈ ಅಪರೂಪದ ಕ್ಷಣಕ್ಕೆ ಎಲ್ಲರೂ ಸಾಕ್ಷಿಯಾದರು. ಒಂದೆರಡು ನಿಮಿಷ ಸುಧಾರಿಸಿಕೊಂಡ ಬಳಿಕ ಸುದೀಪ್ ಮಾತನಾಡಿದ್ದಾರೆ. ನನಗೆ ಈ ಸ್ಥಾನ ಕೊಟ್ಟಿದ್ದಕ್ಕೆ ಧನ್ಯವಾದಗಳು.

ಈ ವಿಡಿಯೋದಲ್ಲಿ ನನಗೆ ನಾನು ಕಾಣಿಸಲಿಲ್ಲ. ನಿಮ್ಮೆಲ್ಲರ ಪ್ರೀತಿ ಕಾಣಿಸಿತು ಎಂದು ಅವರು​ ಹೇಳಿದರು. ಈ ವಿಡಿಯೋದಲ್ಲಿ ಇದ್ದಷ್ಟು ಪರ್ಪೆಕ್ಟ್ ನಾನಲ್ಲ, ಈ ಸ್ಥಾನಕ್ಕೆ ಬಂದಾಗ ನಾನು ತುಂಬಾ ಪರ್ಪೆಕ್ಟ್ ಆಗಿರಬೇಕು, ಎಲ್ಲರೂ ಸರಿಯಾಗಿ ಇರಬೇಕು ಎಂಬ ಒತ್ತಡ ಸೃಷ್ಟಿ ಆಗುತ್ತದೆ. ಆಗ ನಾನು ಕೂಡ ನಿಮ್ಮೆಲ್ಲರ ತರ ಸಿಂಪಲ್​ ಮ್ಯಾನ್​ ಆಗಿ ಬೆಳಗ್ಗೆ ಎದ್ದೇಳಬೇಕು ಅಂತ ಆಸೆ ಆಗುತ್ತದೆ ಎಂದಿದ್ದಾರೆ ಸುದೀಪ್​.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field