Kiccha Sudeep: ಅವರಿಬ್ಬರೂ ಮಾತ್ರ ನನ್ನ ಬಾಸ್, ಸ್ಯಾಂಡಲ್ ವುಡ್ ನ ನಿಜವಾದ ಬಾಸ್ ಯಾರೆಂದು ಹೇಳಿದ ಸುದೀಪ್.

ಸ್ಯಾಂಡಲ್ ವುಡ್ ನ ನಿಜವಾದ ಬಾಸ್ ಯಾರೆಂದು ಹೇಳಿದ ಸುದೀಪ್

Kiccha Sudeep Latest Update: ಸ್ಯಾಂಡಲ್ ವುಡ್ ನ ಸ್ಟಾರ್ ನಟ Kiccha Sudeep ಅವರ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಕಿಚ್ಚ ಸುದೀಪ್ ಸುಮಾರು 3 ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳನ್ನು ಮಾಡುತ್ತ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಇನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಯುವಕರ ಹಾರ್ಟ್ ಫೆವರೇಟ್ ಎನ್ನಬಹುದು.

ಅತಿ ಹೆಚ್ಚು ಅಭಿಮಾನಿಗಳು ಹೊಂದಿರುವ ನಟರಲ್ಲಿ ಸುದೀಪ್ ಕೂಡ ಒಬ್ಬರು ಎನ್ನಬಹುದು. ಯುವಕರಿಗೆ ಸುದೀಪ್ ಸ್ಫೂರ್ತಿಯಾಗಿದ್ದಾರೆ. ಇನ್ನು ಕೋಟ್ಯಂತರ ಅಭಿಮಾನಿಗಳಿಗೆ ಸ್ಪೂರ್ತಿಯಾಗಿರುವ ಕಿಚ್ಚ ಸುದೀಪ್ ಗೆ ಯಾರು ಸ್ಪೋರ್ತಿ ಎನ್ನುವ ಬಗ್ಗೆ ನಿಮಗೆ ಗೊತ್ತಾ…? ಕಿಚ್ಚ ಸುದೀಪ್ ನೆಚ್ಚಿನ ಹೀರೊ ಯಾರು ಎನ್ನುವ ಬಗ್ಗೆ ಡಿಟೈಲ್ಸ್ ಇಲ್ಲಿದೆ.

Kiccha Sudeep Latest Update
Image Credit: India TV News

ಸ್ಯಾಂಡಲ್ ವುಡ್ ನ ನಿಜವಾದ ಬಾಸ್ ಯಾರೆಂದು ಹೇಳಿದ ಸುದೀಪ್
ಸದ್ಯದಲ್ಲೇ ‘ಗೌರಿ’ ಸಿನಿಮಾ ತೆರೆಗೆ ಬರಲಿದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಸಮರ್ಜಿತ್ ಲಂಕೇಶ್ ಸದ್ಯ ಸುದೀಪ್ ಅವರನ್ನು ಸಂದರ್ಶನ ಮಾಡಿದ್ದಾರೆ. ಈ ವೇಳೆ ಸುದೀಪ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ‘ಕಲಾ ಮಾಧ್ಯಮ’ ಯೂಟ್ಯೂಬ್ ಚಾನೆಲ್‌ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸುದೀಪ್ ಮಾತನಾಡಿದ್ದಾರೆ. ಈ ವೇಳೆ ತಮ್ಮ ಬಗ್ಗೆ ಸಾಕಷ್ಟು ಮಾಹಿತಿ ಹೇಳಿಕೊಂಡಿದ್ದಾರೆ.

‘ನೀವು ನನ್ನ ನೆಚ್ಚಿನ ಕಲಾವಿದರು, ನಿಮ್ಮ ನೆಚ್ಚಿನ ಕಲಾವಿದರು ಯಾರು….?’ ಎಂದು ಸಮರ್ಜಿತ್ ಲಂಕೇಶ್ ಪ್ರಶ್ನಿಸಿದರು. ಇದಕ್ಕೆ ಸುದೀಪ್ ಉತ್ತರ ನೀಡಿದ್ದಾರೆ. ‘ನನ್ನ ನೆಚ್ಚಿನ ಹೀರೊ ವಿಷ್ಣು ಸರ್. ಇದನ್ನು ಹಲವು ಬಾರಿ ಹೇಳಿದ್ದೇನೆ. ನನ್ನ ಜೀವನದಲ್ಲಿ ನಾನು ಇಬ್ಬರನ್ನು ಮಾತ್ರ ಬಾಸ್ ಎಂದು ಕರೆದಿದ್ದೇನೆ. ನಮ್ಮ ತಂದೆಗೆ, ನಾನು ಇಂದಿಗೂ ಅದನ್ನು ಕರೆಯುತ್ತೇನೆ. ಮತ್ತು ವಿಷ್ಣು ಸರ್ಗೆ. ವಿಷ್ಣು ಅವರ ವ್ಯಕ್ತಿತ್ವ ನನಗೆ ತುಂಬಾ ಇಷ್ಟ. ಅವರ ಗತ್ತು ನನಗೆ ತುಂಬಾ ಇಷ್ಟ. ಅವರು ಯಾವತ್ತೂ ನನ್ನ ಫೆವರೇಟ್ ಎಂದು ಸುದೀಪ್ ಉತ್ತರ ನೀಡಿದ್ದಾರೆ.

Kannada Actor Kiccha Sudeep
Image Credit: India TV News

Join Nadunudi News WhatsApp Group

Join Nadunudi News WhatsApp Group