Ads By Google

Kiccha Sudeep: ರಕ್ಷಕ್ ಬುಲೆಟ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್, ವೈರಲ್ ಆಯಿತು ಕಿಚ್ಚನ ಮಾತು

Kiccha Sudeep Warning To Rakshak Bullet

Image Source: TV9 Kannada

Ads By Google

Kiccha Sudeep Warning To Rakshak Bullet: ಬಿಗ್ ಬಾಸ್ ಸೀಸನ್ 10(Bigg Boss Kannada Season 10) ಕಾರ್ಯಕ್ರಮ ಇನ್ನೇನು ಸ್ವಲ್ಪ ದಿನದಲ್ಲೇ ಫೈನಲ್ ತಲುಪಲಿದ್ದು, ಫೈನಲಿಸ್ಟ್ ಯಾರು ಅಂತ ಕೂಡ ಈಗಾಗಲೇ ರಿವೀಲ್ ಆಗಿದೆ. ಈ ನಡುವೆ ಹಿಂದಿನ ವಾರ ಎಲ್ಲಾ ಸ್ಪರ್ಧಿಗಳು ಬಿಗ್ ಮನೆಗೆ ರೀ ಎಂಟ್ರಿ ಪಡೆದಿದ್ದು, ಫೈನಲಿಸ್ಟ್ ಸ್ಪರ್ಧಿಗಳನ್ನು ಭೇಟಿ ಮಾಡಿ ಅವರಿಗೆ ಶುಭಾಶಯ ಕೋರಿದ್ದರು.

ಈ ನಡುವೆ ರಕ್ಷಕ್ ಬುಲೆಟ್ (Rakshak Bullet) ಒಂದು ಕಿರಿಕ್ ಮಾಡಿ ಸುದೀಪ್ (Sudeep) ಕೋಪಕ್ಕೆ ಕಾರಣರಾದರು. ರಕ್ಷಕ್​ ಬುಲೆಟ್​ ಬಿಗ್ ಬಾಸ್ ಮನೆಯಲ್ಲಿ ಆರಂಭದಲ್ಲಿ ತುಸು ಹೆಚ್ಚಾಗಿಯೇ ಸದ್ದು ಮಾಡಿದ್ರು. ಅನೇಕ ಬಾರಿ ರಕ್ಷಕ್ ಪ್ರತಾಪ್ ಜೊತೆ ಜಗಳವಾಡಿದ್ದರು ಆದ್ರೆ ಈ ರೀ ಎಂಟ್ರಿ ವೇಳೆ ರಕ್ಷಕ್ ನಡೆದುಕೊಂಡ ರೀತಿ ಸರಿಯಿರಲಿಲ್ಲ. ರಕ್ಷಕ್​, ಡ್ರೋನ್ ಪ್ರತಾಪ್ ಅವರನ್ನೇ ಟಾರ್ಗೆಟ್ ಮಾಡಿ ಮಾತನಾಡಿ ಪ್ರತಾಪ್ ಗೆ ಬೇಸರ ಉಂಟು ಮಾಡಿದರು.

Image Credit: Instagram

ಪ್ರತಾಪ್ ಜೊತೆ ರುಡಾಗಿ ನಡೆದುಕೊಂಡ ರಕ್ಷಕ್

ರಕ್ಷಕ್ ಬುಲೆಟ್ ಬಿಗ್ ಮನೆಗೆ ರೀ ಎಂಟ್ರಿ ಪಡೆದ ದಿನ ರಾತ್ರಿ ಪ್ರತಾಪ್ ಮಲಗಿದ್ದಾಗ ಬಂದು ಎಬ್ಬಿಸಿ ಪ್ರತಾಪ್​ ಗೆ ವಾರ್ನಿಂಗ್ ಕೊಟ್ಟಿದ್ರು. ಅಷ್ಟೇ ಅಲ್ಲದೆ ಬೆಡ್ ಶೀಟ್ ವಿಷಯವಾಗಿ ಬಹಳ ರುಡಾಗಿ ನಡೆದುಕೊಂಡರು. ಈ ಹಿಂದೆ ಬಿಗ್ ಮನೆಯಿಂದ ಹೊರ ಬಂದಾಗಲೂ ಅನೇಕ ಸಂದರ್ಶನಗಳಲ್ಲಿ ನಾಲಿಗೆ ಹರಿಬಿಟ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುದೀಪ್ ಬಗ್ಗೆ ಮಾತಾಡಿದ ರಕ್ಷಕ್​ ಕಿಚ್ಚನ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Image Credit: Vistaranews

ರಕ್ಷಕ್ ಗೆ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್

ರಕ್ಷಕ್ ಮಾತನಾಡಿದ ಬಗ್ಗೆ ಸುದೀಪ್, ಪ್ರತಾಪ್ ಬಳಿ ಕೇಳಿ ವಿಚಾರಿಸಿದರು ಹಾಗು ರಕ್ಷಕ್​ ನಡೆದುಕೊಂಡ ರೀತಿ ಹಾಗೂ ಅವರ ಮಾತುಗಳನ್ನು ಸುದೀಪ್ ತೀವ್ರವಾಗಿ ಖಂಡಿಸಿದ್ದಾರೆ. ಆ ಕಂಟೆಸ್ಟೆಂಟ್ ಹೆಸರೇನು, ರಕ್ಷಕ್ ಅಲ್ವಾ ಬುಲೆಟ್ ಪ್ರಕಾಶ್ ಮಗ ತಾನೇ ಎಂದು ಮಾತು ಶುರುಮಾಡಿದ ಸುದೀಪ್, ಅವರಿಗೆ ವಯಸ್ಸು ಎಷ್ಟಿರಬಹುದು? 11 ಅಥವಾ 12? ಇಪ್ಪತ್ತೆರಡಾ ಎಂದ್ರು. ನಿಮ್ಮ ತಂದೆ ಬುಲೆಟ್ ಪ್ರಕಾಶ್ ಒಳ್ಳೆಯ ಹೆಸರು ಮಾಡಿದ ಕಲಾವಿದ. ಬುಲೆಟ್ ಪ್ರಕಾಶ್ ಮಗ ಎಂದು ಜನ-ಸಮಾಜ ಗೌರವ ಕೊಡ್ತಿದೆ, ಅದನ್ನು ನೀವು ದುರುಪಯೋಗ ಪಡಿಸಿಕೊಳ್ಳಬೇಡಿ ಎಂದು ಸುದೀಪ್ ವಾರ್ನಿಂಗ್ ಕೊಟ್ಟರು.

Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in