ಮನೆಯಲ್ಲಿ ಈ ಆಹಾರವನ್ನ ಸೇವನೆ ಮಾಡಿದರೆ ಕಿಡ್ನಿಕಲ್ಲು ಶಾಶ್ವತವಾಗಿ ಮಾಯವಾಗುತ್ತದೆ, ವೈದ್ಯರ ಸಲಹೆ.

ಇತ್ತೀಚಿನ ದಿನಗಳಲ್ಲಿ ಮಾನವ ಸೇವಿಸುವ ಆಹಾರಗಳು ಆತನ ಜೀವನದ ಮೇಲೆ ತೀರಾ ಕೆಟ್ಟ ಪರಿಣಾಮವನ್ನ ಬೀರುತ್ತಿದೆ ಎಂದು ಹೇಳಬಹುದು. ಹೌದು ಫಾಸ್ಟ್ ಫುಡ್ ಅನ್ನುವುದು ಮಾನವನ ಜೀವನದ ಮೇಲೆ ಕೆಟ್ಟ ಪರಿಣಾಮವನ್ನ ಬೀರುತ್ತಿದೆ. ಇನ್ನು ದೇಶದಲ್ಲಿ ಅರ್ಧಕ್ಕೂ ಹೆಚ್ಚು ಜನರು ಕಿಡ್ನಿ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯಕೀಯ ಶಾಸ್ತ್ರ ಹೇಳುತ್ತಿದೆ. ಹೌದು ಸರಿಯಾಗಿ ನೀರನ್ನ ಕುಡಿಯದೆ ಇರುವುದು ಮತ್ತು ಕೆಲವು ಆಹಾರಗಳ ಸೇವನೆಯ ಕಾರಣ ನಮ್ಮ ಕಿಡ್ನಿಯಲ್ಲಿ ಕಲ್ಲು ಬೆಳೆಯುತ್ತಿದೆ ಅನ್ನುವ ಅರಿವು ಜನರಿಗೆ ಇಲ್ಲದೆ ಜನರು ತಮ್ಮ ಜೀವಕ್ಕೆ ಆಪತ್ತನ್ನ ತಂದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು.

ಇನ್ನು ವೈದ್ಯಕೀಯ ಶಾಸ್ತ್ರ ಹೇಳುವ ಪ್ರಕಾರ, ಮನೆಯಲ್ಲಿ ಈ ಆಹಾರಗಳನ್ನ ಸೇವನೆ ಮಾಡುವುದರ ಮೂಲಕ ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಕಿಡ್ನಿ ಕಲ್ಲಿನ ಸಮಸ್ಯೆಯಿಂದ ಮುಕ್ತಿಯನ್ನ ಪಡೆಯಬಹುದಾಗಿದೆ. ಹೌದು ಈ ಆಹಾರಗಳನ್ನ ಸೇವನೆ ಮಾಡುವುದರಿಂದ ನಮ್ಮ ಕಿಡ್ನಿಯಲ್ಲಿ ಇರುವ ಕಲ್ಲುಗಳು ಕರಗಿ ಹೋಗುತ್ತದೆ ಎಂದು ವೈದ್ಯಕೀಯ ಶಾಸ್ತ್ರ ಹೇಳುತ್ತಿದೆ. ಹಾಗಾದರೆ ಯಾವಯಾವ ಆಹಾರವನ್ನ ಸೇವನೆ ಮಾಡುವುದರಿಂದ ಕಿಡ್ನಿಯಲ್ಲಿ ಇರುವ ಕಲ್ಲುಗಳು ಕರಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಆರೋಗ್ಯ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

kidney stone pain

ಇತ್ತೀಚಿಗೆ ಕಿಡ್ನಿ ಸ್ಟೋನ್ ಅನ್ನೋದು ಸಹಜವಾಗಿ ಬಿಟ್ಟಿದೆ. ಕೆಲಸದ ಒತ್ತಡ, ಸಮಯದ ಅಭಾವ ಹೀಗೆ ನಾನಾ ಕಾರಣಗಳಿಂದ ನಮ್ಮ ದೇಹದಲ್ಲಿ ಅನಾರೋಗ್ಯ ಕಾಡೋದಕ್ಕೆ ಶುರುವಾಗುತ್ತೆ. ಅದರಲ್ಲಿ ಈ ಕಿಡ್ನಿ ಸ್ಟೋನ್ ಕೂಡ ಒಂದು. ಅದಕ್ಕೆ ಒಮ್ಮೆ ವೈದ್ಯರನ್ನ ಸಂಪರ್ಕಿಸುವುದು ಉತ್ತಮ. ಅದರ ಜೊತೆಗೆ ಒಂದಿಷ್ಟು ಮನೆ ಮದ್ದು ಇಲ್ಲಿವೆ. ಸ್ನೇಹಿತರೆ ಮೊದಲಿಗೆ 5 ಕಾಡು ಬಸಲೆ ಹಾಗೂ ಜೀರಿಗೆ 1 ಚಮಚ ಜ್ಯೂಸ್ ಮಾಡಿ 7 ದಿವಸ ಕುಡಿಯಿರಿ ಪ್ರತಿನಿತ್ಯ ಹೀಗೆ ಮಾಡುವುದರಿಂದ ನಿಮ್ಮ ಕಿಡ್ನಿಕಲ್ಲು ಬಹಳ ಬೇಗ ಕರಗುತ್ತದೆ. ಇನೂನು ಎರಡನೆಯದಾಗಿ, ಕಿಡ್ನಿ ಸ್ಟೋನ್ ಆಗಿದ್ದರೆ ಕಾಡು ಬಸಲೆಸೊಪ್ಪು, ಮೂಲಂಗಿ, ಕಪ್ಪುಬೆಲ್ಲ, ಬಾಳೆದಿಂಡಿನ ರಸ ಇಷ್ಟನ್ನೂ ಸೇರಿಸಿ ಜ್ಯೂಸ್ ಮಾಡಿ ಮೂರು ದಿನ ಕುಡಿಯಿರಿ ಸಂಪೂರ್ಣ ಕರಗಿಸುತ್ತೆ.

ಮೂರನೆಯದಾಗಿ, ಬಾಳೆ ದಿಂಡಿನ ರಸ, ಬಾಳೆ ದಿಂಡಿನ ಪಲ್ಯ, ಕ್ಯಾಸಿವೆ ದಂಟಿನ ಮೋಸಪ್ಪು, ಸೂರ್ಯನ ಗೆಡ್ಡೆ ಚಂಟ್ನಿ ಉಪಯೋಗಿಸಿ ಒಂದು ವಾರ ಮೊದಲು ಹಾಸ್ಪಿಟಲ್ ಹೋಗಿ ನೋವಿಗೆ ಚುಚ್ಚು ಮದ್ದು ಮಾಡಿಸಿ ನಂತರ ಈ ಪ್ರಯೋಗ ಮಾಡಿ. ಹೀಗೆ ಮಾಡುವುದರಿಂದ ಕಿಡ್ನಿ ಕಲ್ಲಿನ ಸಮಸ್ಯೆಯಿಂದ ಮುಕ್ತಿ ಪಡೆಯಯಬಹುದು. ನಾಲ್ಕನೆಯದಾಗಿ, ಕೊತ್ತಂಬರಿ ಸೊಪ್ಪಿನ ಜೂಸ್ ದಿನ 1 ಲೀಟರ್ ಕುಡಿಯುವುದರಿಂದ ಕಿಡ್ನಿ ಕಲ್ಲಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಐದನೆಯದಾಗಿ, ನೆಲ ನೆಲ್ಲಿ ಮತ್ತು ನೆಗ್ಗಿನ ಮುಳ್ಳು ಕಷಾಯ ಮಾಡಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಕಿಡ್ನಿಕಲ್ಲು ದೂರವಾಗುತ್ತದೆ. ಹಸಿ ಮೂಲಂಗಿ ತಿನ್ನುವುದು, ನೀರು, ಎಳನೀರು, ಮಜ್ಜಿಗೆಯನ್ನ ಹೆಚ್ಚುಹೆಚ್ಚು ಕುಡಿಯುವುದರಿಂದ ಕಿಡ್ನಿ ಕಲ್ಲಿನ ಸಮಸ್ಯೆಯಿಂದ ಶಾಶ್ವತ ಮುಕ್ತಿಯನ್ನ ಪಡೆಯಬಹುದಾಗಿದೆ.

Join Nadunudi News WhatsApp Group

kidney stone pain

Join Nadunudi News WhatsApp Group