Kinetic Green Zing: ದೀಪಾವಳಿಗೆ ಅಗ್ಗದ ಬೆಲೆಗೆ ಮನೆಗೆ ತನ್ನಿ 80 Km ರೇಂಜ್ ಈ ಎಲೆಕ್ಟ್ರಿಕ್ ಸ್ಕೂಟರ್, ತೂಕ ಕೂಡ ಕಡಿಮೆ.
ಒಂದೇ ಚಾರ್ಜ್ ನಲ್ಲಿ 80 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ ಸ್ಕೂಟರ್.
Kinetic Green Zing Electric Scooter: ಭಾರತೀಯ ಮಾರುಕಟ್ಟೆಗೆ ಹೊಸ ರೀತಿಯ ಎಲೆಕ್ಟ್ರಿಕ್ ವಾಹನಗಳು ಲಗ್ಗೆ ಇಡುತ್ತಿದೆ. ಈಗಾಗಲೇ ಸಾಕಷ್ಟು ಪ್ರತಿಷ್ಠಿತ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ವಿಭಿನ್ನ ರೀತಿಯ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಿವೆ. ಇನ್ನು ಎಲೆಕ್ಟ್ರಿಕ್ ಸ್ಕೂಟರ್ ಗಳು ಕೇವಲ ಮೂರು ನಾಲ್ಕು ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗಿ ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ.
ಇದೀಗ ದೀಪಾವಳಿ ಹಬ್ಬಕ್ಕೆ ವಾಹನ ತಯಾರಕ ಕಂಪನಿಗಳು ವಾಹನ ಖರೀದಿಯ ಮೇಲೆ ಉತ್ತಮ ರಿಯಾಯಿತಿಗಳನ್ನು ಘೋಷಣೆ ಮಾಡಿವೆ. ಹೌದು Kinetic Green Zing Electric Scooter ಮೇಲೆ ದೀಪಾವಳಿ ಹಬ್ಬಕ್ಕೆ ಭರ್ಜರಿ ರಿಯಾಯಿತಿ ಘೋಷಣೆಯಾಗಿದೆ. ಈ ಸ್ಕೂಟರ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ.
Kinetic Green Zing Electric Scooter Battery Capacity
ಇದೀಗ ಕೈನೆಟಿಕ್ ಗ್ರೀನ್ ಜಿಂಗ್ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 60V, 22Ah ಬ್ಯಾಟರಿ ಪ್ಯಾಕ್ ನೊಂದಿಗೆ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಈ ಬ್ಯಾಟರಿ ಪ್ಯಾಕ್ ಅನ್ನು 250W ಶಕ್ತಿಯೊಂದಿಗೆ ಎಲೆಕ್ಟ್ರಿಕ್ ಮೋಟಾರ್ ನೊಂದಿಗೆ ಜೋಡಿಸಲಾಗಿದೆ. ಇದು ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯು BLDC ತಂತ್ರಜ್ಞಾನದ ಆಧಾರದ ಮೇಲೆ ಈ ಮೋಟರ್ ಅನ್ನು ತಯಾರಿಸಿದೆ.
Kinetic Green Zing Electric Scooter Price And Feature
ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್ಬಿ ಚಾರ್ಜಿಂಗ್ ಪೋರ್ಟ್, ಪುಶ್ ಬಟನ್ ಸ್ಟಾರ್ಟ್, ಡಿಜಿಟಲ್ ಟ್ರಿಪ್ ಮೀಟರ್, ಡಿಜಿಟಲ್ ಸ್ಪೀಡೋಮೀಟರ್ ಮತ್ತು ರಿಮೋಟ್ ಸ್ಟಾರ್ಟ್ ಸೇರಿದಂತೆ ಇನ್ನಿತರ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇನ್ನು ಚಾಲಕರ ಸುರಕ್ಷತೆಗಾಗಿ ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನೂ ಅಳವಡಿಸಲಾಗಿದೆ. ಈ ಸ್ಕೂಟರ್ ಗೆ 71,500 ರಿಂದ 84,990 ರೂ. ಗಳನ್ನೂ ನಿಗದಿಪಡಿಸಲಾಗಿದೆ.
ಒಂದೇ ಚಾರ್ಜ್ ನಲ್ಲಿ 80 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ ಸ್ಕೂಟರ್
ಕೈನೆಟಿಕ್ ಗ್ರೀನ್ ಜಿಂಗ್ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ BLDC ತಂತ್ರಜ್ಞಾನದ ಆಧಾರದ ಮೇಲೆ ಮೋಟಾರ್ ಅನ್ನು ನಿರ್ಮಿಸಲಾಗಿದೆ. ಸಾಮಾನ್ಯ ಚಾರ್ಜರ್ ನ ಸಹಾಯ ಮೂಲಕ ಈ ಸ್ಕೂಟರ್ ಅನ್ನು ಕೇವಲ 3 ಗಂಟೆಗಳಲ್ಲಿ ಚಾರ್ಜ್ ಮಾಡಿಕೊಳ್ಳಬಹುದು. ಇನ್ನು ಈ ಸ್ಕೂಟರ್ ಒಂದೇ ಚಾರ್ಜ್ ನಲ್ಲಿ 80 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿದೆ.