Keerthi: ಹೆಂಡತಿಗೆ ಡಿವೋರ್ಸ್ ಕೊಟ್ಟ ಬೆನ್ನಲ್ಲೇ ದೇವರ ಬಳಿ ಕಿರಿಕ್ ಕೀರ್ತಿ ಕೇಳಿಕೊಂಡಿದ್ದೇನು ಗೊತ್ತಾ…? ವೈರಲ್ ಆಗಿದೆ ಪೋಸ್ಟ್.
ಹೆಂಡತಿಗೆ ವಿಚ್ಛೇಧನ ನೀಡಿದ ಬೆನ್ನಲ್ಲೇ ದೇವರ ಬಳಿ ಬೇಡಿಕೆ ಇಟ್ಟ ಕಿರಿಕ್ ಕೀರ್ತಿ.
Kirik Keerthi And Arpitha Divorce: ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ (Kirik Keerthi)ಅವರು ಸಿನಿಮಾದಲ್ಲೂ ಕೂಡ ಬ್ಯುಸಿ ಆಗಿದ್ದಾರೆ. ಕಿರಿಕ್ ಕೀರ್ತಿ ಅವರು ಇದೀಗ ತಮ್ಮ ದಾಂಪತ್ಯ ಜೀವನದಲ್ಲಿ ಬಹುಮುಖ್ಯ ನಿರ್ಧಾರ ತೆಗೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇನ್ನುಮುಂದೆ ಕರಿಮಣಿ ಮಾಲೀಕ ನಾನಲ್ಲ ಎಂದು ಬರೆದುಕೊಂಡಿದ್ದರು. ಇದರ ಜೊತೆ ಕೀರ್ತಿ ಅವರು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ವೈವಾಹಿಕ ಜೀವನದಲ್ಲಿ ಬಿರುಕು ಮೂಡಿರುವ ಬಗ್ಗೆ ಸ್ಫಷ್ಟನೆ ನೀಡಿದ ಕೀರ್ತಿ
ಕೆಲ ದಿನಗಳ ಹಿಂದೆ ಕಿರಿಕ್ ಕೀರ್ತಿ ಹಾಗೂ ಅರ್ಪಿತಾ (Arpitha) ಅವರ ಬದುಕಲ್ಲಿ ಬಿರುಕು ಮೂಡಿರುವ ಸುದ್ದಿ ಹರಿದಾಡಿತ್ತು. ಆಗ ಕೇಳಿಬಂದ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದ ಕೀರ್ತಿ ಬೇಸರದಿಂದ ಮನದ ನೋವನ್ನು ಲೈವ್ ಅಲ್ಲಿ ಹಂಚಿಕೊಂಡಿದ್ದರು. ಪ್ಲೀಸ್ ನಮ್ಮನು ಬದುಕೋಕೆ ಬಿಡ್ರಪ್ಪ, ಯಾಕ ಹಿಂಗ್ ಟಾರ್ಚರ್ ಕೊಡ್ತಿರಾ ? ಎಂದಿದ್ದರು.
ಆದರೆ ಇದೀಗ ಈ ಊಹಾಪೋಹಗಳು ನಿಜವೆಂದು ಕಿರಿಕ್ ಕೀರ್ತಿಯೇ ಸ್ಪಷ್ಟನೆ ನೀಡಿದ್ದಾರೆ. ಇದೀಗ ಅಂದು ಹರಿದಾಡಿದ ಸುದ್ದಿ ನಿಜವಾಗಿದೆ ಪ್ರೀತಿಸಿ ಮದುವೆಯಾಗಿದ್ದ ಕಿರಿಕ್ ಕೀರ್ತಿ ಹಾಗೂ ಅರ್ಪಿತಾ ವಿಚ್ಛೇದನ ಪಡೆದು ಪರಸ್ಪರ ದೂರವಾಗಿದ್ದಾರೆ. ಇದರ ಬಗ್ಗೆ ಕಿರಿಕ್ ಕೀರ್ತಿ ಅವರು ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದಾರೆ.
ಅಧಿಕೃತವಾಗಿ ಇನ್ನುಮುಂದೆ ಕರಿಮಣಿ ಮಾಲೀಕ ನಾನಲ್ಲ ಎಂದ ಕಿರಿಕ್ ಕೀರ್ತಿ
ಸಕಲರಿಗೂ ಒಳ್ಳೆದಾಗಲಿ ಎಂದು ಬರೆದ ಕೀರ್ತಿ, ‘ಕಾನೂನಿನ ಪ್ರಕಾರ ಇವತ್ತು ನನ್ನ ಮತ್ತು ಅರ್ಪಿತಾ ಜೊತೆಗಿನ ಪತಿ -ಪತ್ನಿಯ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನುಮುಂದೆ ನನ್ನ ವೈಯಕ್ತಿಕ, ವ್ಯಾವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಕಾರಣ ಇಷ್ಟೇ, ಅಧಿಕೃತವಾಗಿ ಇನ್ನುಮುಂದೆ ಕರಿಮಣಿ ಮಾಲೀಕ ನಾನಲ್ಲ. ಒಂದೊಳ್ಳೆ ಬದುಕು ಅವಳಿಗೂ ಸಿಗಲಿ, ಕಹಿ ನೆನಪುಗಳು ಮರೆತು ಹೊಸ ಜೀವನಕ್ಕೆ ನಾಂದಿ ಹಾಡಲಿ, ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರೆಯಲಿ’ ಎಂದು ಕೀರ್ತಿ ಬರೆದುಕೊಂಡಿದ್ದರು.
View this post on Instagram
ವಿಚ್ಛೇದನ ಪಡೆದ ನಂತರ ಕೀರ್ತಿ ಭಗವಂತನ ಬಳಿ ಬೇಡಿದ್ದೇನು?
ಕಿರಿಕ್ ಕೀರ್ತಿ ಅವರು ವಿಚ್ಛೇದನದ ನಂತರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಸಿಂಗಲ್ ಆಗಿರುವ ಫೋಟೋ ಹಂಚಿಕೊಂಡು, ‘ಮೊಗವ ಕೊಟ್ಟ ಭಗವಂತ ನಗುವ ಕೊಡದಿರುವನೇ ?’ ಎಂದು ದೇವರನ್ನು ಪ್ರಶ್ನಿಸುವ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಚ್ಛೇದನ ಆದ ಬಳಿಕ ಮಗನ ಜೊತೆಗಿನ ಫೋಟೋ ಅನ್ನು ಸಹ ಶೇರ್ ಮಾಡಿಕೊಂಡಿದ್ದಾರೆ.