Kirik Keerthi: ಹೆಂಡತಿಗೆ ಡೈವೋರ್ಸ್ ಕೊಟ್ಟ ಬೆನ್ನಲ್ಲೇ ಇನ್ನೊಂದು ಗುಡ್ ನ್ಯೂಸ್ ಹಂಚಿಕೊಂಡ ಕಿರಿಕ್ ಕೀರ್ತಿ, ಪೋಸ್ಟ್ ವೈರಲ್.

ಕಿರಿಕ್ ಕೀರ್ತಿ ಹೆಂಡತಿಗೆ ವಿಚ್ಛೇಧನ ನೀಡಿದ ಬೆನ್ನಲ್ಲೇ ಸಿಹಿಸುದ್ದಿ ಬಗ್ಗೆ ಮಾಅತನಾಡಿದ್ದಾರೆ.

Kirik Keerthi New Post: ಪತ್ರಕರ್ತ, ನಿರೂಪಕ, ಹಾಗೂ ಬಿಗ್ ಬಾಸ್ ಸ್ಫರ್ಧಿಯಾಗಿದ್ದ ಕಿರಿಕ್ ಕೀರ್ತಿ (Kirik Keerthi) ಇದೀಗ ಭಾರಿ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಕಿರಿಕ್ ಕೀರ್ತಿ ಹಾಗೂ ಅರ್ಪಿತಾ ಅವರ ಬದುಕಲ್ಲಿ ಬಿರುಕು ಮೂಡಿರುವ ಬಗ್ಗೆ ಸುದ್ದಿ ಹರಿದಾಡಿತ್ತು. ಇದೀಗ ಕೀರ್ತಿ ಅವರೇ ಪತ್ನಿಗೆ ವಿಚ್ಛೇದನ ನೀಡಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಡಿವೋರ್ಸ್ ನಂತರ ಕೀರ್ತಿ ಅವರು ದಿನಕೊಂದು ಪೋಸ್ಟ್ ಹಾಕಿ ಅಚ್ಚರಿ ಮೂಡಿಸುತ್ತಿದ್ದಾರೆ. ಹಲವು ಸಮಯ ಸೋಶಿಯಲ್ ಮೀಡಿಯಾದಿಂದ ದೂರ ಇದಿದ್ದ ಕಿರಿಕ್ ಕೀರ್ತಿ ಅವರು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದು ಸದ್ಯ ಅವರ ಪೋಸ್ಟ್ ಸಕತ್ ವೈರಲ್ ಆಗುತ್ತಿದೆ.

Kirik Keerthi New Post
Image Credit: Instagram

ಶೀಘ್ರದಲ್ಲೇ ಗುಡ್ ನ್ಯೂಸ್ ಕೊಡ್ತಿನಿ ಎಂದ ಕೀರ್ತಿ
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ಕೀರ್ತಿ ನನ್ನ ವಯಕ್ತಿಕ ಕಾರಣಗಳಿಂದ ಎಲ್ಲರಿಂದಲೂ ದೂರವಿದ್ದೆ, ಆದರೆ ಇದೀಗ ಮತ್ತೆ ನಾನು ಆಕ್ಟಿವ್ ಆಗಿದ್ದೇನೆ ಹಾಗೆ ಶೀಘ್ರದಲ್ಲೇ ನಿಮಗೆ ಗುಡ್ ನ್ಯೂಸ್ ಕೂಡ ಕೊಡ್ತಿನಿ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.

“ಕೀರ್ತಿ ಫೋನ್ ರೀಚ್ ಆಗತಿಲ್ಲ, ಮೆಸೇಜಿಗೆ ರಿಪ್ಲೈ ಮಾಡ್ತಿಲ್ಲ, ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್ ಇಲ್ಲ, ಇದು ಕಳೆದ ಆರು ತಿಂಗಳಿನಿಂದ ಸಾಕಷ್ಟು ಜನರ ಮಾತು, ಹೌದು ನಾನು ಸಿಕ್ತಿಲ್ಲ, ನಾನು ಮಾತಾಡಿಲ್ಲ, ನನಗೆ ಕೆಲವು ದಿನ ಎಲ್ಲರಿಂದ ದೂರ ಇರಬೇಕು ಅನಿಸಿತ್ತು. ನಾನು ನನ್ನೊಡನೆ ಇದ್ದೆ. ಕಾಳಜಿಯಿಂದ ಹೇಗೋ ಕನೆಕ್ಟ್ ಆಗಿ ಸಮಾಧಾನ ಮಾಡಿದವರು ಇದ್ದಾರೆ.

ನನ್ನನು ನಂಬಿ ನನ್ನ ಮೇಲೆ ಹೂಡಿಕೆ ಮಾಡಿದವರಿಗೆ ಏನಾಗುತ್ತೋ ಅನ್ನೋ ಆತಂಕ ಇತ್ತು. ಅದಕ್ಕೆಲ್ಲ ಈಗ ಪೂರ್ಣ ವಿರಾಮ ಇನ್ನು ನಾನು ನಿಮ್ಮೊಡನೆ ಇರ್ತಿನಿ. ಹೌದು ಈ ಕೆಲ ತಿಂಗಳು ಕಷ್ಟದಲ್ಲಿದ್ದೆ. ವಯಕ್ತಿಕ ಕಾರಣಗಳು ಕೈ ಕಟ್ಟಿ ಹಾಕಿತ್ತು. ಯಾವುದರಲ್ಲೂ ಆಸಕ್ತಿ ಇಲ್ಲದ ಮನಸ್ಥಿತಿ ನಿರ್ಮಾಣ ಆಗಿತ್ತು ಈಗ ನಾನು ಎಲ್ಲದರಿಂದ ಹೊರಬಂದು ಮತ್ತೆ ಆಕ್ಟಿವ್ ಆಗಬೇಕು ಅನಂತ ಡಿಸೈಡ್ ಮಾಡಿದೀನಿ.

Join Nadunudi News WhatsApp Group

ಇನ್ನು ಮುಂದೆ ನಿಮಗೆ ನಾನು ಹೊಸ ರೂಪದಲ್ಲೇ ಕಾಣ ಸಿಗ್ತೀನಿ, ನಿಮ್ಮೆಲ್ಲರ ಆತಂಕಕ್ಕೆ ಫುಲ್ ಸ್ಟಾಪ್ ಇಡ್ತಿನಿ, ನಂಬಿದವರ ನಂಬಿಕೆ ಉಳಿಸಿಕೊಳ್ತೀನಿ. ನನಗಾಗಿ ಬೇಸರಿಸಿಕೊಂಡವರಿಗೂ, ನನ್ನಿಂದ ಬೇಸರಗೊಂಡವರಿಗೂ ಖುಷಿ ಹಂಚ್ತಿನಿ.ಕೆಲವೇ ದಿನಗಳಲ್ಲಿ ನಿಮ್ಮೊಂದಿಗೆ ಖುಷಿ ವಿಷಯ ಹಂಚಿಕೊಳ್ತೀನಿ.

ನನ್ನನು ಮನೆ ಮಗನ ಹಾಗೆ, ಸಹೋದರನ ಹಾಗೆ ಸಮಾಧಾನ ಮಾಡಿದ ನಿಮ್ಮ ಪ್ರೀತಿಗೆ ನಾನು ಋಣಿ, ಮತ್ತೆ ನನ್ನ ದಿನಗಳು ಮರಳಿ ಬರಲಿ ಅಂತ ನಿಮ್ಮದೊಂದು ಹಾರೈಕೆ ಇರಲಿ. I want to come back. ನೀವು ಜೊತೇಲಿರಿ ಅಷ್ಟು ಸಾಕು, ಧನ್ಯವಾದ”. ಎಂದು ಕಿರಿಕ್ ಕೀರ್ತಿ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

Join Nadunudi News WhatsApp Group