KCC Update: ಇಂತವರ ಕ್ರೆಡಿಟ್ ಕಾರ್ಡ್ ರದ್ದು ಮಾಡಲು ಕೇಂದ್ರ ಸರ್ಕಾರ ಆದೇಶ, ಕಿಸಾನ್ ಕ್ರೆಡಿಟ್ ಹೊಸ ರೂಲ್ಸ್.
ಇದೀಗ ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಫಲಾನುಭವಿಗಳಿಗೆ ಹೊಸ ರೂಲ್ಸ್ ಜಾರಿಗೆ ತಂದಿದೆ.
Kisan Credit Card Cancellation: ರೈತ ದೇಶದ ಬೆನ್ನೆಲುಬಾಗಿದ್ದಾನೆ. ರೈತರು ದೇಶಕ್ಕೆ ಒಂದು ರೀತಿಯ ಆಸ್ತಿ ಎಂದರೆ ತಪ್ಪಾಗಲಾರದು. ಇನ್ನು ದೇಶದ ಬಡ ನಾಗರೀಕ ಏಳಿಗೆಗಾಗಿ ಕೇಂದ್ರ ಸರ್ಕಾರ ವಿವಿಧ ಸೌಲಭ್ಯವನ್ನು ಒದಗಿಸುತ್ತದೆ. ರೈತರಿಗೆ ಆರ್ಥಿಕವಾಗಿ ನೆರವಾಗಲು ಸರ್ಕಾರ ವಿವಿಧ ಯೋಜನೆನ್ನು ಕೂಡ ರೂಪಿಸಿದೆ. ಇದೀಗ ಕೇಂದ್ರ ಸರ್ಕಾರ (Central Government) ರೈತರಿಗಾಗಿ ಮಹತ್ವದ ಮಾಹಿತಿಯನ್ನು ನೀಡಿದೆ. ರೈತರ ಭದ್ರತೆಗಾಗಿ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card)
ಇನ್ನು ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ನೀಡಲಾಗಿದೆ. ರೈತರಿಗೆ ಅವರ ಉತ್ಪಾದನಾ ಸಾಲದ ಅಗತ್ಯಗಳನ್ನು ಅಂದರೆ ಕೃಷಿ ವೆಚ್ಚಗಳನ್ನು ಪೂರೈಸಲು ಸಮರ್ಪಕ ಸಾಲವನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಒದಗಿಸುತ್ತದೆ. Kisan Credit Card ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತದೆ. ಇದೀಗ ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಫಲಾನುಭವಿಗಳಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರ ಈ ಮಾಹಿತಿ ತಿಳಿಯುವುದು ಉತ್ತಮ.
ಇಂತವರ Kisan Credit Card ರದ್ದು
ಇತ್ತೀಚಿಗೆ ಎಲ್ಲ ರೀತಿಯಲ್ಲೂ ವಂಚನೆ ಹೆಚ್ಚುತ್ತಿದೆ. ಅದರಲ್ಲೂ KCC ಫಲಾನುಭವಿಗಳು ಹೆಚ್ಚಿನ ತೊಂದರೆಯನ್ನು ಅನುಭವಿಸುವಂತಾಗಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ KCC ಯೋಜನೆಯಡಿ ವಂಚನೆಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಕಿಸಾನ್ ಕ್ರೆಡಿಟ್ ಕಾರ್ಡ್ ಇದ್ದರೆ ತಕ್ಷಣವೇ ಅಂತವರ ಕಾರ್ಡ್ ರದ್ದುಪಡಿಸುವುದಾಗಿ ಸರ್ಕಾರ ಆದೇಶ ಹೊರಡಿಸಿದೆ.
ಒಂದೇ ಹೆಸರಿನಲ್ಲಿ ಹಲವಾರು ಕೆಸಿಸಿಗಳನ್ನು ನೀಡುವ ಬಗ್ಗೆ ವರದಿಯಾದರೆ, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. RBI Rules ಪ್ರಕಾರ, ಒಬ್ಬ ರೈತನಿಗೆ ಒಂದು ಕಿಸಾನ್ ಕ್ರೆಡಿಟ್ ಕಾರ್ಡ್ಅನ್ನು ಮಾತ್ರ ನೀಡಲಾಗುತ್ತದೆ. ಒಂದಕ್ಕಿಂತ ಹೆಚ್ಚು KCC ಕಾರ್ಡ್ ಗಳಿಗೆ ಅದನ್ನು ರದ್ದುಪಡಿಸಲಾಗುತ್ತದೆ. ಇನ್ನು KCC ಕಾರ್ಡ್ ಗೆ ಆಧಾರ್ ಲಿಂಕ್ ಇರುವ ಕಾರಣ ನೀವು ಎಷ್ಟು ಕಾರ್ಡ್ ಹೊಂದಿದ್ದೀರಿ ಎನ್ನುವ ಬಗ್ಗೆ ಸುಲಭವಾಗಿ ಮಾಹಿತಿ ಪಡೆದುಕೊಳ್ಳಬಹುದು.