Govt updates: ತಿಂಗಳ ಹಣ ಬರುತ್ತಿದ್ದ ಈ ಯೋಜನೆ ಧಿಡೀರ್ ರದ್ದು, ನಿರ್ಧಾರ ಕೈಗೊಂಡ ಸರ್ಕಾರ

ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಬರುತ್ತಿದ್ದ 4 ಸಾವಿರ ರೂಪಾಯಿ ಸ್ಥಗಿತಗೊಳಿಸಲು ನಿರ್ಧಾರ ಮಾಡಿದ ಸರ್ಕಾರ.

Kisan Samman Nidhi Yojana: ದೇಶದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಸಾಕಷ್ಟು ಸೌಲಭ್ಯವನ್ನು ಪಡೆಯುತ್ತಿದ್ದಾರೆ. ದೇಶದಲ್ಲಿ ಪಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದಂತೆ ವಾರ್ಷಿಕ 6 ಸಾವಿರ ರೂಪಾಯಿ ನೀಡಿದರೆ ಕರ್ನಾಟಕ ಸರ್ಕಾರವು ರಾಜ್ಯದ ಅರ್ಹ ಫಲಾನುಭವಿಗಳಿಗೆ ವಾರ್ಷಿಕ ತಲಾ 4,000 ರೂಪಾಯಿ ಧನ ನೀಡುತ್ತಿದೆ.

ಇದೀಗ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದ್ದು, ಈ ಹಿಂದಿನ ಬಿಜೆಪಿ ಸರ್ಕಾರ ನೀಡುತ್ತಿದ್ದ ವಾರ್ಷಿಕ ತಲಾ 4 ಸಾವಿರ ರೂಪಾಯಿ ಹಣ ನೀಡುವ ಕೃಷಿ ಸಮ್ಮಾನ್ ಯೋಜನೆ ಸ್ಥಗಿತಗೊಳಿಸಸುವ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ.

The government has decided to stop the 4 thousand rupees coming to the farmers under the Kisan Samman scheme.
Image Credit: Prabhatkhabar

ಕೃಷಿ ಸಮ್ಮಾನ್ ಯೋಜನೆ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ
ವಿಧಾನಸಭಾ ಅಧಿವೇಶನದಲ್ಲಿ ಇದೆ ಮಂಗಳವಾರ ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು ಕೃಷಿ ಸಮ್ಮಾನ್ ಯೋಜನೆ ನಿಲ್ಲಿಸಿದ್ದೀರೋ ಇಲ್ಲವೋ ಎಂದು ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷಿ ಭಾಗ್ಯ ಯೋಜನೆಯನ್ನು ಬಿಜೆಪಿ ಅವರು ಬಂದು ನಿಲ್ಲಿಸಿಬಿಟ್ಟಿದ್ದರು. ಈಗ ನಾವು ಬಂದು ಮತ್ತೆ ಅದನ್ನೇ ಮುಂದುವರೆಸಿದ್ದೇವೆ ಎಂದು ಹೇಳಿದ್ದಾರೆ.

ಈ ವೇಳೆ ಪುನಃ ಕೃಷಿ ಸಮ್ಮಾನ್ ಬಗ್ಗೆ ಹೇಳಿ ಎಂದು ಶಾಸಕ ಸುನೀಲ್ ಕುಮಾರ್ ಸಿಎಂ ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು ಮತ್ತೆ ಇದು ಬೇಕೋ ಬೇಡವೋ, ಕೃಷಿ ಸಮ್ಮಾನ್ ಯೋಜನೆಯನ್ನು ನೀವು ರಾಜ್ಯದಲ್ಲಿರುವ 87 ಲಕ್ಷ ರೈತರಲ್ಲಿ, ಕೇವಲ 51 ಲಕ್ಚ ರೈತರಿಗೆ ಮಾತ್ರ ಕೊಟ್ಟಿದ್ದೀರಿ. ಆದರೆ ಕೃಷಿ ಸಮ್ಮಾನ್ ಯೋಜನೆ ಎಲ್ಲರಿಗೂ ಕೊಟ್ಟಿಲ್ಲ. ಹೀಗಾಗಿ ನಾವು ಬೇರೆ ಕಾರ್ಯಕ್ರಮ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

The government has decided to stop the 4 thousand rupees coming to the farmers under the Kisan Samman scheme.
Image Credit: Businesstoday

ಕೃಷಿ ಸಮ್ಮಾನ್ ಯೋಜನೆ ಸ್ಥಗಿತ
ರಾಜ್ಯದಲ್ಲಿ ಒಟ್ಟು 51 ಲಕ್ಷ ರೈತರು ವಾರ್ಷಿಕ ಕೃಷಿ ಸಮ್ಮಾನ್ ಯೋಜನೆ ಅಡಿಯಲ್ಲಿ ತಲಾ 4 ಸಾವಿರ ರೂಪಾಯಿಗಳನ್ನು ಪಡೆಯುತ್ತಿದ್ದರು. ಜೊತೆಗೆ ಕೇಂದ್ರ ಸರ್ಕಾರದಿಂದ ವಾರ್ಷಿಕ ತಲಾ 6 ಸಾವಿರ ರೂಪಾಯಿ ಸೇರಿ ಕರ್ನಾಟಕದ ರೈತರು ವಾರ್ಷಿಕ 10 ಸಾವಿರ ರೂಪಾಯಿ ಹಣವನ್ನು ಪಡೆದುಕೊಳ್ಳುತ್ತಿದ್ದರು.

Join Nadunudi News WhatsApp Group

ಒಂದು ವೇಳೆ ಈಗ ಕರ್ನಾಟಕದ ಕೃಷಿ ಸಮ್ಮಾನ್ ಯೋಜನೆ ನಿಲ್ಲಸಿದರೆ ರೈತರಿಗೆ ಸಿಗುತ್ತಿದ್ದ 4 ಸಾವಿರ ರೂ. ಹಣ ಬರುವುದು ಸ್ಥಗಿತವಾಗಲಿದೆ. ಒಟ್ಟಾರೆ ಕಾಂಗ್ರೆಸ್‌ ಕೊಟ್ಟಿರುವ ಗ್ಯಾರಂಟಿ ಯೋಜನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೃಷಿ ಸಮ್ಮಾನ್‌ ಯೋಜನೆಗೆ ಬಹುತೇಕ ಎಳ್ಳುನೀರು ಬಿಟ್ಟಂತೆ ಗೋಚರವಾಗುತ್ತಿದೆ.

Join Nadunudi News WhatsApp Group