Kisan Update: ಈ ರೈತರ ಖಾತೆಗೆ ಮಾತ್ರ ಕಿಸಾನ್ ಸಮ್ಮಾನ್ 16 ನೇ ಕಂತಿನ ಹಣ ಜಮಾ, ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ
ಕಿಸಾನ್ ಸಮ್ಮಾನ್ ಯೋಜನೆಯ 16 ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ
PM Kisan Status Check Process: ದೇಶದಲ್ಲಿ ಫೆಬ್ರವರಿ 2019 ರಂದು PM Kisan ಯೋಜನೆ ಜಾರಿಯಾಗಿರುವ ಬಗ್ಗೆ ಮಾಹಿತಿ ತಿಳಿದೇ ಇದೆ. ಈ ಯೋಜನೆಯಡಿ ಮೋದಿ ಸರ್ಕಾರ ರೈತರಿಗಾಗಿ 6 ಸಾವಿರ ಉಚಿತವಾಗಿ ಹಣ ನೀಡುತ್ತದೆ.
ನಾಲ್ಕು ತಿಂಗಳಿಗೊಮ್ಮೆ ವರ್ಷಕ್ಕೆ ಮೂರು ಬಾರಿ 2 ಸಾವಿರ ರೂಪಾಯಿಯಂತೆ 6 ಸಾವಿರ ರೂ. ರೈತರ ಖಾತೆಗೆ ಸರ್ಕಾರ ಜಮಾ ಮಾಡುತ್ತಿದೆ. ಸದ್ಯ PM Kisan ಯೋಜನೆಯ 16 ಕಂತಿನ ಹಣ ಜಮಾ ಆಗುವ ಬಗ್ಗೆ ಬಿಗ್ ಅಪ್ಡೇಟ್ ಲಭಿಸಿದೆ. PM Kisan ಫಲಾನುಭವಿಗಳು ಈ ದಿನಾಂಕದಂದು ನಿಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಿ.
ಈ ರೈತರ ಖಾತೆಗೆ ಮಾತ್ರ ಕಿಸಾನ್ ಸಮ್ಮಾನ್ 16 ನೇ ಕಂತಿನ ಹಣ ಜಮಾ
PM Kisan ಯೋಜನೆಯಡಿ ರೈತರ ಖಾತೆಗೆ ಈಗಾಗಲೇ 15 ಕಂತುಗಳ ಹಣ ಜಮಾ ಆಗಿದೆ. ಜುಲೈ ನಂತರ ನಾಲ್ಕು ತಿಂಗಳ ಬಳಿಕ ನವೆಂಬರ್ ನಲ್ಲಿ 15 ನೇ ಕಂತಿನ ಹಣ ಜಮಾ ಆಗಿದ್ದು, ಇದೀಗ 16 ಕಂತಿನ ಹಣ ಜಮಾ ಆಗುವ ಬಗ್ಗೆ ಸರ್ಕಾರ ಘೋಷಣೆ ಹೊರಡಿಸಿದೆ. ಅದರಲ್ಲೂ ಮುಂಬರುವ ಲೋಕ ಸಭಾ ಚುನಾವಣೆಗೂ ಮುನ್ನವೇ ಯೋಜನೆಯ ಫಲಾನುಭವಿಗಳಿಗೆ ಹಣ ಜಮಾ ಆಗುವಂತೆ ಮಾಡಲು ಸರ್ಕಾರ ಮುಂದಾಗಿದೆ.
ನವೆಂಬರ್ ನಿಂದ ನಾಲ್ಕು ತಿಂಗಳ ಬಳಿಕ 16 ನೇ ಕಂತಿನ ಹಣ ಜಮಾ ಆಗಲಿದೆ. ಇನ್ನು 2024 ರ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ 16 ನೇ ಕಂತಿನ ಹಣ ಬಿಡುಗಡೆಯಾಗಲಿದೆ. ರೈತರು 16 ನೇ ಕಂತಿನ ಹಣ ಪಡೆಯಲು E -KYC ಅಪ್ಡೇಟ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಇನ್ನು ಕೇಂದ್ರ ಸರ್ಕಾರ ಮುಂದಿನ ದಿನಗಲ್ಲಿ PM Kisan ಯೋಜನೆಯ ಹಣವನ್ನು ಹೆಚ್ಚಿಸುವ ಸಾಧ್ಯತೆ ಕೂಡ ಇದ್ದು, ರೈತರು ಕಿಸಾನ್ ಯೋಜನೆಯ ಅಡಿಯಲ್ಲಿ ವಾರ್ಷಿಕವಾಗಿ 8000 ರೂಪಾಯಿ ಹಣವನ್ನು ಹಣವನ್ನು ಪಡೆಯಬಹುದು.
PM Kisan ಯೋಜನೆಯ ಅರ್ಹತೆ ಪರಿಶೀಲಿಸುವ ವಿಧಾನ
*PM-Kisan pmkisan.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿನೀಡಿ ನಿಮ್ಮ ಅರ್ಹತೆಯನ್ನು ಪರಿಶೀಲಿಸಿಕೊಳ್ಳಬಹುದು.
*ಮುಖಪುಟದಲ್ಲಿ ‘Farmer’s Corner’ ಆಯ್ಕೆಮಾಡಿ.
*ಇದರ ನಂತರ ‘Beneficiary Status’ ಮೇಲೆ ಕ್ಲಿಕ್ ಮಾಡಿ
*ಇದರ ನಂತರ ನೀವು ಡ್ರಾಪ್- ಡೌನ್ ಮೆನುವಿನಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಅಥವಾ ಗ್ರಾಮವನ್ನು ಆಯ್ಕೆ ಮಾಡಬಹುದು.
*ಇದರ ನಂತರ ಸ್ಟೇಟಸ್ ತಿಳಿಯಲು ‘Get Report’ ಮೇಲೆ ಕ್ಲಿಕ್ ಮಾಡಿ ಸುಲಭವಾಗಿ PM Kisan ಯೋಜನೆಯ ಸ್ಟೇಟಸ್ ಪರಿಶೀಲಿಸಿಕೊಳ್ಳಬಹುದು.