Kisan Tractor Scheme Full Details: ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತದೆ. ಇದೀಗ ಕೇಂದ್ರ ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ Tractor, Power Tiller, Combine Harvester, Rotavator, Seed Drill ಇತ್ಯಾದಿ ಯಂತ್ರಗಳನ್ನು 50% ರಿಂದ 90% ವರೆಗೆ ಸಬ್ಸಿಡಿಯಲ್ಲಿ ನೀಡಲು ಮುಂದಾಗಿದೆ. ದೇಶದ ರೈತರಿಗಾಗಿ ಕೇಂದ್ರ ಸರ್ಕಾರ ಕಿಸಾನ್ ಟ್ರ್ಯಾಕ್ಟರ್ ಯೋಜನೆಯನ್ನು ಜಾರಿಗೆ ತಂದಿದೆ ಮತ್ತು ಈ ಯೋಜನೆಯ ಮೂಲಕ ಅರ್ಧ ಬೆಲೆಗೆ ರೈತರು ಟ್ರ್ಯಾಕ್ಟರ್ ಖರೀದಿ ಮಾಡಬಹುದು.
ಕಿಸಾನ್ ಟ್ರಾಕ್ಟರ್ ಯೋಜನೆ
ಕಿಸಾನ್ ಟ್ರ್ಯಾಕ್ಟರ್ ಯೋಜನೆ ಎಂಬುದು ಕೇಂದ್ರ ಸರ್ಕಾರದ ಕೃಷಿ ಯಾಂತ್ರೀಕರಣದ ಉಪ-ಮಿಷನ್ (SMAM) ಅಡಿಯಲ್ಲಿರುವ ಒಂದು ಉಪ ಯೋಜನೆಯಾಗಿದ್ದು, ರೈತರಿಗೆ ಟ್ರ್ಯಾಕ್ಟರ್ ಮತ್ತು ಇತರ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಆರ್ಥಿಕ ಸಹಾಯಧನವನ್ನು ನೀಡಲಾಗುತ್ತದೆ. 2014-15 ರಿಂದ ಜಾರಿಯಲ್ಲಿರುವ ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲಾಗಿದೆ.
2025 ರಲ್ಲಿ ರಾಜ್ಯವಾರು ಸಬ್ಸಿಡಿ ಪ್ರಮಾಣ
* ಕರ್ನಾಟಕದಲ್ಲಿ ಸಾಮಾನ್ಯ ರೈತರಿಗೆ 50%, SC / ST ಅಥವಾ ಮಹಿಳಾ ರೈತರಿಗೆ 70 ರಿಂದ 90% ಸಬ್ಸಿಡಿ ನೀಡಲಾಗುತ್ತದೆ.
* ಉತ್ತರ ಪ್ರದೇಶದಲ್ಲಿ ಸಾಮಾನ್ಯ ರೈತರಿಗೆ 50%, SC / ST ಅಥವಾ ಮಹಿಳಾ ರೈತರಿಗೆ 70% ಸಬ್ಸಿಡಿ ನೀಡಲಾಗುತ್ತದೆ.
* ಮಹಾರಾಷ್ಟ್ರದಲ್ಲಿ ಸಾಮಾನ್ಯ ರೈತರಿಗೆ 50%, SC / ST ಅಥವಾ ಮಹಿಳಾ ರೈತರಿಗೆ 90% ಸಬ್ಸಿಡಿ ನೀಡಲಾಗುತ್ತದೆ.
* ಪಂಜಾಬ್ ಮತ್ತು ಹರಿಯಾಣದಲ್ಲಿ ಸಾಮಾನ್ಯ ರೈತರಿಗೆ 50%, SC / ST ಅಥವಾ ಮಹಿಳಾ ರೈತರಿಗೆ 50 ರಿಂದ 60% ಸಬ್ಸಿಡಿ ನೀಡಲಾಗುತ್ತದೆ.
* ಬಿಹಾರದಲ್ಲಿ ಸಾಮಾನ್ಯ ರೈತರಿಗೆ 50 ರಿಂದ 70%, SC / ST ಅಥವಾ ಮಹಿಳಾ ರೈತರಿಗೆ 90% ಸಬ್ಸಿಡಿ ನೀಡಲಾಗುತ್ತದೆ.
* ರಾಜಸ್ತಾನದಲ್ಲಿ ಸಾಮಾನ್ಯ ರೈತರಿಗೆ 50%, SC / ST ಅಥವಾ ಮಹಿಳಾ ರೈತರಿಗೆ 90% (ಮರುಭೂಮಿ ಪ್ರದೇಶ) ಸಬ್ಸಿಡಿ ನೀಡಲಾಗುತ್ತದೆ.
ಕಿಸಾನ್ ಟ್ರ್ಯಾಕ್ಟರ್ ಯೋಜನೆಯ ಅರ್ಹತೆ
* ಭಾರತೀಯ ನಾಗರೀಕರಾಗಿರಬೇಕು
* ಕನಿಷ್ಠ 0.5 ಎಕರೆ ಕೃಷಿ ಜಮೀನು ಹೊಂದಿರಬೇಕು
* ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು
* ಹಿಂದೆ ಈ ಯೋಜನೆಯಲ್ಲಿ ಟ್ರಾಕ್ಟರ್ ಸಬ್ಸಿಡಿ ಪಡೆದಿರಬಾರದು
* ಆಧಾರ್ ಸೀಡಿಂಗ್ ಆಗಿರುವ ಬ್ಯಾಂಕ್ ಖಾತೆ
ಆನ್ಲೈನ್ ಮೂಲಕ ಈ ರೀತಿಯಾಗಿ ಅರ್ಜಿ ಸಲ್ಲಿಸಿ
ಮೊದಲು https://agrimachinery.nic.in/ ಗೆ ಅಥವಾ ನಿಮ್ಮ ರಾಜ್ಯದ ಕೃಷಿ ಇಲಾಖೆ ಪೋರ್ಟಲ್ ಗೆ ಭೇಟಿ ನೀಡಿ Farmer Corner ಗೆ ಹೋಗಿ Apply for Subsidy ಆಯ್ಕೆ ಮಾಡಿಕೊಳ್ಳಬೇಕು. ಮೊಬೈಲ್ ನಂಬರ್ ಹಾಕಿ OTP ನಮೂದಿಸಿ ಲಾಗಿನ್ ಮಾಡಿಕೊಳ್ಳಬೇಕು. ಆಧಾರ್, ಜಮೀನು ವಿವರ (RTC), ಬ್ಯಾಂಕ್ ಪಾಸ್ ಬುಕ್ ಅಪ್ಲೋಡ್ ಮಾಡಬೇಕು. ನಂತರ ಬೇಕಾದ ಯಂತ್ರ (ಟ್ರಾಕ್ಟರ್) ಆಯ್ಕೆ ಮಾಡಿ, ಡೀಲರ್ ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು. ಅಪ್ಲಿಕೇಶನ್ ID ಸುರಕ್ಷಿತವಾಗಿಟ್ಟುಕೊಳ್ಳಿ.
ಈ ರೀತಿಯಾಗಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಿ
ತಾಲೂಕು ಕೃಷಿ ಅಧಿಕಾರಿ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಟ್ಟು, ಫಾರ್ಮ್-1 ತೆಗೆದುಕೊಂಡು ಭರ್ತಿ ಮಾಡಿ, ಎಲ್ಲ ದಾಖಲೆಗಳ ಜೊತೆಗೆ ಅರ್ಜಿ ಸಲ್ಲಿಸಬೇಕು.
2025 ರಲ್ಲಿ ಕೆಲವು ಬದಲಾವಣೆಗಳು
* 8 HP ಗಿಂತ ಕಡಿಮೆ ಟ್ರಾಕ್ಟರ್ ಗಳಿಗೆ 90% ಸಬ್ಸಿಡಿ
* ಎಲೆಕ್ಟ್ರಿಕ್ ಟ್ರಾಕ್ಟರ್ ಗಳಿಗೆ ಹೆಚ್ಚುವರಿ 20% ಸಬ್ಸಿಡಿ
* ಡ್ರೋನ್ ಖರೀದಿಗೂ ಸಬ್ಸಿಡಿ ವಿಸ್ತರಣೆ ಮಾಡಲಾಗಿದೆ
* ಕಸ್ಟಮ್ ಹೈರಿಂಗ್ ಸೆಂಟರ್ (CHC) ಸ್ಥಾಪಿಸಲು 10 ರೈತರ ಗುಂಪಿಗೆ 50 ಲಕ್ಷದವರೆಗೆ 90% ಸಬ್ಸಿಡಿ ನೀಡಲಾಗುತ್ತದೆ
* ಪ್ರತಿ ಜಿಲ್ಲೆಗೆ ಕನಿಷ್ಠ 500 ಟ್ರಾಕ್ಟರ್ ಗುರಿಯನ್ನ ಇಟ್ಟುಕೊಂಡಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

