KLWB Education Assistance: ಕರ್ನಾಟಕದಲ್ಲಿ ಅದೆಷ್ಟೋ ಕಾರ್ಮಿಕರು ಅವರ ದೈನಂದಿನ ಜೀವನವನ್ನು ನೆಡೆಸಲು ಕಷ್ಟಪಡುತ್ತಾರೆ. ಅದೆಷ್ಟೋ ಬಡವರು ಕಷ್ಟದ ನಡುವೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದು ನಿಜಕ್ಕೂ ಒಳ್ಳೆಯ ಸಂಗತಿ ಆಗಿದೆ. ಅದೆಷ್ಟೋ ಕಾರ್ಮಿಕರ ಮಕ್ಕಳು ಹಣಕಾಸಿನ ತೊಂದರೆಯಿಂದ ಶಿಕ್ಷಣದ ಕನಸನ್ನು ಕನಸಾಗಿಯೇ ಇಟ್ಟುಕೊಂಡಿದ್ದಾರೆ. ಸದ್ಯ ಇದನೆಲ್ಲ ಅರಿತ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ (Karnataka Labour Welfare Board) ಶಿಕ್ಷಣ ಸಹಾಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ಎಲ್ಲ ಕಾರ್ಮಿಕರ ಮಕ್ಕಳು ಶಿಕ್ಷಣಕ್ಕೆ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?, ಬೇಕಾಗಿರುವ ದಾಖಲೆ ಏನು?, ಯಾರು ಯಾರು ಅರ್ಜಿ ಸಲ್ಲಿಸುವುದರ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಈ ರೀತಿಯ ಹೆಚ್ಚಿನ ಮಾಹಿತಿಗಾಗಿ Nadunudi ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ.
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ
ಫ್ಯಾಕ್ಟರಿ, ಮೋಟಾರ್ ಟ್ರಾನ್ಸ್ಪೋರ್ಟ್, ಶಾಪ್ ಮತ್ತು Establishment, ಬಿಡಿ, ಸಿನಿಮಾ ಇಂಡಸ್ಟ್ರಿ, ಪ್ಲಾಂಟೇಶನ್ ಸೇರಿದಂತೆ 10 ಕ್ಕೂ ಅಧಿಕ ವರ್ಗದ ಕಾರ್ಮಿಕರು ಈ Karnataka Labour Welfare Board ಗೆ ಕೊಡುಗೆಯನ್ನು ನೀಡುತ್ತಾರೆ. ಈ ನಿಧಿಯಿಂದ ಅದೆಷ್ಟೋ ಕಾರ್ಮಿಕರ ಮಕ್ಕಳಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಕನಸನ್ನು ನನಸು ಮಾಡಿಕೊಳ್ಳಬಹುದು.
2025 – 26 ನೇ ಸಾಲಿನಲ್ಲಿ ಯಾವ ತರಗತಿಗೆ ಎಷ್ಟು ಸಹಾಯಧನವನ್ನು ನೀಡಲಾಗುತ್ತದೆ?
* 8 ಮತ್ತು 9 ನೇ ತರಗತಿಗೆ – 1100 ರೂ. ನೀಡಲಾಗುತ್ತದೆ.
* 10 ನೇ ತರಗತಿಗೆ – 1200 ರೂ. ನೀಡಲಾಗುತ್ತದೆ.
* PUC 1 ನೇ ಮತ್ತು 2 ನೇ ವರ್ಷಕ್ಕೆ – 1500 ರೂ. ನೀಡಲಾಗುತ್ತದೆ.
* Diploma / ITI ಗೆ – 2500 ರೂ. ನೀಡಲಾಗುತ್ತದೆ.
* ಪದವಿ ಗೆ – 4000 Rs ದಿಂದ 6000 Rs ವರೆಗೆ ನೀಡಲಾಗುತ್ತದೆ.
* MBBS / BE / BTech ಗೆ – 10000 Rs ದಿಂದ 15000 Rs ನೀಡಲಾಗುತ್ತದೆ.
* Post Graduation ಗೆ – 8000 Rs ದಿಂದ 11000 Rs ನೀಡಲಾಗುತ್ತದೆ.
* PhD / Post Doctoral ಗೆ – 15000 Rs ದಿಂದ 20000 Rs ನೀಡಲಾಗುತ್ತದೆ.
ಅರ್ಹತೆ
* ತಂದೆ ಅಥವಾ ತಾಯಿ ಕನಿಷ್ಠ 1 ವರ್ಷದಿಂದ KLWB ನಲ್ಲಿ ಕೆಲಸ ಮಾಡಿ ಸರ್ಟಿಫಿಕೇಟ್ ತೆಗೆದುಕೊಂಡಿರಬೇಕು
* ಕುಟುಂಬದ ವಾರ್ಷಿಕ ಆದಾಯ 25000 Rs ಕಿಂತ ಕಡಿಮೆ ಇರಬೇಕು
* ಒಂದು ಕುಟುಂಬದಲ್ಲಿ ಗರಿಷ್ಠ 2 ಮಕ್ಕಳಿಗೆ ಅವಕಾಶ
* ಕರ್ನಾಟಕದಲ್ಲಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು
* ಹಿಂದಿನ ತರಗತಿಯಲ್ಲಿ ಕನಿಷ್ಠ ಜನರಲ್ – 50 % ಮತ್ತು SC / ST / OBC – 40 % ಅಂಕ ತೆಗೆದಿರಬೇಕು.
2025 – 26 ನೇ ಸಾಲಿನಲ್ಲಿ ಬೇಕಾಗುವ ಅಗತ್ಯ ದಾಖಲೆಗಳ ಪಟ್ಟಿ
* ತಂದೆ ಅಥವಾ ತಾಯಿಯ KLWB ಸರ್ಟಿಫಿಕೇಟ್
* ವಿದ್ಯಾರ್ಥಿಯ ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್
* ಸ್ಟಡಿ ಸರ್ಟಿಫಿಕೇಟ್
* ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್
* ಆದಾಯ ಪ್ರಮಾಣಪತ್ರ
* ಶಾಲೆ ಅಥವಾ ಕಾಲೇಜಿನ ಶುಲ್ಕ ಪಾವತಿ ರಸೀದಿ
* ಭಾವಚಿತ್ರ
ಈ ರೀತಿಯಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ
ಮೊದಲು https://klwbapps.karnataka.gov.in/student ಗೆ ಭೇಟಿ ನೀಡಿ “Education Assistance 2025-26” ಆಯ್ಕೆ ಮಾಡಬೇಕು, ಹೊಸ ಅರ್ಜಿದಾರರಾಗಿದ್ದರೆ, ಮೊಬೈಲ್ ನಂಬರ್ ಹಾಕಿ OTP ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು. ಲಾಗಿನ್ ಆದ ನಂತರ “Apply for Education Assistance” ಆಯ್ಕೆ ಮಾಡಿಕೊಂಡು ಎಲ್ಲ ವಿವರವನ್ನು ಭರ್ತಿ ಮಾಡಿ ದಾಖಲೆಯನ್ನು ಅಪ್ಲೋಡ್ ಮಾಡಬೇಕು. ನಂತರ Submit ಕೊಟ್ಟು ಅಪ್ಲಿಕೇಶನ್ ನಂಬರ್ ಸೇವ್ ಮಾಡಿ ಇಟ್ಟುಕೊಳ್ಳಬೇಕು. ಅರ್ಜಿ ಸಲ್ಲಿಸಲು ಡಿಸೆಂಬರ್ 21, 2025 ಕೊನೆಯ ದಿನಾಂಕವಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

