Kodi Mutt Prediction: ಇನ್ನೊಂದು ಆಘಾತಕಾರಿ ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು, ಮತ್ತೆ ಕಾದಿದೆ ಗಂಡಾಂತರ

ಇನ್ನೊಂದು ಆಘಾತಕಾರಿ ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು

Kodi Mutt Prediction New Update: ಹಾಸನದ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ಸ್ವಾಮೀಜಿಗಳು ಮುಂದಿನ ಭವಿಷ್ಯದ ಕುರಿತು ಆಗಾಗ ಮಾಹಿತಿ ನೀಡುತ್ತಿರುತ್ತಾರೆ. ಅದರಂತೆ ಈ ಬಾರಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅಚ್ಚರಿಯ ಭವಿಷ್ಯವಾಣಿ ನುಡಿದಿದ್ದಾರೆ. ಈಗಾಗಲೇ ಶ್ರೀಗಳು ಹೇಳಿದ ಕೆಲ ಭವಿಷ್ಯವಾಣಿ ನಿಜವಾಗಿದ್ದರಿಂದ ಜನರು ಶ್ರೀಗಳ ಭವಿಷ್ಯವಾಣಿಯ ಬಗ್ಗೆ ಪ್ರಾಮುಖ್ಯತೆ ನೀಡುತ್ತಾರೆ. 

ಮಳೆ, ಪ್ರವಾಹ, ರಾಜಕೀಯ ಸೇರಿದಂತೆ ವಿದ್ಯಮಾನಗಳ ಮುನ್ಸೂಚನೆ ನೀಡುವ ಹಾಸನದ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ಮಹಾ ಸ್ವಾಮೀಜಿ ಈಗ ಮತ್ತೊಂದು ಮಹತ್ವದ ಭವಿಷ್ಯ ನುಡಿದಿದ್ದಾರೆ. ಕೆಲ ದಿನಗಳ ಹಿಂದೆ ಕೋಡಿಮಠದ ಶ್ರೀಗಳು ರಾಜ್ಯದಲ್ಲಿ ಅನಾಹುತ ಮತ್ತು ರಾಜಕೀಯದ ಬಗ್ಗೆ ಭವಿಷ್ಯ ನುಡಿದಿದ್ದರು. ಇದೀಗ ಮುಂದೆ ಎದುರಾಗುವಂತಹ ಗಂಡಾಂತರದ ಬಗ್ಗೆ ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ.

Kodi Mutt Prediction New Update
Image Credit: News 18

ಇನ್ನೊಂದು ಆಘಾತಕಾರಿ ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು
ಶ್ರಾವಣ ಮಾಸದಲ್ಲಿ ಜಾಗತಿಕವಾಗಿ ವಿಪರೀತ ಮಳೆಯಾಗಲಿದೆ. ಭೂಕಂಪಗಳು ಮತ್ತು ಸುನಾಮಿಗಳು ಹೆಚ್ಚು ಸಾವು ಮತ್ತು ನೋವುಗಳಿಗೆ ಕಾರಣವಾಗುತ್ತವೆ. ವಿಷಾನಿಲ ಬೀಸುವ ಸಾಧ್ಯತೆಯೂ ಇದ್ದು, ಎಲ್ಲೆಡೆ ಹರಡಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಯುದ್ಧದ ಭೀತಿ ಎದುರಾಗಲಿದೆ ಎಂದು ಬೆಳಗಾವಿಯಲ್ಲಿ  ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಭಾರೀ ಮಳೆಯಿಂದ ಎರಡು ದೇಶಗಳು ನಾಶವಾಗಲಿದ್ದು, ಭಾರತದಲ್ಲಿ ಪ್ರವಾಹದ ಲಕ್ಷಣಗಳು ಗೋಚರಿಸುತ್ತಿವೆ. ದಕ್ಷಿಣ ಭಾರತದಲ್ಲಿ ಸಮೃದ್ಧಿ ಇರುತ್ತದೆ, ಸಮಸ್ಯೆ ಇಲ್ಲ. ದೊಡ್ಡ ನಗರಗಳು ಭೂಕಂಪಗಳಿಂದ ಅಪಾಯದಲ್ಲಿದೆ. ಜನರು ಏಕಾಏಕಿ ಸಾಯುವ ಭೀತಿ ಇದೆ. ಪ್ರಾಣಿ, ವಿಷ ಜಂತುಗಳಿಂದ ಮನುಷ್ಯರಿಗೆ ತೊಂದರೆಯಾಗುತ್ತದೆ ಎಂದಿದ್ದಾರೆ.

ಮತ್ತೆ ಕಾದಿದೆ ಗಂಡಾಂತರ
ವಿಷಾನಿಲ ಭಾರತದ ಮೇಲೂ ಪರಿಣಾಮ ಬೀರಲಿದ್ದು, ಜನರು ಜಾಗರೂಕರಾಗಿರಬೇಕು. ದೇಶದಲ್ಲಿ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಲಿವೆ. ಕಾರ್ತಿಕ ಮಾಸದಲ್ಲಿ ತೊಂದರೆಯ ಸೂಚನೆ ಇದೆ. ಮಳೆ ಮತ್ತು ರೋಗದಿಂದ ದೇಶಕ್ಕೆ ಅಪಾಯವಿದೆ, ಪ್ರಕೃತಿ ಅಸ್ತವ್ಯಸ್ತವಾಗಲಿದೆ. ಈ ವರ್ಷಾಂತ್ಯದವರೆಗೆ ರಾಜ್ಯದಲ್ಲಿ ತೊಂದರೆ ಇರುತ್ತದೆ. ಬೆಂಕಿ ಹೆಚ್ಚಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮರಣ ಪ್ರಮಾಣ ಹೆಚ್ಚಾಗುತ್ತದೆ. ರಾಜ್ಯದಲ್ಲಿ ಒಂದೆಡೆ ಪ್ರಕೃತಿ ವಿಕೋಪ, ಇನ್ನೊಂದೆಡೆ ಸಂಘರ್ಷಗಳು ಜನರನ್ನು ಕೆರಳಿಸಲಿವೆ. ಇದರಿಂದ ಜನರ ಶಾಂತಿ ಕದಡುತ್ತದೆ ಎಂದು ಕೊಡಿ ಮಠದ ಶ್ರೀಗಳು ಆಘಾತಕಾರಿ ಭವಿಷ್ಯ ನೀಡಿದ್ದಾರೆ.

Kodi Mutt Prediction
Image Credit: News 18

Join Nadunudi News WhatsApp Group

Join Nadunudi News WhatsApp Group