Kodi Mutt: ನಿಜವಾಗುತ್ತಾ ಕೊಡಿ ಮಠದ ಶ್ರೀಗಳು ನುಡಿದ ಭವಿಷ್ಯ, ವಿನಾಶದ ಅಂಚಿನಲ್ಲಿ ಭೂಮಿ.
ಶ್ರೀಗಳ ಈ ಹಿಂದಿನ ಭವಿಷ್ಯವಾಣಿ ನಿಜ ಆಗುವ ಸಾಧ್ಯತೆ ಇದೆ.
Kodi Mutt Shivayogi Shivananda Rajendra: ಕೊಡಿ ಮಠದ ಶಿವಯೋಗಿ ಶಿವಾನಂದ ರಾಜೇಂದ್ರ (Shivayogi Shivananda Rajendra) ಸ್ವಾಮೀಜಿಯವರು ಸದ್ಯದಲ್ಲಿ ಸಂಭವಿಸಲಿರುವ ಕೆಲವು ಅಚ್ಚರಿಯ ಘಟನೆಗಳ ಬಗ್ಗೆ ಮಾಹಿತಿ ನೀಡಿದ್ದರು. ಈಗಾಗಲೇ ಶ್ರೀಗಳು ರಾಷ್ಟ್ರ ಮತ್ತು ರಾಜ್ಯ ರಾಜಕಾರಣ, ಪ್ರಕೃತಿ ವಿಕೋಪ, ದೇಶದ ಮಹಾನ್ ನಾಯಕರಿಗೆ ಎದುರಗುವ ಅವಘಡ, ವಿಧಾನ ಸಭ್ ಚುನಾವಣೆ, ಲೋಕ ಸಭಾ ಚುನಾವಣೆಯ ಬಗ್ಗೆ ಈ ಹಿಂದೆ ಭವಿಷ್ಯವಾಣಿ ನುಡಿದಿದ್ದರು.
ಈ ಹಿಂದೆ ಶ್ರೀಗಳು ಭೂಪಟದಿಂದ ಒಂದು ದೇಶ ಕಣ್ಮರೆಯಾಗಲಿದೆ ಎನ್ನುವ ಬಗ್ಗೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದರು. ಶ್ರೀಗಳ ಈ ಹೇಳಿಕೆ ಎಲ್ಲರನ್ನು ಆತಂಕಕ್ಕೆ ಒಳಪಡಿಸಿತ್ತು. ಇದೀಗ ಶ್ರೀಗಳ ಈ ಹಿಂದಿನ ಭವಿಷ್ಯವಾಣಿ ನಿಜ ಆಗುವ ಸಾಧ್ಯತೆ ಇದೆ. ಶ್ರೀಗಳು ಅಂದು ಹೇಳಿದ ಭವಿಷ್ಯವಾಣಿ ಈ ಸಮಯದಲ್ಲಿ ಸಂಭವಿಸುವ ಎಲ್ಲ ಲಕ್ಷಣಗಳು ಕಂಡುಬಂದಿದೆ. ಅಷ್ಟಕ್ಕೂ ಶ್ರೀಗಳು ಹೇಳಿದ ಯಾವ ಭವಿಷ್ಯವಾಣಿ ಸತ್ಯವಾಗಲಿದೆ? ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ.
ಭೂಪಟದಿಂದ ಒಂದು ದೇಶ ಕಣ್ಮರೆಯಾಗಲಿದೆ
“ಭೂಪಟದಿಂದ ಒಂದು ದೇಶ ಕಣ್ಮರೆಯಾಗಲಿದೆ. ಭೂಕಂಪ, ಯುದ್ಧ, ಬಾಂಬ್ ದಾಳಿಗಳು ಹೆಚ್ಚಾಗಲಿವೆ. ಜನರು ತಮ್ಮ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಲಿದ್ದಾರೆ. ಸಾವು ನೋವುಗಳು ಹೆಚ್ಚಾಗಲಿದೆ” ಎಂದು ಎರಡು ತಿಂಗಳ ಹಿಂದೆ ಕೊಡಿ ಮಠದ ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮೀಜಿಯವರು ಭವಿಷ್ಯವಾಣಿ ನುಡಿದಿದ್ದರು.
ಶ್ರೀಗಳ ಭವಿಷ್ಯವಾಣಿ ನಿಜವಾಗಲಿದೆಯೇ..?
ಸದ್ಯ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಯುದ್ಧ ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಎಲ್ಲಾ ಲಕ್ಷಣಗಳನ್ನು ನೋಡಿದರೆ ಕೊಡಿ ಮಠದ ಶ್ರೀಗಳ ಭವಿಷ್ಯವಾಣಿ ನಿಜವಾಗಲಿದೆಯೇ..? ಎನ್ನುವುದು ಆತಂಕಕ್ಕೆ ಕಾರಣವಾಗಿದೆ. ಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಯುದ್ಧದ ಭೀಕರತೆ ನೋಡಿದೆ ಶ್ರೀಗಳ ಭವಿಷ್ಯವಾಣಿ ನಿಜವಾಗುವ ಸಾಧ್ಯತೆ ಹೆಚ್ಚಿದೆ.
ಪ್ರಕೃತಿಯ ವಿಕೋಪದ ಬಗ್ಗೆ ಶ್ರೀಗಳ ಸೂಚನೆ
ಪ್ರಕೃತಿ ಕೂಡ ಮುನಿಸಿಕೊಳ್ಳುವ ಸ್ಥಿತಿ ಇದೆ. ಗಿಡಮರಗಳನ್ನು ಮನುಷ್ಯ ನಾಶ ಮಾಡುತ್ತಿದ್ದಾನೆ. ಈ ಪ್ರಕೃತಿಯ ದೋಷ ಮನುಕುಲಕ್ಕೆ ಇದೆ. ಮೊದಲು ಅಂತರ್ಜಲ ಹೆಚ್ಚಿತ್ತು. ಈಗ ಆಳವಾಗಿ ಬೋರವೆಲ್ ಕೊರೆಸಬೇಕು. ಹೀಗಾಗಿ ಪ್ರಳಯ ಜಾಸ್ತಿ ಆಗ್ತಿದೆ. ಮನುಷ್ಯ ಅತಿವೇಗದಲ್ಲಿ ಹಣ ಮಾಡಲು ಹೊರಟಿದ್ದಾನೆ. ಆದರೆ ಮನುಷ್ಯ ಭಗವಂತನನ್ನು ಮರೆತಿದ್ದಾನೆ. ದೈವ ನಂಬಿಕೆ ಮೇಲೆ ಜೀವನ ಮಾಡಬೇಕು. ಇವುಗಳನ್ನು ಕಳೆದುಕೊಂಡ ಪರಿಣಾಮವೇ ಅನಾಹುತ ಆಗುತ್ತಿದೆ.