Kodi Mutt Predict: 2024 ರಲ್ಲಿ ಏನಾಗಲಿದೆ ಗೊತ್ತಾ…? ಆಘಾತಕಾರಿ ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು.
ಸದ್ಯದಲ್ಲಿ ಸಂಭವಿಸಲಿರುವ ಅಚ್ಚರಿಯ ಘಟನೆಗಳ ಬಗ್ಗೆ ಮಾಹಿತಿ ನೀಡಿದ ಶ್ರೀಗಳು.
Kodi Mutt Shri Predict: ಕೊಡಿ ಮಠದ ಶ್ರೀಗಳು ಹೆಚ್ಚು ಪ್ರಖ್ಯಾತಿ ಪಡೆದಿದ್ದಾರೆ. ಮುಂದೆ ಸಂಭವಿಸಲಿರುವ ಕೆಲವು ಅಪಘಾತದ ಬಗ್ಗೆ ಶ್ರೀಗಳು ಸೂಚನೆ ನೀಡುತ್ತಲೇ ಇರುತ್ತಾರೆ. ಇದೀಗ ಶ್ರೀಗಳ ಸದ್ಯದ ಭವಿಷ್ಯವಾಣಿ ಜನರಲ್ಲಿ ಆತಂಕ ಮೂಡಿಸಿದೆ. ಕೆಲವರ ಬದುಕು ಮೀರಿದ ತಿರುವು ಪಡೆಯಲಿದೆ ಎನ್ನುವ ಬಗ್ಗೆ ಶ್ರೀಗಳು ಸೂಚನೆ ನೀಡಿದ್ದಾರೆ.
ಕೊಡಿ ಮಠದ ಶಿವಯೋಗಿ ಶಿವಾನಂದ ರಾಜೇಂದ್ರ (Shivayogi Shivananda Rajendra) ಸ್ವಾಮೀಜಿಯವರು ಸದ್ಯದಲ್ಲಿ ಸಂಭವಿಸಲಿರುವ ಕೆಲವು ಅಚ್ಚರಿಯ ಘಟನೆಗಳ ಬಗ್ಗೆ ಮಾಹಿತಿ ನೀಡಿದ್ದರು. ಈ ಹಿಂದೆ ರಾಜಕೀಯದ ಕುರಿತು ಒಂದಿಷ್ಟು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯ ಕುರಿತು ಮಹತ್ವದ ಭವಿಷ್ಯವನ್ನು ನುಡಿದಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರವನ್ನು ಪಡೆಯುತ್ತದೆ ಎನ್ನುವ ಬಗ್ಗೆ ಸ್ವಾಮೀಜಿಯವರು ಭವಿಷ್ಯವಾಣಿ ನುಡಿದಿದ್ದರು. ಇದೀಗ ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮೀಜಿಯವರು ದೇಶದ ಮಹಾನ್ ವ್ಯಕ್ತಿಗಳಿಗೆ ಎದುರಾಗುವ ಕಂಟಕದ ಬಗ್ಗೆ ಮಾಹಿತಿ ನೀಡಿದ್ದಾರೆ.
2024 ರ ಯುಗಾಧಿ ವೇಳೆಗೆ ಮತ್ತೊಂದು ಧುರ್ಘಟನೆ
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರಹಳ್ಳಿಯಲ್ಲಿರುವ ಕೊಡಿ ಮಠದಲ್ಲಿ ಶ್ರೀಗಳು ಯುಗಾಧಿಯ ಭವಿಷ್ಯ ನುಡಿದಿದ್ದಾರೆ. ದೇಶದಲ್ಲಿ ಮತ್ತೊಂದು ದುರ್ಘಟನೆ ನಡೆಯುತ್ತದೆ. ಜಗತ್ತಿನ ಸಾಮ್ರಾಟರೆಲ್ಲ ತಲ್ಲಣವಾಗುವ ಕಾಲ ಬರುತ್ತದೆ. ದೊಡ್ಡ ಪಟ್ಟಣಗಳಿಗೆ ಅಪಾಯದ ಸೂಚನೆಯಿದ್ದು ದೊಡ್ಡ ದೊಡ್ಡ ಕಟ್ಟಡಗಳು ಕುಸಿಯುವ ಸಾಧ್ಯತೆ ಇದೆ ಎಂದು ಶ್ರೀಗಳು ಹೇಳಿದ್ದಾರೆ.
2024 ರಲ್ಲಿ ಏನಾಗಲಿದೆ ಗೊತ್ತಾ
2024 ರ ಯುಗಾದಿಯೊಳಗೆ ಸಂಭವಿಸಲಿರುವ ಭವಿಷ್ಯದ ಬಗ್ಗೆ ಶ್ರೀಗಳು ಹೇಳಿಕೆ ನೀಡಿದ್ದಾರೆ. ಮೂರು ಮಂದಿ ಮಹಾನ್ ವ್ಯಕ್ತಿಗಳಿಗೆ ಅಪಾಯವಿದೆ. ನಮ್ಮನ್ನು ಆಳುವವರು ಎಚ್ಚರ ವಹಿಸಿದರೆ ಈ ಧುರ್ಘಟನೆ ತಪ್ಪಿಸಬಹುದು. ಕಾಲ ಬಂದಾಗ ನಾನೆ ಎಲ್ಲವನ್ನು ವಿವರಿಸುತ್ತೇನೆ. ಜೀವನ ಆಡಂಬರ ರಹಿತವಾಗಿರಬೇಕು. ಅದ್ಯಾತ್ಮಿಕವಾದ ಚಿಂತನೆ ನಮ್ಮಲಿರಬೇಕು ಎಂದಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಆದರೆ ಕೆಲವರು ಬಹುಬೇಗ ಹಣ ಮಾಡುವ ಆಸೆ ಹೊಂದಿದ್ದಾರೆ. ಅದೇ ಅವರಿಗೆ ಆಪತ್ತು ತಂದುಕೊಡುತ್ತದೆ. ಆಘಾತಗಳು ಸಂಭವಿಸಲಿದೆ. ಆದರೆ ಯಾವುದೇ ತೊಂದರೆಯಿಲ್ಲ. ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗುವ ಸಂಭವವಿದೆ. ಹೀಗಾಗಿ ಸರ್ಕಾರ ಜನರ ಹಿತಕ್ಕಾಗಿ ಬದಲಾಗಬೇಕಿದೆ ಎಂದಿದ್ದಾರೆ.