Kodi Mutt Sri: ರಾಜ್ಯ ರಾಜಕೀಯದ ಬಗ್ಗೆ ಕೊಡಿ ಮಠದ ಸ್ವಾಮಿಗಳ ಇನ್ನೊಂದು ಸ್ಪೋಟಕ ಭವಿಷ್ಯ, ಇದೊಂದು ಕುರುಕ್ಷೇತ್ರ

ಕೇಂದ್ರ ರಾಜಕಾರಣವನ್ನು ಕುರುಕ್ಷೇತ್ರಕ್ಕೆ ಹೋಲಿಸಿದ ಕೊಡಿ ಮಠದ ಶ್ರೀಗಳು

Kodi Mutt Sri Prediction: ಹಾಸನದ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ಸ್ವಾಮೀಜಿಗಳು ಕರ್ನಾಟಕದ ಭವಿಷ್ಯದ ಕುರಿತು ಆಗಾಗ ಮಾಹಿತಿ ನೀಡುತ್ತಿರುತ್ತಾರೆ. ಅದರಂತೆ ಈ ಬಾರಿ , ಕೇಂದ್ರ ರಾಜಕಾರಣದ ಬಗ್ಗೆ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅಚ್ಚರಿಯ ಭವಿಷ್ಯವಾಣಿ ನುಡಿದಿದ್ದಾರೆ.

ಈಗಾಗಲೇ ಶ್ರೀಗಳು ಹೇಳಿದ ಕೆಲ ಭವಿಷ್ಯವಾಣಿ ನಿಜವಾಗಿದ್ದರಿಂದ ಜನರು ಶ್ರೀಗಳ ಭವಿಷ್ಯವಾಣಿಯ ಬಗ್ಗೆ ಪ್ರಾಮುಖ್ಯತೆ ನೀಡುತ್ತಾರೆ. ಸದ್ಯ ಶ್ರೀಗಳು ಕೇಂದ್ರ ರಾಜಕಾರಣದ ಬಗ್ಗೆ ಯಾವ ರೀತಿ ಭವಿಷ್ಯವಾಣಿ ನುಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Kodi Mutt Sri Prediction
Image Credit: Vistaranews

ಕೇಂದ್ರ ರಾಜಕಾರಣವನ್ನು ಕುರುಕ್ಷೇತ್ರಕ್ಕೆ ಹೋಲಿಸಿದ ಕೊಡಿ ಮಠದ ಶ್ರೀಗಳು
ಮಳೆ, ಪ್ರವಾಹ, ರಾಜಕೀಯ ಸೇರಿದಂತೆ ವಿದ್ಯಮಾನಗಳ ಮುನ್ಸೂಚನೆ ನೀಡುವ ಹಾಸನದ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ಮಹಾ ಸ್ವಾಮೀಜಿ ಈಗ ಮತ್ತೊಂದು ಮಹತ್ವದ ಭವಿಷ್ಯ ನುಡಿದಿದ್ದಾರೆ. ಕೆಲ ದಿನಗಳ ಹಿಂದೆ ಕೋಡಿಮಠದ ಶ್ರೀಗಳು ರಾಜ್ಯದಲ್ಲಿ ಅನಾಹುತ ಮತ್ತು ರಾಜಕೀಯದ ಬಗ್ಗೆ ಭವಿಷ್ಯ ನುಡಿದಿದ್ದರು. ಇದೀಗ ಕೇಂದ್ರ ರಾಜಕಾರಣದ ಬಗ್ಗೆ ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಕೇಂದ್ರ ರಾಜಕಾರಣವನ್ನು ಶ್ರೀಗಳು ಕುರುಕ್ಷೇತ್ರಕ್ಕೆ ಹೋಲಿಸಿದ್ದಾರೆ. ಅಭಿಮನ್ಯು ಪತ್ನಿ ಪಾರ್ಲಿಮೆಂಟ್ ಪ್ರವೇಶಿಸಲಿದ್ದಾರೆ ಎಂದು ಕೋಡಿ ಶ್ರೀಗಳು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. ಸದ್ಯ ಶ್ರೀಗಳ ಈ ಭವಿಷ್ಯವಾಣಿ ಬಾರಿ ಚರ್ಚೆಗೆ ಕಾರಣವಾಗಿದೆ.

ಕಂಟಕಗಳ ಬಗ್ಗೆ ಭವಿಷ್ಯವಾಣಿ ನುಡಿದ ಶ್ರೀಗಳು
ಈ ಕ್ರೋಧಿನಾಮ ಸಂವತ್ಸರದಲ್ಲಿ ಶುಭಕ್ಕಿಂತ ಅಶುಭವೇ ಹೆಚ್ಚು. ಈ ವರ್ಷ ಜಲಾವೃಷ್ಟಿ ಆಗಲಿದೆ. ಭೂಮಿ ಘಟಕ, ಜಲ ಕಂಟಕ, ಅಗ್ನಿ, ವಾಯು ಕಂಟಕಗಳೂ ಇವೆ.ಈ ಐದು ಕಂಟಕಗಳನ್ನು ಜನರು ಗೆಲ್ಲಬೇಕು. ಶಿಷ್ಯನು ಗುರುವಾಗುತ್ತಾನೆ ಮತ್ತು ಗುರು ಶಿಷ್ಯನಾಗಲಿದ್ದಾನೆ. ಹೆಣ್ಣು ಮಕ್ಕಳ ಪ್ರಾಬಲ್ಯವು ಹೆಚ್ಚಾಗುತ್ತದೆ. ಇದರಿಂದ ಒಳ್ಳೆಯದು ಆಗಬಹುದು, ಕೆಟ್ಟದ್ದು ಆಗಬಹುದು ಎಂದು ಕೊಡಿ ಮಠದ ಶ್ರೀಗಳು ಹೇಳಿದ್ದಾರೆ. ಮನಸ್ಸು, ಕಣ್ಣು ಮತ್ತು ಕೋಪವನ್ನು ಸರಿಯಾಗಿ ನಿಯಂತ್ರಿಸದಿದ್ದರೆ ಅಂತಹ ವ್ಯಕ್ತಿಗಳಿಗೆ ಕಂಟಕಗಳು ಎದುರಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಮನುಷ್ಯ ಬದುಕಿರುವಾಗಲೇ ಅರಿಷಡ್ವರ್ಗಗಳನ್ನು ಜಯಿಸಬೇಕು ಎಂದು ಸನ್ಮಾರ್ಗ ಭೋದಿಸಿದ್ದಾರೆ.

Kodi Mutt Sri Prediction 2024
Image Credit: Karnataka Times

Join Nadunudi News WhatsApp Group

Join Nadunudi News WhatsApp Group