Kodi Mutt Sri: ಮೋದಿ ಮತ್ತು ಸಿದ್ದರಾಮಯ್ಯ ಬಗ್ಗೆ ಸ್ಪೋಟಕ ಭವಿಷ್ಯ, ನಿಜವಾಗುತ್ತಾ ಕೊಡಿ ಶ್ರೀಗಳ ಭವಿಷ್ಯ.

ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಭವಿಷ್ಯ ನುಡಿದ ಕೊಡಿ ಶ್ರೀಗಳು

Kodi Mutt Sri About Modi And Siddaramaiah: ಹಾಸನದ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ಸ್ವಾಮೀಜಿಗಳು ಕರ್ನಾಟಕದ ಭವಿಷ್ಯದ ಕುರಿತು ಆಗಾಗ ಮಾಹಿತಿ ನೀಡುತ್ತಿರುತ್ತಾರೆ. ಅದರಂತೆ ಈ ಬಾರಿ , ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಗೂ ಮಳೆ, ಬೆಳೆ ಬಗ್ಗೆ ಸ್ಫೋಟಕ ಭವಿಷ್ಯವನ್ನು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದಿದ್ದಾರೆ.

ಇನ್ನು ಈಗಾಗಲೇ ಶ್ರೀಗಳು ಹೇಳಿದ ಕೆಲ ಭವಿಷ್ಯವಾಣಿ ನಿಜವಾಗಿದ್ದರಿಂದ ಜನರು ಶ್ರೀಗಳ ಭವಿಷ್ಯವಾಣಿಯ ಬಗ್ಗೆ ಪ್ರಾಮುಖ್ಯತೆ ನೀಡುತ್ತಾರೆ. ಸದ್ಯ ಶ್ರೀಗಳು ದೇಶದ ಪ್ರಧಾನಿ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಯಾವ ರೀತಿ ಭವಿಷ್ಯವಾಣಿ ನುಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

PM Modi And Siddaramaiah
Image Credit: Deccanherald

ಮೋದಿ ಅವರ ಬಗ್ಗೆ ಸ್ಪೋಟಕ ಭವಿಷ್ಯ
ಈ ವರ್ಷ ದೊಡ್ಡ ನಾಯಕರು ಆಘಾತಕ್ಕೊಳಗಾಗುತ್ತಾರೆ ಎಂದು ನಾನು ಹೇಳಿದ್ದೆ. ಅದು ನಿಜವಾಗಿದ್ದು, ಅದು ಮುಂದುವರಿಯುತ್ತದೆ ಎಂದು ಕೋಡಿಶ್ರೀಗಳು ಹೇಳಿದರು. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಲೋಕಸಭೆ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವುದನ್ನು ನೆನಪಿಸಿದರು. ಈ ಕ್ರೋಧಿನಾಮ ಸಂವತ್ಸರದಲ್ಲಿ ಶುಭಕ್ಕಿಂತ ಅಶುಭವೇ ಹೆಚ್ಚು. ಈ ವರ್ಷ ಜಲಾವೃಷ್ಟಿ ಆಗಲಿದೆ. ಭೂಮಿ ಘಟಕ, ಜಲ ಕಂಟಕ, ಅಗ್ನಿ, ವಾಯು ಕಂಟಕಗಳೂ ಇವೆ.

ಈ ಐದು ಕಂಟಕಗಳನ್ನು ಜನರು ಗೆಲ್ಲಬೇಕು. ಶಿಷ್ಯನು ಗುರುವಾಗುತ್ತಾನೆ ಮತ್ತು ಗುರು ಶಿಷ್ಯನಾಗಲಿದ್ದಾನೆ. ಹೆಣ್ಣು ಮಕ್ಕಳ ಪ್ರಾಬಲ್ಯವು ಹೆಚ್ಚಾಗುತ್ತದೆ. ಇದರಿಂದ ಒಳ್ಳೆಯದು ಆಗಬಹುದು, ಕೆಟ್ಟದ್ದು ಆಗಬಹುದು ಎಂದು ಕೊಡಿ ಮಠದ ಶ್ರೀಗಳು ಹೇಳಿದ್ದಾರೆ. ಮನಸ್ಸು, ಕಣ್ಣು ಮತ್ತು ಕೋಪವನ್ನು ಸರಿಯಾಗಿ ನಿಯಂತ್ರಿಸದಿದ್ದರೆ ಅಂತಹ ವ್ಯಕ್ತಿಗಳಿಗೆ ಕಂಟಕಗಳು ಎದುರಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಮನುಷ್ಯ ಬದುಕಿರುವಾಗಲೇ ಅರಿಷಡ್ವರ್ಗಗಳನ್ನು ಜಯಿಸಬೇಕು ಎಂದು ಸನ್ಮಾರ್ಗ ಭೋದಿಸಿದ್ದಾರೆ.

Kodi Mutt Sri About Modi And Siddaramaiah
Image Credit: Original Source

ಸಿದ್ದರಾಮಯ್ಯ ಅವರ ಬಗ್ಗೆ ಸ್ಪೋಟಕ ಭವಿಷ್ಯ
ಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ ಎಂಬ ಚರ್ಚೆಗಳ ನಡುವೆ ಕೋಡಿಶ್ರೀಗಳು ಏನಾಗುವುದಿಲ್ಲ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಈ ಬಾರಿ ಕೇಂದ್ರದಲ್ಲಿ ಬಿಜೆಪಿಗೆ ಬಹುಮತ ಸಿಗದ ಕಾರಣ ಎನ್‌ಡಿಎ ಮೈತ್ರಿ ಸರ್ಕಾರ ರಚನೆಯಾಗಿದ್ದು, ಇದು ಹೆಚ್ಚು ದಿನ ಉಳಿಯುವುದಿಲ್ಲ ಎಂದು ವಿಪಕ್ಷಗಳ ಭವಿಷ್ಯದ ನಡುವೆ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪ್ರತಿಕ್ರಿಯಿಸಿ, ಸರ್ಕಾರ ಹಾಗೂ ಮೋದಿ ಅವರ ಬಗ್ಗೆ ಶ್ರವಣದಲ್ಲಿ ಮಾತನಾಡುತ್ತೇನೆ ಎಂದಿದ್ದಾರೆ.

Join Nadunudi News WhatsApp Group

kodi mutt sri about modi and siddaramaiah
Image Credit: Original Source

Join Nadunudi News WhatsApp Group