Kodi Mutt: ದೊಡ್ಡ ದೊಡ್ಡವವರಿಗೆ ಆಘಾತ, ಕೊಡಿ ಮಠದ ಶ್ರೀಗಳಿಂದ ಬಂತು ಇನ್ನೊಂದು ಶಾಕಿಂಗ್ ಭವಿಷ್ಯ.

ಕೊಡಿ ಮಠದ ಶ್ರೀಗಳಿಂದ ಬಂತು ಇನ್ನೊಂದು ಶಾಕಿಂಗ್ ಭವಿಷ್ಯ

Kodi Mutt Sri Prophecy 2024: ಕೊಡಿ ಮಠದ ಶ್ರೀಗಳಾದ Shivayogi Shivananda Rajendra ಸ್ವಾಮೀಜಿಯವರು 2024 ರ ಆರಂಭದಲ್ಲಿ ಈ ವರ್ಷದಲ್ಲಿ ಎದುರಾಗುವಂತಹ ಸಮಸ್ಯೆಗಳ ಬಗ್ಗೆ ಭವಿಷ್ಯವಾಣಿ ನುಡಿದು ಜನರನ್ನು ಎಚ್ಚರಿಸಿದ್ದಾರೆ. ಕೊಡಿ ಮಠದ ಶ್ರೀಗಳ ಭವಿಷ್ಯವಾಣಿ ಈವರೆಗೆ ಸಾಕಷ್ಟು ನಿಜವಾಗಿದೆ. ಹೀಗಾಗಿ ಜನರು ಶ್ರೀಗಳ ಭವಿಷ್ಯವಾಣಿಯನ್ನು ನಂಬುತ್ತಾರೆ.

ಶ್ರೀಗಳು ಮುಂದೆ ಆಗುವಂತಹ ಅನಾಹುತದ ಬಗ್ಗೆ ಮುನ್ನೆಚೆರಿಕೆ ವಹಿಸುವಂತೆ ಹೇಳುತ್ತಾರೆ. ಇನ್ನು ಕಳೆದ ತಿಂಗಳಿನಲ್ಲಿ ಶ್ರೀಗಳು ಮುಂದೆ ಆಗುವ ಕೆಟ್ಟ ಘಟನೆಗಳ ಬಗ್ಗೆ ಭವಿಷ್ಯ ನುಡಿದ್ದರು. ದೇಶದ ಮಹಾನ್ ವ್ಯಕ್ತಿಗಳಿಗೆ ಎದುರಾಗುವ ಸಂಕಷ್ಟದ ಬಗ್ಗೆ ಶ್ರೀಗಳು ಎಚ್ಚರಿಸಿದ್ದರು. ಸದ್ಯ ಶ್ರೀಗಳು ಇದೀಗ ಇನ್ನೊಂದು ಶಾಕಿಂಗ್ ಭವಿಷ್ಯ ಹೇಳಿದ್ದಾರೆ.

Kodi Mutt Sri Prophecy 2024
Image Credit: TV9 Kannada

ಕೊಡಿ ಮಠದ ಶ್ರೀಗಳಿಂದ ಬಂತು ಇನ್ನೊಂದು ಶಾಕಿಂಗ್ ಭವಿಷ್ಯ
ಈ ವರ್ಷ ದೊಡ್ಡ ನಾಯಕರು ಆಘಾತಕ್ಕೊಳಗಾಗುತ್ತಾರೆ ಎಂದು ನಾನು ಹೇಳಿದ್ದೆ. ಅದು ನಿಜವಾಗಿದ್ದು, ಅದು ಮುಂದುವರಿಯುತ್ತದೆ ಎಂದು ಕೋಡಿಶ್ರೀಗಳು ಹೇಳಿದರು. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಲೋಕಸಭೆ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವುದನ್ನು ನೆನಪಿಸಿದರು. ಈ ಕ್ರೋಧಿನಾಮ ಸಂವತ್ಸರದಲ್ಲಿ ಶುಭಕ್ಕಿಂತ ಅಶುಭವೇ ಹೆಚ್ಚು. ಈ ವರ್ಷ ಜಲಾವೃಷ್ಟಿ ಆಗಲಿದೆ. ಭೂಮಿ ಘಟಕ, ಜಲ ಕಂಟಕ, ಅಗ್ನಿ, ವಾಯು ಕಂಟಕಗಳೂ ಇವೆ.

ಈ ಐದು ಕಂಟಕಗಳನ್ನು ಜನರು ಗೆಲ್ಲಬೇಕು. ಶಿಷ್ಯನು ಗುರುವಾಗುತ್ತಾನೆ ಮತ್ತು ಗುರು ಶಿಷ್ಯನಾಗಲಿದ್ದಾನೆ. ಹೆಣ್ಣು ಮಕ್ಕಳ ಪ್ರಾಬಲ್ಯವು ಹೆಚ್ಚಾಗುತ್ತದೆ. ಇದರಿಂದ ಒಳ್ಳೆಯದು ಆಗಬಹುದು, ಕೆಟ್ಟದ್ದು ಆಗಬಹುದು ಎಂದು ಕೊಡಿ ಮಠದ ಶ್ರೀಗಳು ಹೇಳಿದ್ದಾರೆ. ಮನಸ್ಸು, ಕಣ್ಣು ಮತ್ತು ಕೋಪವನ್ನು ಸರಿಯಾಗಿ ನಿಯಂತ್ರಿಸದಿದ್ದರೆ ಅಂತಹ ವ್ಯಕ್ತಿಗಳಿಗೆ ಕಂಟಕಗಳು ಎದುರಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಮನುಷ್ಯ ಬದುಕಿರುವಾಗಲೇ ಅರಿಷಡ್ವರ್ಗಗಳನ್ನು ಜಯಿಸಬೇಕು ಎಂದು ಸನ್ಮಾರ್ಗ ಬೋಧಿಸಿದ್ದರೆ.

ನಟ ದರ್ಶನ್ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಕೊಡಿ ಶ್ರೀಗಳು
ಕೊಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಕೋಪದ ಕೈಗೆ ಬುದ್ದಿ ಕೊಟ್ಟರೆ ಇಂತಹ ಘಟನೆಗಳಿಗೆ ಸಾಕ್ಷಿಯಾಗುತ್ತಾರೆ ಎಂದು ದರ್ಶನ್ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಕೋಪದ ಕೈಗೆ ಬುದ್ಧಿ ಕೊಟ್ಟಾಗ ಮಾತ್ರ ಆಗಲೇ ಇಂಥ ಅವಘಡಗಳು ಸಂಭವಿಸುತ್ತದೆ. ಕರೆಯದೆ ಬರುವವನು ಕೋಪ, ಬರೆಯದೆ ಓದುವವನು ಕಣ್ಣು, ಬರಿಗಾಲಿನಲ್ಲಿ ನಡೆಯುವವನು ಮನಸ್ಸು ಎಂದು ಹೇಳಿದ್ದಾರೆ.

Join Nadunudi News WhatsApp Group

Kodi Mutt Swamiji Latest News
Image Credit: Karnataka Times

Join Nadunudi News WhatsApp Group