Election Result: ಎಲೆಕ್ಷನ್ ಫಲಿತಾಂಶದ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು, ದೊಡ್ಡ ತಲೆ ಉರುಳುತ್ತದೆ.

ಕರ್ನಾಟಕ ಚುನಾವಣೆಯ ಬಗ್ಗೆ ಭವಿಷ್ಯವನ್ನ ನುಡಿದಿದ್ದಾರೆ ಕೊಡಿ ಮಠದ ಶ್ರೀಗಳು.

Sri Shivananda Shivayogi Rajendra Swamiji: ಕರ್ನಾಟಕ ಚುನಾವಣೆಯ ತೀರ್ಪಿಗೆ (Election Result) ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ನಡೆದ ರಾಜ್ಯ ವಿಧಾನ ಸಭಾ ಚುನಾವಣೆಯ ಫಲಿತಾಂಶ ಇಂದು (ಮೇ 13 ) ರಂದು ಪ್ರಕಟವಾಗಲಿದೆ.

ಎಲ್ಲ ಪಕ್ಷದ ಅಭ್ಯರ್ಥಿಗಳು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಯಾವ ಪಕ್ಷ ಈ ಬಾರಿ ಅಧಿಕಾರಕ್ಕೆ ಬರಲಿದ್ದಾರೆ ಎನ್ನುವ ಕುತೂಹಲ ರಾಜ್ಯದ ಜನತೆಯಲ್ಲಿ ಮೂಡಿದೆ. ಇದೀಗ ಎಲೆಕ್ಷನ್ ಫಲಿತಾಂಶದ ಬಗ್ಗೆ ಕೊಡಿ ಮಠದ ಶ್ರೀಗಳು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.

Mr. Kodi Math has predicted the Karnataka election.
Image Credit: vistaranews

ಎಲೆಕ್ಷನ್ ಫಲಿತಾಂಶದ ಬಗ್ಗೆ ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು
ಕಾಂಗ್ರೆಸ್ ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಹೋರಾಟದ ಫಲಿತಾಂಶಕ್ಕೆ ಇಂದು ತೆರೆ ಬೀಳಲಿದೆ. ಈ ಹಿಂದೆ ಚುನಾವಣೆಯ ಆರಂಭದಲ್ಲಿ ಕೋಡಿಮಠದ ಶ್ರೀಗಳುರಾಜ್ಯ ರಾಜಕೀಯದ ಬಗ್ಗೆ ಭವಿಷ್ಯ ನುಡಿದಿದ್ದರು. ಇದೀಗ ಶ್ರೀಗಳು ನುಡಿದ ಭವಿಷ್ಯದ ಬಗ್ಗೆ ಚರ್ಚೆಗಳು ಆರಂಭವಾಗಿದೆ.

ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ. ಈ ಬಾರಿ ಸಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಒಂದೇ ಪಕ್ಷ ಬಹುಮತ ಪಡೆದುಕೊಳ್ಳುತ್ತದೆ ಎಂದು ಕೋಡಿ ಮಠದ ಶ್ರೀಗಳು ಹೇಳಿದ್ದಾರೆ. ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ ಇದೆ. ಚುನಾವಣೆವರೆಗೂ ಪಕ್ಷಾಂತರ ನಡೆಯುತ್ತಲೇ ಇರುತ್ತದೆ. ಎಲ್ಲಾ ಪಕ್ಷಗಳು ಹೊಂದಾಣಿಕೆಯಲ್ಲಿ ಹೋಗುವುದು ಕಷ್ಟ.

The Swami of Kodi Math has predicted the future as to what the election result will be.
Image Credit: swarajyamag

ಚುನಾವಣೆ ಆಗುವವರೆಗೂ ಏನು ಹೇಳಲು ಸಾಧ್ಯವಿಲ್ಲ, ಎಲ್ಲ ಛಿದ್ರವಾಗುವ ಸಾಧ್ಯತೆ ಇದೆ. ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ. ಹಾಗೆಯೆ ಈ ಬಾರಿಯಾ ಚುನಾವಣೆಯಲ್ಲಿ ಹಲವು ದೊಡ್ಡ ತಲೆಗಳು ಸೋಲು ಕಾಣಲಿದೆ ಎಂದು ಕೋಡಿಮಠ ಶ್ರೀಗಳಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

Join Nadunudi News WhatsApp Group

Join Nadunudi News WhatsApp Group