Kodi Mutt: ಜೈನ ಮುನಿಗಳ ಸಾವಿನ ನಡುವೆ ಇನ್ನೊಂದು ಆಘಾತಕಾರಿ ಭವಿಷ್ಯ ನುಡಿದ ಕೊಡಿ ಮಠದ ಸ್ವಾಮಿಗಳು, ಕಾದಿದೆ ಗಂಡಾಂತರ.
ಜೈನ ಮುನಿಗಳ ಹತ್ಯೆಯ ಬಗ್ಗೆ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು.
Kodi Mutt Swamiji About Jain Muni: ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠದ ಶ್ರೀಗಳು ಈಗಾಗಲೇ ಸಾಕಷ್ಟು ವಿಷಯಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಆ ಭವಿಷ್ಯ ಇದೀಗ ನಿಜವಾಗಿದೆ. ರಾಜಕೀಯ, ವಿದ್ಯಮಾನ, ಮಳೆ ಮೊದಲಾದ ವಿಚಾರಗಳ ಬಗ್ಗೆ ಕೋಡಿಮಠ ಶ್ರೀಗಳಾದ ಡಾ.
ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯವಾಣಿ ನುಡಿಯುತ್ತಾರೆ. ಇವರ ಭವಿಷ್ಯಗಳು ನಿಖರವಾಗಿರುತ್ತದೆ ಎಂಬ ನಂಬಿಕೆ ಸಾಕಷ್ಟು ಜನರಿಗೆ ಇದೆ.
ಕೋಡಿಮಠದ ಶ್ರೀಗಳ ಭವಿಷ್ಯ
ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕೋಡಿಮಠದ ಸ್ವಾಮೀಜಿ ನುಡಿದಿದ್ದ ಭವಿಷ್ಯ ನಿಜವಾಗಿದೆ. ಯಾವುದೇ ಪಕ್ಷಗಳು ಒಟ್ಟಾಗಿ ಹೋಗುವುದಿಲ್ಲ ಪಕ್ಷಾಂತರಗಳು ಹೆಚ್ಚಲಿವೆ. ಆದರೆ ಒಂದೇ ಪಕ್ಷ ಅಧಿಕಾರವನ್ನು ಪಡೆಯಲಿದೆ ಎಂದು ಹೇಳಿದ್ದರು. ಅದರಂತೆ ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಅಧಿಕಾರಕ್ಕೆ ಬಂದಿದೆ. ಸದ್ಯ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಕಂಟಕ ಇಲ್ಲ. ಈಗಷ್ಟೇ ಮಗು ಹಾಲು ಕುಡಿಯಲು ಆರಂಭಿಸಿದೆ. ಮಗು ಚೆನ್ನಾಗಿ ಬೆಳೆಯಲಿ ಯಾವ ತೊಂದರೆಯು ಇಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ದೇಶದಲ್ಲಿ ಇನ್ನು ಹಲವೆಡೆ ಪ್ರಾಕೃತಿಕ ವಿಕೋಪ ಸಂಭವಿಸುವ ಲಕ್ಷಣ ಇದೆ. ಜೊತೆಗೆ ಮನುಷ್ಯರು ಮೃಗದಂತೆ ವರ್ತಿಸಿ ವಿಕೋಪ ಸಂಭವಿಸಬಹುದು ಎಂದು ಕೊಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಕೋಲಾರದ ಲಕ್ಷ್ಮಿ ಸಾಗರ ಗ್ರಾಮದ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿರುವ ಕೊಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ದೇಶದಲ್ಲಿ ಇನ್ನಷ್ಟು ರೋಗ ರುಜಿನ ಹೆಚ್ಚುವ ಲಕ್ಷಣಗಳಿವೆ ಎಂದು ತಿಳಿಸಿದ್ದಾರೆ.
ಜೈನ ಮುನಿಗಳ ಹತ್ಯೆಯ ಬಗ್ಗೆ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಇನ್ನು ಕೊಡಿ ಮಠದ ಶ್ರೀಗಳು ಜೈನ ಮುನಿಗಳ ಹತ್ಯೆಯ ಬಗ್ಗೆ ಮಾತನಾಡಿದ್ದಾರೆ. ಜೈನ ಮುನಿಗಳ ಹತ್ಯೆ ನಡೆಯಬಾರದಿತ್ತು. ಆದರೆ ನಡೆದು ಹೋಯಿತು. ಮುಂದೆ ಆಗದಂತೆ ಎಚ್ಚರ ವಹಿಸಬೇಕು ಎಂದು ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ.
ಅಲ್ಲದೆ ಈ ಘಟನೆಯಿಂದ ಸರ್ವಸಂಗ ಪರಿತ್ಯಾಗಿಗಳಿಗೂ ಕಂಟಕ ಇದೆಯೆಂದು ತಿಳಿದಿದೆ. ಅಂಥವರಿಗೆ ಕಂಟಕ ಇದ್ದರೆ ಯಾರನ್ನು ತಾನೇ ಬಿಡಬಹುದು. ಮನುಷ್ಯನ ಕ್ರೌರ್ಯಕ್ಕೆ ಜೈನ ಮುನಿಗಳ ಸಾವು ಉದಾಹರಣೆ ಎಂದು ತಿಳಿಸಿದರು.