Kodi Prediction: ಸರ್ಕಾರದ ಬಗ್ಗೆ ಇನ್ನೊಂದು ಸ್ಪೋಟದ ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು, ನಿಜವಾಗುತ್ತಾ ಈ ಭವಿಷ್ಯ…?
ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮೀಜಿಯವರು ರಾಜ್ಯ ಹಾಗೂ ರಾಷ್ಟ್ರಾ ರಾಜಕೀಯದ ಬಗ್ಗೆ ಭವಿಷ್ಯವಾಣಿ ನುಡಿದಿದ್ದಾರೆ.
Kodi Mutt Shivayogi Shivananda Rajendra Swamiji: ಕೊಡಿ ಮಠದ ಶಿವಯೋಗಿ ಶಿವಾನಂದ ರಾಜೇಂದ್ರ (Shivayogi Shivananda Rajendra) ಸ್ವಾಮೀಜಿಯವರು ಸದ್ಯದಲ್ಲಿ ಸಂಭವಿಸಲಿರುವ ಕೆಲವು ವಿಸ್ಮಯಕಾರಿ ಸಂಗತಿಗಳ ಬಗ್ಗೆ ಆಗಾಗ ಮಾಹಿತಿ ನೀಡುತ್ತಾ ಇರುತ್ತಾರೆ. ಶ್ರೀಗಳ ಭವಿಷ್ಯವಾಣಿ ಸಾಕಷ್ಟು ನಿಜವಾಗಿದೆ.
ಹೀಗಾಗಿ ಶ್ರೀಗಳ ಭವಿಷ್ಯವಾಣಿ ಕೇಳಲು ಎಲ್ಲರು ಕುತೂಹಲರಾಗಿರುತ್ತಾರೆ. ಈಗಾಗಲೇ ಶ್ರೀಗಳು 2024 ರಲ್ಲಿ ಸಂಭವಿಸಲಿರುವ ಕೆಲವು ಅನಾಹುತಗಳ ಬಗ್ಗೆ ಸೂಚನೆ ನೀಡಿದ್ದಾರೆ. ದೇಶದ ನಾಲ್ಕು ಮಹಾನ್ ವ್ಯಕ್ತಿಗಳಿಗೆ ಎದುರಾಗುವ ಕೆಡುಕಿನ ಬಗ್ಗೆ ಕೂಡ ಶ್ರೀಗಳು ಮಾಹಿತಿ ನೀಡಿದ್ದರು.
ಮತ್ತೊಂದು ಆಘಾತಕಾರಿ ಭವಿಷ್ಯವಾಣಿ ನುಡಿದ ಶ್ರೀಗಳು
ಮುಂದೆ ಸಂಭವಿಸಲಿರುವ ಕೆಡುಕುಗಳ ಬಗ್ಗೆ ಶ್ರೀಗಳು ಆಗಾಗ ಎಚ್ಚರಿಕೆ ನೀಡುತ್ತಾರೆ. ಕೆಲವು ಸಮಯದ ಹಿಂದೆ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯ ಕುರಿತು ಮಹತ್ವದ ಭವಿಷ್ಯವನ್ನು ನುಡಿದಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರವನ್ನು ಪಡೆಯುತ್ತದೆ ಎನ್ನುವ ಬಗ್ಗೆ ಸ್ವಾಮೀಜಿಯವರು ಭವಿಷ್ಯವಾಣಿ ನುಡಿದಿದ್ದರು. ನಂತರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯ ಬಗ್ಗೆ ಕೂಡ ಶ್ರೀಗಳು ಮಾತನಾಡಿದ್ದರು. ಇದೀಗ ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮೀಜಿಯವರು ಸರ್ಕಾರದ ಬಗ್ಗೆ ಇನ್ನೊಂದು ಸ್ಪೋಟದ ಭವಿಷ್ಯ ನುಡಿದಿದ್ದಾರೆ.
ಸರ್ಕಾರದ ಬಗ್ಗೆ ಇನ್ನೊಂದು ಸ್ಪೋಟದ ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು
ಹುಬ್ಬಳ್ಳಿಯಲ್ಲಿ ಇಂದು ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮೀಜಿಯವರು ರಾಜ್ಯ ಹಾಗೂ ರಾಷ್ಟ್ರ ರಾಜಕೀಯದ ಬಗ್ಗೆ ಭವಿಷ್ಯವಾಣಿ ನುಡಿದಿದ್ದಾರೆ. ” ರಾಜ್ಯ ಹಾಗೂ ರಾಷ್ಟ್ರಾ ರಾಜಕೀಯದಲ್ಲಿ ಮಹತ್ವದ ಅಸ್ಥಿರತೆ ಉಂಟಾಗಲಿದೆ. ಯುಗಾದಿಯ ನಂತರ ಏನಾಗುತ್ತದೆ ಎಂದು ಕಾದು ನೋಡಿ” ಎಂಬುದಾಗಿ ತಿಳಿಸಿದ್ದಾರೆ.
ಈ ವರ್ಷವೂ ಮಳೆಗೂ ಯಾವುದೇ ತೊಂದರೆ ಇಲ್ಲ. ಅನ್ನಕ್ಕೂ ಕೊರತೆಯಿಲ್ಲ. ದೇಶ, ರಾಜ್ಯದಲ್ಲಿ ವಿಪರೀತ ಮಳೆಯಾಗೋ ಲಕ್ಷಣವಿದೆ. ಮೊನ್ನೆ ಬಂದ ರೀತಿಯಲ್ಲೇ ಇನ್ನು ಭಾರಿ ಮಳೆ ಬರಲಿದೆ. ಗುಡುಗು ಸಹಿತ ಮಳೆಯಿಂದ ಅಪಮೃತ್ಯು ಉಂಟಾಗಲಿದೆ. ಪ್ರಕ್ರತಿಯಿಂದಲೂ ಬಹಳ ಹಾನಿಯಾಗಲಿದೆ.
ರಾಜ್ಯ ಸರ್ಕಾರದ ಬಗ್ಗೆ ಶ್ರೀಗಳ ಹೇಳಿಕೆ
‘ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗುತ್ತಿದೆ, ಆದರೆ ಏನು ಆಗೋದಿಲ್ಲ. ನೋಡೋರಿಲ್ಲ, ಕೇಳೋರಿಲ್ಲ, ಆನಂದ ಪಡುವವರಿಲ್ಲ. ಜೊತೆಗೆ ರಾಜ್ಯ ಸರ್ಕಾರಕ್ಕೆ ಏನೂ ತೊಂದರೆ ಆಗೋದಿಲ್ಲ. ಇದನ್ನು ಬಿಟ್ಟು ನಾನು ಏನು ಹೇಳಲ್ಲ. ನನಗೆ ಎಲ್ಲರೂ ಬೇಕಾಗಿರೋರು. ಇದೀಗ ಇಂದು ಕೊಡಿ ಮಠದ ಶ್ರೀಗಳು ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಯುಗಾದಿ ವೇಳೆಗೆ ಅಸ್ಥಿರತೆ ಕಾಡಲಿದೆ’ ಎಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.