CM Siddaramaiah: ಸಿದ್ದರಾಮಯ್ಯ ಎಷ್ಟು ವರ್ಷ ಅಧಿಕಾರದಲ್ಲಿ ಇರುತ್ತಾರೆ, ಸ್ಪೋಟಕ ಭವಿಷ್ಯ ನುಡಿದ ಕೊಡಿ ಶ್ರೀಗಳು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಬಗ್ಗೆ ಅಚ್ಚರಿಯ ಮಾಹಿತಿ ನೀಡಿದ ಕೊಡಿ ಮಠದ ಶ್ರೀಗಳು.

Kodi Mutt Swamy About Siddaramaiah: ಕೊಡಿ ಮಠದ ಶಿವಯೋಗಿ ಶಿವಾನಂದ ರಾಜೇಂದ್ರ (Shivayogi Shivananda Rajendra) ಸ್ವಾಮೀಜಿಯವರು ಇದೀಗ ಸುದ್ದಿಯಾಗಿದ್ದಾರೆ. ಶ್ರೀಗಳು ರಾಜ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಷಯಗಳ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ಈ ಹಿಂದೆ ಮೇ 10 ರಂದು ನಡೆದಿದ್ದ ವಿಧಾನಸಭಾ ಚುನಾವಣೆಯ ಬಗ್ಗೆ ಭವಿಷ್ಯವನ್ನು ನುಡಿದ್ದರು. ಯಾರು ಈ ಬಾರಿ ಅಧಿಕಾರವನ್ನು ಪಡೆಯುತ್ತಾರೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದರು.

Kodi Mutt Shivananda Rajendra Swamiji
Image Credit: Oneindia

ಕೊಡಿ ಮಠದ ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮೀಜಿ
ವಿಧಾನಸಭಾ ಚುನಾವಣೆಯಾ ಬಗ್ಗೆ ಜಗತ್ತಿನಲ್ಲಿ ಸಂಭವಿಸಲಿರುವ ಕೆಲವು ಅಪಾಯವನ್ನು ಕೂಡ ಶ್ರೀಗಳು ಸೂಚನೆ ನೀಡಿದ್ದರು. ಇನ್ನು ಮುಂಬರುವ ಲೋಕಸಭಾ ಚುನಾವಣೆಯ ಕುರಿತು ಶ್ರೀಗಳು ಪರೋಕ್ಷವಾಗಿ ಉತ್ತರಸಿದ್ದರು. ಇತ್ತೀಚೆಗಷ್ಟೇ ದೇಶದ ಮಹಾನ್ ವ್ಯಕ್ತಿಗಳಿಗೆ ಎದುರಾಗುವ ಕಂಟಕದ ಬಗ್ಗೆ ಕೂಡ ಮಾತನಾಡಿದ್ದರು.

ಮೂರು ಮಂದಿ ಮಹಾನ್ ವ್ಯಕ್ತಿಗಳಿಗೆ ಅಪಾಯವಿದೆ. ನಮ್ಮನ್ನು ಆಳುವವರು ಎಚ್ಚರ ವಹಿಸಿದರೆ ಈ ಧುರ್ಘಟನೆ ತಪ್ಪಿಸಬಹುದು. ಕಾಲ ಬಂದಾಗ ನಾನೆ ಎಲ್ಲವನ್ನು ವಿವರಿಸುತ್ತೇನೆ. ಜೀವನ ಆಡಂಬರ ರಹಿತವಾಗಿರಬೇಕು. ಅದ್ಯಾತ್ಮಿಕವಾದ ಚಿಂತನೆ ನಮ್ಮಲಿರಬೇಕು ಎಂದು ಶ್ರೀಗಳು ಭವಿಷ್ಯವಾಣಿ ನುಡಿದಿದ್ದರು. ಇದರ ಬೆನ್ನಲ್ಲೇ ಇದೀಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ರಾಜಕೀಯ ಭವಿಷ್ಯದ ಬಗ್ಗೆ ಅಚ್ಚರಿಯ ಮಾಹಿತಿ ನೀಡಿದ್ದಾರೆ.

Kodi Mutt Shri About Siddaramaiah
Image Credit: Vistaranews

ಸಿದ್ದರಾಮಯ್ಯ ಅವರ ಅಧಿಕಾರದ ಬಗ್ಗೆ ಶ್ರೀಗಳ ಭವಿಷ್ಯವಾಣಿ
ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರಾವಧಿಯ ಬಗ್ಗೆ ಕೊಡಿ ಮಠದ ಶ್ರೀಗಳು ಭವಿಷ್ಯವಾಣಿ ನುಡಿದಿದ್ದಾರೆ. “ಸದ್ಯಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ತೊಂದರೆ ಆಗೋದಿಲ್ಲ. ಆದರೆ ಲೋಕಸಭಾ ಚುನಾವಣೆಯ ಬಳಿಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 5 ವರ್ಷ ಮುಂದುವರೆಯುತ್ತಾರೆ ಎನ್ನುವ ಬಗ್ಗೆ ನಿರ್ಧಾರ ಆಗಲಿದೆ” ಎಂಬುವುದಾಗಿ ಭವಿಷ್ಯ ನುಡಿದಿದ್ದಾರೆ.

ಮಳೆಯ ಬಗ್ಗೆ ಶ್ರೀಗಳ ಭವಿಷ್ಯ
ರಾಜ್ಯದಲ್ಲಿ ಮಳೆ ಬರಲಿದೆ. ತೊಂದರೆ ಇಲ್ಲ. ರೈತರು ಆತಂಕ ಪಡುವ ಅಗತ್ಯ ಇಲ್ಲ. ಹಿಂದೆ ಒಂದು ಬಾರಿ ಮಳೆ ಬಂದಂತೆ ಇನ್ನೊಂದು ಬಾರಿ ಮಳೆ ಆಗಲಿದೆ. ಶ್ರಾವಣದಲ್ಲೇ ಮಳೆಯ ಬಗ್ಗೆ ಎಲ್ಲರಿಗು ತಿಳಿಯಲಿದೆ. ಮಳೆ, ಗುಡು, ಭೂಮಿ, ಬಿರುಕು ಬಿಡುವುದು, ದ್ವೇಷ ಹೆಚ್ಚಾಗುವುದು, ಅಪಮೃತ್ಯುವಂತ ಘಟನೆಗಳು ಘಟಿಸಲಿವೆ ಎನ್ನುವುದಾಗಿ ಶ್ರೀಗಳು ಭವಿಷ್ಯವಾಣಿ ನುಡುದಿದ್ದಾರೆ.

Join Nadunudi News WhatsApp Group

Join Nadunudi News WhatsApp Group