Kodi Mutt Predict: ರಾಜ್ಯ ಸರ್ಕಾರದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು, ಗೊಂದಲದಲ್ಲಿ ಜನರು.
ರಾಜ್ಯ ಸರ್ಕಾರದ ಬಗ್ಗೆ ಇನ್ನೊಂದು ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು
Kodi Mutt Latest: ಕೊಡಿ ಮಠದ (Kodi Mutt) ಸ್ವಾಮಿಗಳು ಈಗಾಗಲೇ ಹಲವು ಭವಿಷ್ಯವನ್ನ ನುಡಿಯುವುದರ ಮೂಲಕ ಹೆಸರುವಾಸಿ ಆಗಿದ್ದಾರೆ ಎಂದು ಹೇಳಬಹುದು. ಹೌದು ರಾಜ್ಯ ರಾಜಕಾರಣ, ಕರೋನ ಸೋಂಕು, ಮುಂದಿನ ದಿನಗಳಲ್ಲಿ ಆಗುವ ಕೆಲವು ಘಟನೆಗಳ ಬಗ್ಗೆಭವಿಷ್ಯವನ್ನ ನುಡಿಯುವುದರ ಮೂಲಕ ಬಹಳ ಫೇಮಸ್ ಆಗಿರುವ ಕೊಡಿ ಮಠದ ಸ್ವಾಮಿಗಳು ಈಗ ಮತ್ತೆ ತಮ್ಮ ಭವಿಷ್ಯದ ಮೂಲಕ ಬಹಳ ಚರ್ಚೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.
ಹೌದು ರಾಜ್ಯ ರಾಜಕಾರಣದ ಬಗ್ಗೆ ಕೊಡಿ ಮಠದ ಶ್ರೀಗಳು ಇನ್ನೊಂದು ಭವಿಷ್ಯವನ್ನ ನುಡಿದಿದ್ದು ಸದ್ಯ ಅವರ ಈ ಭವಿಷ್ಯ ಬಹಳ ಚರ್ಚೆಗೆ ಒಳಗಾಗುತ್ತಿದೆ ಎಂದು ಹೇಳಬಹುದು.
ಕರೋನ ಸೋಂಕಿನ ಬಗ್ಗೆ ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು
ಹೌದು ಕರೋನ ದೇಶದಲ್ಲಿ ಕಾಣಿಸಿಕೊಳ್ಳುವ ಮೊದಲು ಕೊಡಿ ಮಠದ ಶ್ರೀಗಳು ಭವಿಷ್ಯವನ್ನ ಸೋಂಕಿನ ಬಗ್ಗೆ ಭವಿಷ್ಯವನ್ನ ನುಡಿದಿದ್ದರು ಎಂದು ಹೇಳಬಹುದು. ಹೌದು ಭೂಮಿಯ ಮೇಲೆ ಸೋಂಕು ಕಾಣಿಸಿಕೊಳ್ಳಲಿದ್ದು ಲಕ್ಷಾಂತರ ಜನರು ತಮ್ಮ ಪ್ರಾಣವನ್ನ ಕಳೆದುಕೊಳ್ಳಲಿದ್ದಾರೆ ಎಂದು ಕೊಡಿ ಮಠದ ಶ್ರೀಗಳು ಭವಿಷ್ಯವನ್ನ ನುಡಿದಿದ್ದು ಆ ಭವಿಷ್ಯ ಕೂಡ ನಿಜವಾಗಿದೆ.
ಪ್ರವಾಹದ ಬಗ್ಗೆ ಭವಿಷ್ಯ ನುಡಿದಿದ್ದ ಕೊಡಿ ಮಠದ ಶ್ರೀಗಳು
ಅದೇ ರೀತಿಯಲ್ಲಿ ಕೊಡಿ ಮಠದ ಶ್ರೀಗಳು ಪ್ರವಾಹದ ಬಗ್ಗೆ ಕೂಡ ಭವಿಷ್ಯವನ್ನ ನುಡಿದಿದ್ದರು. ಪ್ರವಾಹದ ಕಾರಣ ಸಾಕಷ್ಟು ಜನರು ಅಪಾಯಕ್ಕೆ ಸಿಲುಕಿಕೊಂಡು ಸಾಕಷ್ಟು ಜನರು ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದರು. ಸದ್ಯ ಈಗ ಕೊಡಿ ಮಠದ ಶ್ರೀಗಳು ಇನ್ನೊಂದು ಭವಿಷ್ಯವನ್ನ ನುಡಿದಿದ್ದು ಆ ಭವಿಷ್ಯ ಕೂಡ ನಿಜವಾಗುವ ಲಕ್ಷಣ ಇದೆ ಎಂದು ಹೇಳಬಹುದು. ರಾಜ್ಯ ರಾಜಕಾರಣದ ಬಗ್ಗೆ ಕೊಡಿ ಮಠದ ಶ್ರೀಗಳು ಭವಿಷ್ಯವನ್ನ ನುಡಿದಿದ್ದಾರೆ.
ರಾಜ್ಯ ಸರ್ಕಾರದ ಬಗ್ಗೆ ಭವಿಷ್ಯ ನುಡಿದ ಕೊಡಿ ಶ್ರೀಗಳು
ಮಾಧ್ಯಮಗಳ ಮುಂದೆ ಭವಿಷ್ಯವನ್ನ ನುಡಿದ ಕೊಡಿ ಮಠದ ಶ್ರೀಗಳು ಮುಂದಿನ ದಿನಗಳ ಬಗ್ಗೆ ಮಾತನಾಡಿದ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಲಿದ್ದು ಅನ್ನಕ್ಕೆ ಕೊರತೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ರಾಜ್ಯ ಸರ್ಕಾರದ ಭವಿಷ್ಯ ನುಡಿದ ಶ್ರೀಗಳು ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗುತ್ತಿದೆ ಎಂದು ಹೇಳಿದ್ದಾರೆ.
“ನೋಡೋರಿಲ್ಲ, ಕೇಳೋರಿಲ್ಲ, ಆನಂದ ಪಡುವವರಿಲ್ಲ, ಜೊತೆ ರಾಜ್ಯ ಸರ್ಕಾರಕ್ಕೆ ಏನು ತೊಂದರೆ ಆಗುವುದಿಲ್ಲ ಮತ್ತು ಇದನ್ನಾ ಬಿಟ್ಟು ನಾನು ಏನು ಹೇಳಲ್ಲ” ಎಂದು ಸರ್ಕಾರದ ಬಗ್ಗೆ ಕೊಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದರೆ. ಇನ್ನು ಸ್ವಾಮಿಗಳ ಭವಿಷ್ಯವನ್ನ ಕೇಳಿದ ಜನರು ಒಮ್ಮೆ ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ರಾಜ್ಯ ಸರ್ಕಾರಕ್ಕೆ ಏನು ತೊಂದರೆ ಇಲ್ಲ ಎಂದು ಕೊಡಿ ಮಠದ ಶ್ರೀಗಳು ಮಾಧ್ಯಮಗಳ ಮುಂದೆ ಭವಿಷ್ಯ ನುಡಿದಿದ್ದಾರೆ.