ಈ ಭೂಮಿಗೆ ಕಾದಿದೆ ದೊಡ್ಡ ಗಂಡಾಂತರ, ಶಾಕಿಂಗ್ ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು, ಏನಾಗಲಿದೆ ನೋಡಿ.

ಮಾನವ ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳನ್ನ ಮಾನವ ಈ ಜನ್ಮದಲ್ಲಿ ಅನುಭವಿಸುತ್ತಿದ್ದಾನೆ ಎಂದು ಹೇಳಬಹುದು. ಹೌದು ಕರೋನ ಮಹಾಮಾರಿ ಕಾಣಿಸಿಕೊಂಡ ನಂತರ ಈ ಭೂಮಿಯ ಮೇಲೆ ಅದೆಷ್ಟೋ ಜನರು ತಮ್ಮ ಪ್ರಾಣವನ್ನ ಕಳೆದುಕೊಂಡರು ಮತ್ತು ಈಗಲೂ ಕೂಡ ಸಾಯುವವರ ಸಂಖ್ಯೆ ಗಣನೀಯವಾಗಿ ಮುಂದುವರೆಯುತ್ತಲೇ ಇದೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ದಿನದಿಂದಿಂದ ದಿನಕ್ಕೆ ಒಂದೊಂದು ಶಾಕಿಂಗ್ ಸುದ್ದಿ ಬಂದಿದ್ದು ಜನರು ತತ್ತರಿಸುತ್ತಿದ್ದಾರೆ ಎಂದು ಹೇಳಬಹುದು. ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ ಅವರು ಬಹಳ ಹಿಂದೇನೆ ಭವಿಷ್ಯವನ್ನ ನುಡಿದಿದ್ದರು ಮತ್ತು ಈ ಭೂಮಿಗೆ ಗಂಡಾತರ ಕಾದಿದೆ ಜನರು ಅಪಾಯಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದರು.

ಇನ್ನು ಈಗ ಮತ್ತೆ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ ದೊಡ್ಡ ಭವಿಷ್ಯವನ್ನ ನುಡಿದಿದ್ದು ಇದು ಜನರ ಶಾಕ್ ಗೆ ಕಾರಣವಾಗುತ್ತಿದೆ ಎಂದು ಹೇಳಬಹುದು. ಹಾಗಾದರೆ ಆ ಭವಿಷ್ಯ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ತಿರುಮಲ ಮತ್ತು ಕರ್ನಾಟಕ ಮತ್ತು ವಿವಿಧ ರಾಜ್ಯಗಳಲ್ಲಿ ಮಳೆಯ ಆರ್ಭಟ ಬಹಳ ಜೋರಾಗಿದ್ದು ಜನಜೀವನ ಅಸ್ತವೆಸ್ತವಾಗಿದೆ ಎಂದು ಹೇಳಬಹುದು. ಇನ್ನು ಇದರ ಕುರಿತಂತೆ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ ಭವಿಷ್ಯವನ್ನ ನುಡಿದಿದ್ದು ಇದು ಜನರಲ್ಲಿ ಇನ್ನಷ್ಟು ನಡುಕವನ್ನ ಹುಟ್ಟಿಸಿದೆ ಎಂದು ಹೇಳಬಹುದು.

Kodimata bhavishya

ಹೌದು ರಾಜ್ಯದಲ್ಲಿ ಇನ್ನು ಮಳೆಯ ಕಾಟ ಇರಲಿದೆ ಎಂದು ಕೊಡಿ ಮಠದ ಸ್ವಾಮಿಗಳು ಧಾರವಾಡದಲ್ಲಿ ಭವಿಷ್ಯವನ್ನ ನುಡಿದಿದ್ದಾರೆ. ರಾಜ್ಯದಲ್ಲಿ ಇನ್ನೂ ಇದೆ ಮಳೆ ಕಾಟ. ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲೋದಿಲ್ಲ ಎಂದು ಧಾರವಾಡದಲ್ಲಿ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ರಾಜ್ಯದಲ್ಲಿ ಇನ್ನಷ್ಟು ಮಳೆಯ ಆರ್ಭಟ ಇರಲಿದ್ದು ಮುಂದಿನ ಕಾರ್ತಿಕ ಕಳೆಯುವ ತನಕ ಮಳೆಯ ಆರ್ಭಟ ಹೀಗೆ ಇರಲಿದೆ ಎಂದು ಸ್ವಾಮಿಗಳು ಹೇಳಿದ್ದಾರೆ. ಪ್ರಕೃತಿ ಮುನಿಸಿಕೊಂಡು ವಿಕೋಪಕ್ಕೆ ಆಗಿದೆ, ಏನೂ ಮಾಡಲು ಆಗುವುದಿಲ್ಲ. ಅನಾಹುತಗಳು ಹೆಚ್ಚಾಗುವ ಸಾಧ್ಯತೆ ಇದೆ. ಸಂಕ್ರಾಂತಿವರೆಗೂ ಮಳೆ ಇರುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

ಸ್ವಾಮಿಗಳು ಬಹಳ ಹಿಂದೇನೆ ಇದರ ಕುರಿತು ಭವಿಷ್ಯವನ್ನ ನುಡಿದಿದ್ದರು ಮತ್ತು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಹಳ ಮಳೆಯಾಗಲಿದೆ ಎಂದು ಸ್ವಾಮಿಗಳು ಹೇಳಿದ್ದರು ಮತ್ತು ಅವರು ಹೇಳಿದ ಆ ಭವಿಷ್ಯ ಇಂದು ನಿಜವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಇನ್ನು ಇದರ ಜೊತೆಗೆ ದೈವ ಕೃಪೆಯಿಂದ ಒಳ್ಳೆಯ ದಿನಗಳು ಬರಲಿವೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶ್ರೀಗಳು ಭವಿಷ್ಯ ನುಡಿದಿದ್ದರು. ಕುಂಭದಲ್ಲಿ ಗುರುಗ್ರಹ ಅಂದ್ರೆ ತುಂಬುವವು ಕೆರೆ ಕಟ್ಟೆ. ಜಲಗಂಡಾಂತರ ಇನ್ನೂ ಇದೆ. ನೂತನ‌ ಸಿಎಂ ಬಗ್ಗೆ ಈಗಲೇ ಏನನ್ನು ಹೇಳಬಾರದು. ಏನನ್ನು ಅಶುಭ ನುಡಿಯಬಾರದು. ಕಾರ್ತಿಕ ಮಾಸ ಕಳೆದ ನಂತರ ಹೇಳುತ್ತೇನೆ ಎಂದು ಕೋಲಾರ ತಾಲ್ಲೂಕು ಲಕ್ಷ್ಮೀಸಾಗರ ಗ್ರಾಮದಲ್ಲಿ ಕೋಡಿ ಮಠದ ಶ್ರೀ ಶಿವಾನಂದ ಶ್ರೀಗಳು ಹೇಳಿದ್ದರು.

Join Nadunudi News WhatsApp Group

Kodimata bhavishya

Join Nadunudi News WhatsApp Group