Komaki Flora EV: ಒಂದೇ ಚಾರ್ಜ್ ನಲ್ಲಿ 100km ಮೈಲೇಜ್, ಕಡಿಮೆ ಬೆಲೆಗೆ ಬಿಡುಗಡೆ ಆಯ್ತು Komaki Flora EV.

ಕಡಿಮೆ ಬೆಲೆಗೆ ಬಿಡುಗಡೆ ಆಯ್ತು Komaki Flora EV

Komaki Flora Electric Scooter: ಸ್ಕೂಟರ್ (Scooter) ಖರೀದಿಸುವ ಆಸೆ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಆದರೆ ಇಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಗಳ ಬೆಲೆ ಏರಿಕೆಯಾಗುತ್ತಲೇ ಇರುತ್ತದೆ. ಇದರಿಂದಾಗಿ ಎಷ್ಟೋ ಜನರ ಸ್ಕೂಟರ್ ಖರೀದಿಸುವ ಆಸೆ ಹಾಗೆಯೆ ಉಳಿದುಬಿಡುತ್ತದೆ.

ಈಗ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಒಂದು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಹೌದು ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಒಂದನ್ನು ದ್ವಿಚಕ್ರ ವಾಹನ ಕಂಪನಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸುವ ಮೂಲಕ ನಿಮ್ಮ ಸ್ಕೂಟರ್ ಖರೀದಿಯ ಆಸೆಯನ್ನು ನೀವು ನನಸು ಮಾಡಿಕೊಳ್ಳಬಹುದು.

Komaki Flora Electric Scooter
Image Credit: Rewariyasat

ಕಡಿಮೆ ಬೆಲೆಗೆ ಬಿಡುಗಡೆ ಆಯ್ತು Komaki Flora EV
ಕೋಮಾಕಿ ಫ್ಲೋರಾ ಎಲೆಕ್ಟ್ರಿಕ್ ಸ್ಕೂಟರ್ ಬಜೆಟ್ ಸ್ಕೂಟರ್ ಆಗಿರುವುದು ವಿಶೇಷವಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೋಮಾಕಿ ದ್ವಿಚಕ್ರ ವಾಹನ ಕಂಪನಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಕೋಮಾಕಿ ಫ್ಲೋರಾ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ 69 ಸಾವಿರ. ಈ ಸ್ಕೂಟರ್ ನಾಲ್ಕು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ. ಇದರ ಬ್ಯಾಟರಿ ಯನ್ನು ಸುಲಭವಾಗಿ ತೆಗೆಯುವ ರೀತಿಯಲ್ಲಿ ಇದನ್ನು ತಯಾರಿಸಲಾಗಿದೆ. ಕಡಿಮೆ ಖರ್ಚಿನೊಂದಿಗೆ ಸ್ಕೂಟರ್ ತುಂಬಾ ಸುಂದರವಾಗಿದೆ.

ಆಕರ್ಷಕವಾದ ಹೆಡ್ ಲ್ಯಾಂಪ್ ಗಳು,ಆರಾಮದಾಯಕವಾಗಿರುವ ಆಸನಗಳು ಪ್ರಯಾಣಿಕರನ್ನು ಎಲೆಕ್ಟ್ರಿಕ್ ಸ್ಕೂಟರ್ನತ್ತ ಸೆಳೆಯುತ್ತಿದೆ. ಹಿಂದೆ ಪ್ರಯಾಣಿಸುವವರಿಗೆ ಹೆಚ್ಚುವರಿಯಾಗಿ ಬ್ಯಾಕ್ ರೆಸ್ಟ್ ಕೂಡ ಇದೆ. ಇದು ಡ್ಯುಯಲ್ ಫೂಟ್ ರೆಸ್ಟ್ ಮತ್ತು ಪ್ಲಾಟ್ ಫುಟ್ ಬೋರ್ಡ್ ಅನ್ನು ಹೊಂದಿದೆ. ಸೊಗಸಾದ ಡ್ಯಾಶ್ ಬೋರ್ಡ್, ರಿವರ್ಸ್ ಗೇರ್, ಪಾರ್ಕಿಂಗ್ ಮತ್ತು ಕ್ರೋಸ್ ಕಂಟ್ರೋಲ್ ನೊಂದಿಗೆ ಸ್ವಯಂ ಡಯಾಗ್ನೋಸ್ಟಿಕ್ ಮೀಟರ್ ನಂತಹ ಸೌಲಭ್ಯಗಳನ್ನು ಈ ಸ್ಕೂಟರ್ ಒಳಗೊಂಡಿದೆ.

Komaki Flora EV Price
Image Credit: Original Source

ಒಂದೇ ಚಾರ್ಜ್ ನಲ್ಲಿ 100km ಮೈಲೇಜ್
Komaki Flora Electric Scooter ನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಹೊಂದಿದೆ. ಸ್ಕೂಟರ್ ಅನ್ನು ಸಂಪೂರ್ಣ ಚಾರ್ಜ್ ಮಾಡಿದರೆ 80 ರಿಂದ 100 ಕಿ.ಮೀ ಓಡಿಸಬಹುದು. ಬ್ಯಾಟರಿ ಅನ್ನು ಸಂಪೂರ್ಣ ವಾಗಿ ಚಾರ್ಜ್ ಮಾಡಲು 2 ರಿಂದ 3 ಗಂಟೆಗಳು ಬೇಕಾಗಬಹುದು. ಫಾಸ್ಟ್ ಚಾರ್ಜರ್ ನ ಮೂಲಕ ಇನ್ನು ಕಡಿಮೆ ಸಮಯದಲ್ಲಿ ಚಾರ್ಜ್ ಮಾಡಿಕೊಳ್ಳಬಹುದು. Jet Black, Garnet Red, Steel Gray and Sacramento Green ನ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಈ ಮಾದರಿಯನ್ನು ಖರೀದಿಸಬಹುದು.

Join Nadunudi News WhatsApp Group

Join Nadunudi News WhatsApp Group