Ads By Google

Nikita Thukral: ಕೋಮಲ್ ಮೇಲೆ ಕಂಪ್ಲೇಂಟ್ ಮಾಡಲು ಮುಂದಾದ ನಿಖಿತಾ, ಘಟನೆ ಬಗ್ಗೆ ತಿಳಿಸಿದ ಕೋಮಲ್.

Actor Komal Kumar And Nikita

Imageg Source: Youtube

Ads By Google

Actor Komal Kumar And Nikita: ಕನ್ನಡ ಚಿತ್ರರಂಗದ ಹಾಸ್ಯ ನಾಯಕ ನಟ ಕೋಮಲ್ ಕುಮಾರ್ (Koaml Kumar) ಸತತ ಎಂಟು ವರ್ಷಗಳ ನಂತರ ಚಿತ್ರರಂಗಕ್ಕೆ ತಿರುಗಿ ಬಂದಿದ್ದಾರೆ. ಉಂಡೆನಾಮ ಎನ್ನುವ ಸಿನಿಮಾದಲ್ಲಿ ನಟ ಕೋಮಲ್ (Komal Kumar)ಮತ್ತೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಂಡೆನಾಮ ಸಿನಿಮಾ ಇದೆ ಏಪ್ರಿಲ್ 14 ರಂದು ತೆರೆಗೆ ಬರಲಿದೆ.

ಸದ್ಯ ಈ ಸಿನಿಮಾದ ಸಲುವಾಗಿ ನಡೆದ ಸಂದರ್ಶನದಲ್ಲಿ ನಟ ಕೋಮಲ್ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನಟ ಕೋಮಲ್ ಪುನೀತ್ ರಾಜಕುಮಾರ್ (Puneeth Rajkumar) ಜೊತೆಗಿನ ವಂಶಿ ಸಿನಿಮಾವನ್ನು ನೆನಪು ಮಾಡಿಕೊಂಡು ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಕೂಡ ಒಂದಿಷ್ಟು ಮಾತನಾಡಿದ್ದಾರೆ.

Image Source: Youtube

ಪುನೀತ್ ರಾಜ್ ಕುಮಾರ್ ಬಗ್ಗೆ ಮಾತನಾಡಿದ ನಟ ಕೋಮಲ್
ನಟ ಪುನೀತ್ ರಾಜ್ ಕುಮಾರ್ ಬಗ್ಗೆ ಮಾತನಾಡಿದ ನಟ ಕೋಮಲ್ ಭಾವುಕರಾಗಿದ್ದಾರೆ. ಅವರನ್ನು ಈಗಲೂ ಇಲ್ಲ ಅಂತ ಲಕ್ಷಾಂತರ ಜನ ಕಣ್ಣೀರು ಹಾಕುತ್ತಿದ್ದಾರೆ, ಅಂತಹವರಲ್ಲಿ ನಾನು ಕೂಡ ಒಬ್ಬ. ಅವರು ಇಲ್ಲ ಅನ್ನುವ ನೋವು ನನಗು ಕಾಡುತ್ತೆ, ಆದರೆ ಅದನ್ನು ಮೀಡಿಯಾ ಮುಂದೆ ಹೇಳಲು ಇಷ್ಟ ಪಡುವುದಿಲ್ಲ ಎಂದಿದ್ದಾರೆ.

ಅರಸು ಸಿನಿಮಾ ಹಾಗು ವಂಶಿ ಸಿನಿಮಾದಲ್ಲಿ ಜೊತೆಯಾಗಿದ್ದ ಕೆಲವು ಸನ್ನಿವೇಶಗಳ ಬಗ್ಗೆ ಮಾತನಾಡಿದ್ದಾರೆ. ಅರಸು ಸಿನಿಮಾದ ವೇಳೆ ನನ್ನನ್ನು ಫಾರಿನ್ ಕರೆದುಕೊಂಡು ಹೋಗಿದ್ದರು ಎಂದಿದ್ದಾರೆ.

Image Source: Youtube

ಕೋಮಲ್ ಮೇಲೆ ಕಂಪ್ಲೇಂಟ್ ಮಾಡುತ್ತೇನೆ ಎಂದು ಹೇಳಿದ ನಿಖಿತಾ
ವಂಶಿ ಸಿನಿಮಾ ಶೂಟಿಂಗ್ ವೇಳೆ ನಿಖಿತಾ ಅಳುತ್ತ ಕುಳಿತಿದ್ದ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಅವರು ಸಮಾಧಾನ ಮಾಡಿ ಹೋಗಿದ್ದಾರಂತೆ. ಪುನೀತ್ ರಾಜ್ ಕುಮಾರ್ ಅವರು ಸಮಾಧಾನ ಮಾಡಿದ ನಂತರ ನಿಖಿತಾ ಅವರು ಖುಷಿಯಲ್ಲಿ ಕುಣಿದಿದ್ದರಂತೆ. ಇದನ್ನು ಗಮನಿಸಿದ ನಟ ಕೋಮಲ್ ಅವರು ಇದನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಹೇಳುತ್ತೇನೆ ಎಂದಿದ್ದಾರಂತೆ.

Image Source: Youtube

ಇದಕ್ಕೆ ನಿಖಿತಾ ಕೋಮಲ್ ಅವರಿಗೆ ನೀವು ನನ್ನನ್ನು ಹಿಡಿದುಕೊಳ್ಳಲು ಬಂದಿದ್ದೀರಿ ಅಂತ ಕಂಪ್ಲೇಂಟ್ ಮಾಡುತ್ತೇನೆ ಎಂದು ತಮಾಷೆಗಾಗಿ ಹೇಳಿದ್ದಾರಂತೆ. ಅದಕ್ಕೆ ನಟ ಕೋಮಲ್ ಬೇಡಮ್ಮ ಹಿಂಗೆಲ್ಲ ಹೇಳಬೇಡ ಅದು ಆಮೇಲೆ ಗಂಭೀರ ಆಗುತ್ತದೆ ಎಂದಿದ್ದಾರಂತೆ. ನಟ ಕೋಮಲ್ ಉಂಡೆನಾಮ ಸಂದರ್ಶನದ ವೇಳೆ ವಂಶಿ ಸಿನಿಮಾದ ಸಿಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.

Image Source: Filmibeat
Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in