Smart Vital Plus: ಇನ್ನುಮುಂದೆ ವಾಚ್ ನಲ್ಲಿಯೇ ಪೇಮೆಂಟ್ ಮಾಡಬಹುದು, ಈ ಸ್ಮಾರ್ಟ್ ವಾಚ್ ಗೆ ಜನರು ಫಿದಾ

ಇನ್ನುಮುಂದೆ ವಾಚ್ ನಲ್ಲಿಯೇ ಪೇಮೆಂಟ್ ಮಾಡಬಹುದು

Kotak-GOQII Smart Vital Plus Smart Watch: ಪ್ರಸ್ತುತ ದೇಶದಲ್ಲೆಡೆ UPI ಪಾವತಿ ಬಾರಿ ಬೇಡಿಕೆಯನ್ನು ಪಡೆದುಕೊಂಡಿದೆ. ಜನರು ವಿವಿಧ ಆಯ್ಕೆಯಲ್ಲಿ UPI ಪಾವತಿಯನು ಮಾಡುತ್ತಿದ್ದಾರೆ. ಇನ್ನು UPI ಪವತಿಯಲ್ಲಿ ಕೂಡ ಅನೇಕ ವಿಶಿಷ್ಟ್ಯಗಳು ಕೂಡ ಬಂದಿವೆ ಎನ್ನಬಹುದು. ಸದ್ಯ ದೇಶದ ಪ್ರತಿಷ್ಠಿತ ಬ್ಯಾಂಕ್ UPI ಪಾವತಿಯ ಮೂಲಕ ATM ನಲ್ಲಿ ಕೂಡ ಹಣವನ್ನು ತೆಗೆಯಲು ಅವಕಾಶವನ್ನು ಮಾಡಿಕೊಟ್ಟಿದೆ. ಇನ್ನುಮುಂದೆ ನೀವು ಇದರ ಮೂಲಕ ಕೂಡ ಕಾರ್ಡ್ ಲೆಸ್ ಕ್ಯಾಶ್ ಟ್ರಾನ್ಸಾಕ್ಷನ್ ಅನ್ನು ಮಾಡಬಹುದು.

UPI ಅಪ್ಲಿಕೇಶನ್ ನಲ್ಲಿ ಮೊಬೈಲ್ ನ ಮೂಲಕವೇ ನೀವು ಕಾರ್ಡ್ ಲೆಸ್ ಕ್ಯಾಶ್ ವಹಿವಾಟನ್ನು ಮಾಡಬಹುದಾಗಿದೆ. ಅದರಂತೆ ನೀವು ಇನ್ನುಮುಂದೆ ಸ್ಮಾರ್ಟ್ ವಾಚ್ ನಲ್ಲಿ ಕೂಡ UPI ವಹಿವಾಟನ್ನು ಮಾಡಬಹುದು. ಹೌದು, ಮಾರುಕಟ್ಟೆಯಲ್ಲಿ UPI ವಹಿವಾಟು ಮಾಡುವಂತಹ ವಿಶೇಷ ವಾಚ್ ಒಂದು ಲಾಂಚ್ ಆಗಿದೆ. ಇವು ಈ ಸ್ಮಾರ್ಟ್ ವಾಚ್ ಅನ್ನು ಧರಿಸಿದರೆ ನಿಮ್ಮ ವಾಚ್ ನ ಮೂಲಕ UPI ವಹಿವಾಟನ್ನು ಮಾಡಬಹುದು. 

Kotak-GOQII Smart Vital Plus Smart Watch
Image Credit: Live Mint

ಇನ್ನುಮುಂದೆ ವಾಚ್ ನಲ್ಲಿಯೇ ಪೇಮೆಂಟ್ ಮಾಡಬಹುದು
ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ (KMBL/Kotak) ಮತ್ತು GOQII ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು Kotak-GOQII Smart Vital Plus Smart Watch ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ವಾಚ್ ಪಿನ್ ಅನ್ನು ನಮೂದಿಸದೆ ರೂ. 5000 ವರೆಗಿನ ಕಾಂಟ್ಯಾಕ್ಟ್ ಲೆಸ್ ಪಾವತಿಗಳನ್ನು ವಿಶೇಷವಾಗಿ ಮಾಡಬಹುದು. ಈ ವಿಶಿಷ್ಟ ಸ್ಮಾರ್ಟ್‌ ವಾಚ್‌ ನ ಬೆಲೆ ರೂ. 3499. ಕೊಟಕ್ ಮಹೀಂದ್ರಾ ಬ್ಯಾಂಕ್‌ ನ ರಿಟೇಲ್ ಹೊಣೆಗಾರಿಕೆಗಳ ಉತ್ಪನ್ನ ಮುಖ್ಯಸ್ಥ ಮತ್ತು ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ರೋಹಿತ್ ಭಾಸಿನ್ ಈ ಸ್ಮಾರ್ಟ್ ವಾಚ್ ಉತ್ಪನ್ನವನ್ನು ಬಿಡುಗಡೆ ಮಾಡಿದರು.

ಈ ವಿಶೇಷ ಸ್ಮಾರ್ಟ್ ವಾಚ್ ಅನ್ನು ಇಂದೇ ಖರೀದಿಸಿ
Kotak-GOQII ಸ್ಮಾರ್ಟ್ ವೈಟಲ್ ಪ್ಲಸ್ ವಾಚ್‌ ನ ಬಳಕೆದಾರರು ತಮ್ಮ ರಕ್ತದೊತ್ತಡ, ದೇಹದ ಉಷ್ಣತೆ ಮತ್ತು SpO2 ಮಟ್ಟವನ್ನು ತಮ್ಮ ಮಣಿಕಟ್ಟಿನ ಮೇಲೆಯೇ ಪರಿಶೀಲಿಸಬಹುದು. ಹೆಚ್ಚುವರಿಯಾಗಿ, ಈ ಸ್ಮಾರ್ಟ್ ವಾಚ್ ಬಳಕೆದಾರ ಸ್ನೇಹಿ ಇಂಟರ್ಫೇಸ್ ಅನ್ನು ಹೊಂದಿದ್ದು ಅದು ಸುಲಭ ಪಾವತಿಯನ್ನು ಅನುಮತಿಸುತ್ತದೆ. ಗ್ರಾಹಕರು ತಮ್ಮ ಕೋಟಾಕ್ ಖಾತೆಗಳಿಗೆ ಸುಲಭವಾಗಿ ಸೈನ್ ಇನ್ ಮಾಡಬಹುದು ಮತ್ತು ಸ್ಮಾರ್ಟ್ ವಾಚ್ ಬಳಸಿಕೊಂಡು ಸಂಪರ್ಕರಹಿತ ಪಾವತಿಗಳನ್ನು ಮಾಡಬಹುದು. ಈ ವಿಧಾನವು ಸಾಂಪ್ರದಾಯಿಕ ಕಾಂಟ್ಯಾಕ್ಟ್ ಲೆಸ್ ಕಾರ್ಡ್‌ ಗಳು ಮತ್ತು ಮೊಬೈಲ್ ಸಾಧನಗಳಂತೆಯೇ ಅದೇ ಮಟ್ಟದ ಸುರಕ್ಷತೆ ಮತ್ತು ಸುರಕ್ಷತೆಯನ್ನು ನೀಡುತ್ತದೆ.

Kotak-GOQII Smart Vital Plus Smart Watch Price
Image Credit: Varindia

Join Nadunudi News WhatsApp Group

Join Nadunudi News WhatsApp Group