Kotak Kanya Scholarship 2025-26: PUC ಪಾಸ್ ಆಗಿ ಪ್ರೊಫೆಷನಲ್ ಕೋರ್ಸ್‌ಗಳಿಗೆ ಸೇರುವ ಹೆಣ್ಣು ಮಕ್ಕಳಿಗಾಗಿ ಈಗ ಕೋಟಕ್ ಕನ್ಯಾ ವಿದ್ಯಾರ್ಥಿವೇತನ ಬಿಡುಗಡೆ ಆಗಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. PUC ಪಾಸ್ ಆದ ಬಡ ಹೆಣ್ಣು ಮಕ್ಕಳು ಮತ್ತು ಉನ್ನತ ಶಿಕ್ಷಣ ಪಡೆದುಕೊಳ್ಳಬೇಕು ಅಂದುಕೊಂಡಿರುವ ಹೆಣ್ಣು ಮಕ್ಕಳು ಕೋಟಕ್ ಕನ್ಯಾ (Kotak Kanya) ವಿದ್ಯಾರ್ಥಿವೇತನದ ಮೂಲಕ ಸುಮಾರು 1.5 ಲಕ್ಷ ರೂಪಾಯಿ ತನಕ ವಿದ್ಯಾರ್ಥಿವೇತನ ಪಡೆದುಕೊಳ್ಳಬಹುದು. ಹಾಗಾದರೆ ಕೋಟಕ್ ಕನ್ಯಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗಿರುವ ದಾಖಲೆಗಳು ಏನು? ಯಾರು ಯಾರು ಯೋಜನೆಗೆ ಅರ್ಜಿ ಸಲ್ಲಿಸಬಹುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೋಟಕ್ ಕನ್ಯಾ ವಿದ್ಯಾರ್ಥಿವೇತನ 2025
ಕೋಟಕ್ ಕನ್ಯಾ ಸ್ಕಾಲರ್‌ಶಿಪ್ 2025-26 ಅಡಿಯಲ್ಲಿ ಆರ್ಥಿಕವಾಗಿ ಹಿನ್ನಡೆ ಇರುವ ಮೇರಿಟ್ ಹುಡುಗಿಯರಿಗೆ ವಾರ್ಷಿಕ 1.5 ಲಕ್ಷ ರೂಪಾಯಿ ವರೆಗೆ ಸಹಾಯ ಸಿಗುತ್ತದೆ. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಆಗಬೇಕು ಅನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಕೋಟಕ್ ಮಹೀಂದ್ರಾ ಗ್ರೂಪ್‌ನ ಸಿಎಸ್‌ಆರ್ ಯೋಜನೆಯಾಗಿದ್ದುಈ ಯೋಜನೆಯಾಗುವು ಹುಡುಗಿಯರ ಉನ್ನತ ಶಿಕ್ಷಣಕ್ಕೆ ಬೆಂಬಲ ನೀಡುತ್ತದೆ. ಕೋಟಕ್ ಎಜುಕೇಶನ್ ಫೌಂಡೇಶನ್ ಮತ್ತು ಕೋಟಕ್ ಮಹೀಂದ್ರಾ ಗ್ರೂಪ್ ಸಂಸ್ಥೆಗಳ ಸಹಯೋಗದಲ್ಲಿ ಈ ವಿದುಯಾರ್ಥಿವೇತನ ಬಿಡುಗಡೆ ಮಾಡಲಾಗಿದೆ. ಕೋಟಕ್ ಕನ್ಯಾ ಯೋಜನೆಯು ಆರ್ಥಿಕವಾಗಿ ದುರ್ಬಲ ಕುಟುಂಬದ ಮೇರಿಟ್ ಹುಡುಗಿಯರಿಗೆ ಪ್ರೊಫೆಷನಲ್ ಗ್ರಾಜುಯೇಶನ್ ಕೋರ್ಸ್‌ಗಳನ್ನು ಮುಗಿಸಲು ಸಹಾಯ ಮಾಡುತ್ತದೆ.
1.5 ಲಕ್ಷ ರೂಪಾಯಿ ತನಕ ವಿದ್ಯಾರ್ಥಿವೇತನ
ಆರ್ಥಿಕವಾಗಿ ದುರ್ಬಲ ಕುಟುಂಬದ ಮೇರಿಟ್ ಹುಡುಗಿಯರಿಗೆ ಪ್ರೊಫೆಷನಲ್ ಗ್ರಾಜುಯೇಶನ್ ಕೋರ್ಸ್‌ಗಳನ್ನು ಮುಗಿಸಲು ಹೆಣ್ಣು ಮಕ್ಕಳಿಗೆ ಈ ಕೋಟಕ್ ಕನ್ಯಾ ಯೋಜನೆಯ ಅಡಿಯಲ್ಲಿ ಸುಮಾರು 1.5 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ನೀಡಲಾಗುತ್ತದೆ. ವಿದ್ಯಾರ್ಥಿನಿಯರು ಈ ಹಣವನ್ನು ಟ್ಯೂಷನ್ ಫೀಸ್, ಹಾಸ್ಟೆಲ್, ಲ್ಯಾಪ್‌ಟಾಪ್, ಪುಸ್ತಕಗಳು ಮತ್ತು ಇತರ ಶೈಕ್ಷಣಿಕ ಖರ್ಚುಗಳಿಗೆ ಬಳಸಿಕೊಳ್ಳಬಹುದು. ಕೋಟಕ್ ಕನ್ಯಾ ಯೋಜನೆಯು ಕೇವಲ ಹಣಕಾಸು ಸಹಾಯ ಮಾತ್ರವಲ್ಲ, ಮೆಂಟರಿಂಗ್, ಲೈಫ್ ಸ್ಕಿಲ್ಸ್ ತರಬೇತಿ ಮತ್ತು ಕೆರಿಯರ್ ಗೈಡೆನ್ಸ್ ಕೂಡ ನೀಡುತ್ತದೆ. ಕೋಟಕ್ ಕನ್ಯಾ ಯೋನನೆಯ ಮೂಲಕ ಹುಡುಗಿಯರು ಇನ್ನಷ್ಟು ಸ್ವಾವಲಂಭಿ ಆಗಲಿದ್ದಾರೆ.
ಕೋಟಕ್ ಕನ್ಯಾ ಯೋನನೆಯ ಅರ್ಹತೆ
* 12 ನೇ ತರಗತಿಯಲ್ಲಿ ಕನಿಷ್ಠ 75% ಅಂಕ ಪಡೆದಿರಬೇಕು
* MBBS, ಇಂಟಿಗ್ರೇಟೆಡ್ LLB, ಆರ್ಕಿಟೆಕ್ಚರ್, ಡಿಸೈನ್ ಅಥವಾ IISc/IISER ನಲ್ಲಿ BS-MS/BS-Research) NIRF ಅಥವಾ NAAC ಅಕ್ರೆಡಿಟೆಡ್ ಸಂಸ್ಥೆಗಳಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿರಬೇಕು.
* ಕೋಟಕ್ ಗ್ರೂಪ್ ಅಥವಾ ಫೌಂಡೇಶನ್ ಉದ್ಯೋಗಿಗಳ ಮಕ್ಕಳು ಅರ್ಹರಲ್ಲ.
ಕೋಟಕ್ ಕನ್ಯಾ ಯೋಜನೆಗೆ ಅರ್ಜಿ ಸಲ್ಲಿಸವ ವಿಧಾನ
ಕೋಟಕ್ ಕನ್ಯಾ ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ Online ಆಗಿರುತ್ತದೆ. ಅರ್ಹರು ಅಧಿಕೃತ ವೆಬ್‌ಸೈಟ್ kotakeducationfoundation.org ಅಥವಾ buddy4study.com ಮೂಲಕ ಅರ್ಜಿ ಸಲ್ಲಿಸಬಹುದು. ಮಾರ್ಕ್ಸ್ ಕಾರ್ಡ್, ಆದಾಯ ಪ್ರಮಾಣಪತ್ರ ಮತ್ತು ಅಡ್ಮಿಷನ್ ಪ್ರೂಫ್ ಮತ್ತು ಇತ್ಯಾದಿ ದಾಖಲೆಯನ್ನು ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಕೊಡಬೇಕು. ಈ ಯೋಜನೆಯ ಅಂತಿಮ ದಿನಾಂಕ ಡಿಸೆಂಬರ್ 15 ಎಂದು ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

