Nata Bhayankara Collection: ದರ್ಶನ್ ಅನ್ನು ಹಿಂದಿಕ್ಕಿದ ಪ್ರಥಮ್, ನಟ ಭಯಂಕರ ಕಲೆಕ್ಷನ್ ಬಗ್ಗೆ ಸ್ಪಷ್ಟನೆ ನೀಡಿದ ನಟ ಪ್ರಥಮ್.

Darshan Kranti And Pratham Nata Bhayankara Collection: ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅಭಿನಯದ ಕ್ರಾಂತಿ ಚಿತ್ರ (Kranti Movie)  ಜನವರಿ 26 ರಂದು ತೆರೆ ಕಂಡು ಭರ್ಜರಿ ಯಶಸ್ಸು ಗಳಿಸಿದೆ.

ಕ್ರಾಂತಿ ಚಿತ್ರ ಈಗಾಗಲೇ 100 ಕೋಟಿ ಗಳಿಸಿದೆ ಎನ್ನುವ ಮಾಹಿತಿಗಳು ದರ್ಶನ್ ಆವಾರ್ ಅಭಿಮಾನಿಗಳ ಪ್ಯಾನ್ ಪೇಜ್ ಗಳಲ್ಲಿ ರಾರಾಜಿಸುತ್ತಿದೆ. ಆದರೆ ದರ್ಶನ್ ಅವರ ಕ್ರಾಂತಿ ಚಿತ್ರದ ಬಗ್ಗೆ ನೆಗಟಿವ್ ವಿಮರ್ಶೆಗಳು ಹೆಚ್ಚಿವೆ.

Pratham, who overtook Darshan, the actor who made huge collections, is Bhayankara.
Imge Credit: instagram

ಕ್ರಾಂತಿ ಚಿತ್ರ ತಂಡ ಸ್ವತಃ ಕೇಕ್ ಕಟ್ ಮಾಡುವ ಮೂಲಕ 100 ಕೋಟಿ ಗಳಿಸಿದ ಖುಷಿಯನ್ನು ಹಂಚಿಕೊಂಡಿತ್ತು. ಆದರೆ ಈ ಬಗ್ಗೆ ನೆಗಟಿವ್ ವಿಮರ್ಶೆಗಳು ಹೆಚ್ಚಾಗಿವೆ.

ಇದೀಗ ನಟ ದರ್ಶನ್ ಹಾಗೂ ಬಿಗ್ ಬಾಸ್ ಖ್ಯಾತಿಯ ಪ್ರಥಮ್ (Pratham) ನಟನೆಯ ನಟ ಭಯಂಕರ (Nata Bhayankara) ಚಿತ್ರದ ಕಲೆಕ್ಷನ್ ಬಗ್ಗೆ ಹೋಲಿಕೆ ಮಾಡಲಾಗಿದೆ. ನಟ ಭಯಂಕರ ಚಿತ್ರದ ಕಲೆಕ್ಷನ್ ಪೋಸ್ಟ್ ಹಾಕಿ ದರ್ಶನ್ ಅವರ ಕ್ರಾಂತಿ ಚಿತ್ರದ ಕಲೆಕ್ಷನ್ ಬಗ್ಗೆ ಮತ್ತೆ ಟ್ರೋಲ್ ಮಾಡಲಾಗಿದೆ. ಇದೀಗ ಪ್ರಥಮ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Actor Bhayankar movie which collected more than Kranti movie
Image Credit: instagram

ಕ್ರಾಂತಿ ಚಿತ್ರದ ಕಲೆಕ್ಷನ್ ಬಗ್ಗೆ ಟ್ರೋಲ್
ಫೆಬ್ರವರಿ 3 ರಂದು ಒಳ್ಳೆ ಹುಡುಗ ಪ್ರಥಮ್ ಅಭಿನಯದ ನಟ ಭಯಂಕರ ಚಿತ್ರ ರಿಲೀಸ್ ಆಗಿದೆ. ನಟ ಭಯಂಕರ ಚಿತ್ರ ಒಳ್ಳೆಯ ಯಶಸ್ಸು ಗಳಿಸಿದೆ.

Join Nadunudi News WhatsApp Group

ಇದೀಗ ಕ್ರಾಂತಿ ಚಿತ್ರದ ಮೊದಲ ದಿನದ ಕಲೆಕ್ಷನ್ ಪೋಸ್ಟರ್ ಹಾಗೂ ನಟ ಭಯಂಕರ ಚಿತ್ರದ ಮೊದಲ ದಿನದ ಕಲೆಕ್ಷನ್ ಪೋಸ್ಟರ್ ಅನ್ನು ಹೋಲಿಸಿ ಕ್ರಾಂತಿ ಚಿತ್ರದ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇದನ್ನು ಗಮನಿಸಿದ ಪ್ರಥಮ್ ಪ್ರತಿಕ್ರಿಯಿಸಿದ್ದಾರೆ.

Bhayankar is an actor who collected well against the film Kranti
Image Credit: instagram

ನಟ ಭಯಂಕರ ಕಲೆಕ್ಷನ್ ಬಗ್ಗೆ ಸ್ಪಷ್ಟನೆ ನೀಡಿದ ಪ್ರಥಮ್
ಕ್ರಾಂತಿ ಚಿತ್ರಕ್ಕಿಂತ ಪ್ರಥಮ್ ನಟನೆಯ ನಟ ಭಯಂಕರ ಚಿತ್ರ ಹೆಚ್ಚು ಕಲೆಕ್ಷನ್ ಮಾಡಿದೆ ಎಂಬ ಟ್ರೋಲ್ ವೈರಲ್ ಆದ ಬೆನ್ನಲ್ಲೇ ನಟ ಪ್ರಥಮ್ ಇದರ ಕುರಿತು ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

“ಇದು ಸುಳ್ಳು ಸುದ್ದಿ. ನಾನು ಪೂಜೆ ಮಾಡುವ ಕಬ್ಬಾಳಮ್ಮನ ಸಾಕ್ಷಿಯಾಗಿ ಇದಕ್ಕೂ ನನಗು ಯಾವ ಸಂಬಂಧವಿಲ್ಲ. ಹಾಗೂ ಮುಖ್ಯವಾಗಿ ನಮ್ಮ ಚಿತ್ರ ಅಷ್ಟು ಕಲೆಕ್ಷನ್ ಮಾಡಿಲ್ಲ.

ದರ್ಶನ್ ಸರ್ ದೊಡ್ಡವರು. ಸುಮ್ಮನೆ ಸುಳ್ಳು ಹೋಲಿಕೆ ಬೇಡ. ಚೆನ್ನಾಗಾಗ್ತ ಇದೆ ಸಂತೋಷ. ಆದರೆ ಈಶ್ವರನ ಸಾಕ್ಷಿಯಾಗಿ ಇದು ಸುಳ್ಳು ಹಾಗೂ ನನಗು ಇದಕ್ಕೂ ಸಂಬಂಧವಿಲ್ಲ. ದಯವಿಟ್ಟು ನಿಲ್ಲಿಸಿ” ಎಂದು ಕ್ರಾಂತಿ ಚಿತ್ರದ ಕಲೆಕ್ಷನ್ ಬಗ್ಗೆ ಮಾಡಿರುವ ಟ್ರೋಲ್ ಫೋಟೋವನ್ನು ಹಂಚಿಕೊಂಡು ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ.

Join Nadunudi News WhatsApp Group