Shakti Scheme: ಹಣ ಕೊಟ್ಟು KSRTC ಬಸ್ ಹತ್ತುತ್ತಿರುವ ಪುರುಷರಿಗೆ ಇನ್ನೊಂದು ಬ್ಯಾಡ್ ನ್ಯೂಸ್
Shakti Scheme Update: ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದಿದ್ದು ಐದು ಗ್ಯಾರೆಂಟಿ ಯೋಜನೆಯ ಕುರಿತು ಅಪ್ಡೇಟ್ ಗಳು ಹೊರ ಬೀಳುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ ನ ಐದು ಗ್ಯಾರೆಂಟಿಗಳಲ್ಲಿ ಈಗಾಗಲೇ ಎರಡು ಗ್ಯಾರೆಂಟಿಗಳ ಪ್ರಯೋಜನವನ್ನು ಜನರು ಪಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನ ಶಕ್ತಿ ಯೋಜನೆಯು ಮೊದಲು ಜಾರಿಗೆ ಬಂದಿದೆ. ಇನ್ನು ಈ ಯೋಜನೆಯ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ.
ಶಕ್ತಿ ಯೋಜನೆ
ಕರ್ನಾಟಕ ರಾಜ್ಯದಾದ್ಯಂತ ಜೂನ್ 11 ರಿಂದ ಮಹಿಳೆಯರಿಗಾಗಿ ಶಕ್ತಿ ಯೋಜನೆ ಜಾರಿಯಾಗಿದೆ. ರಾಜ್ಯದ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ.ಉಚಿತ ಪ್ರಯಾಣದಿಂದಾಗಿ ಪ್ರತಿನಿತ್ಯ ಲಕ್ಷಾಂತರ ಮಹಿಳೆಯರು ಪ್ರಯಾಣ ನಡೆಸುತ್ತಿದ್ದಾರೆ. ಮಹಿಳೆಯರ ತಳ್ಳಾಟ, ನೂಕುನುಗ್ಗಲಿನಿಂದಾಗಿ ಬಸ್ ಗಳ ಕಿಟಕಿ ಬಾಗಿಲುಗಳು ಹಾನಿಯಾಗಿವೆ. ಈ ಕಾರಣದಿಂದ ಉಚಿತ ಪ್ರಯಾಣದಲ್ಲಿ ಶಿಸ್ತು ಬದ್ಧತೆಯನ್ನು ಕಾಪಾಡಲು ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ಶಕ್ತಿ ಯೋಜನೆಯಿಂದ ಕೆ ಎಸ್ ಆರ್ ಟಿಸಿ ಬಸ್ ದರಗಳ ಹೆಚ್ಚಳ
ಇನ್ನು ಮಹಿಳೆಯರ ಶಕ್ತಿ ಯೋಜನೆ ಬಿಡುಗಡೆಯಾಗುತ್ತಿದ್ದಂತೆಯೇ ಸರ್ಕಾರಕ್ಕೆ ಹೊಸ ಹೊಸ ಬೇಡಿಕೆಗಳು ಕೇಳಿ ಬಂದಿವೆ. ಕರ್ನಾಟಕ ರಾಜ್ಯದಲ್ಲಿ ಶಕ್ತಿ ಯೋಜನೆಯು ರಾಜ್ಯದಲ್ಲಿ ಸಂಚರಿಸುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳಿಗೆ ಬೇಡಿಕೆಯನ್ನು ಹೆಚ್ಚಿಸಿದೆ. ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಘೋಷಿಸಿ ಇದೀಗ ಕೆ ಎಸ್ ಆರ್ ಟಿಸಿ ಬಸ್ ಗಳ ದರವನ್ನು ಹೆಚ್ಚಿಸಿದೆ.
ಕರ್ನಾಟಕ ಸರ್ಕಾರವು ಒಪ್ಪಂದದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೆ ಎಸ್ ಆರ್ ಟಿಸಿ ಬಸ್ ಗಳ ದರವನ್ನು ಹೆಚ್ಚಿಸಿದೆ. ಕೆ ಎಸ್ ಆರ್ ಟಿಸಿ ಅಧಿಕೃತ ಪ್ರಕಟಣೆ ಹೊರಡಿಸಿ ಬಸ್ ಗಳ ದರವನ್ನು ಪರಿಷ್ಕರಿಸಿದೆ. ಹೊಸ ಆದೇಶದ ಪ್ರಕಾರ ಮೈಸೂರಿನಲ್ಲಿ ಗಂಟೆಗೊಂದು ವಾಹನ ಒದಗಿಸುವ ವ್ಯವಸ್ಥೆಯನ್ನು ರದ್ದುಪಡಿಸಲಾಗಿದೆ. ಕರ್ನಾಟಕ ಸಾರಿಗೆ ರಾಜಹಂಸ ಕಾರ್ಯನಿರ್ವಾಹಕ, ರಾಜಹಂಸ ಸೇರಿದಂತೆ ಏಳು ವಿವಿಧ ರೀತಿಯ ಗುತ್ತಿಗೆ ಬಸ್ ಗಳ ಪರಿಷ್ಕೃತ ದರಗಳು ಆಗಸ್ಟ್ 1 ರಿಂದ ಅನ್ವಯವಾಗಲಿದೆ.