KSRTC Rules: KSRTC ಬಸ್ ನಲ್ಲಿ ಕಂಡಕ್ಟರ್ ಈ ಕೆಲಸ ಮಾಡುವಂತಿಲ್ಲ, ಸರ್ಕಾರದ ನಿಯಮ
ನೆಯ್ಯಾಟಿಂಕಾರ ಬಸ್ ಡಿಪೋದ ಬಸ್ ಒಂದರಲ್ಲಿ ನಡೆ.ದಿರುವಂತಹ ಒಂದು ಘಟನೆ ಈಗ ಬೆಳಕಿಗೆ ಬಂದಿದೆ.
KSRTC Buss Conductor Rules: ಕೆಲವರಿಗೆ ಟ್ರಾವೆಲ್(Travel) ಎಂದರೆ ಬಹಳ ಇಷ್ಟ. ಇನ್ನು ಕೆಲವರಿಗೆ ಟ್ರಾವೆಲ್ ಎಂದರೆ ಆಗುವುದಿಲ್ಲ. ಅದಕ್ಕೆ ಕಾರಣ ಅವರಿಗೆ ವಾಕರಿಕೆ ಅಥವಾ ವಾಂತಿ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಲ್ಲಾದರೂ ಹೊರಗಡೆ ಹೋಗಬೇಕು ಎಂದರೆ ಹಿಂದೇಟು ಹಾಕುತ್ತಾರೆ. ಬಸ್ ನಲ್ಲಿ ಟ್ರಾವೆಲಿಂಗ್ ಮಾಡಬೇಕಾದರೆ ಸೀಟಿನಲ್ಲಿ ಕುಳಿತು ದೂರ ಪ್ರಯಾಣ ಮಾಡಿದರೆ ವಾಂತಿ ಬರಬಹುದು.
ಯಾವುದೇ ಬಸ್ನಲ್ಲಿ ಪ್ರಯಾಣ ಮಾಡುವಾಗ ಅನೇಕರಿಗೆ ವಾಂತಿ ಬರುವುದು ಸಾಮಾನ್ಯ. ಕೆ ಎಸ್ ಆರ್ ಟಿ ಸಿ(KSRTC) ಬಸ್ ಚಾಲಕರು ವಾಂತಿ ವಿಚಾರಕ್ಕೆ ತಕರಾರು ಮಾಡಿಕೊಂಡು ತನ್ನ ಕೆಲಸ ಕಳೆದುಕೊಂಡಿದ್ದಾನೆ. ಕೆ ಎಸ್ ಆರ್ ಟಿ ಸಿ ಎಂದ ಕೂಡಲೇ ಕರ್ನಾಟಕದ ವ್ಯಕ್ತಿ ಎಂದು ಕೊಳ್ಳಬೇಡಿ. ಬದಲಿಗಿದು ಕೇರಳದ ಸರ್ಕಾರಿ ಬಸ್.ಕೇರಳ ರಾಜ್ಯ ರಸ್ತೆ ನಿಗಮಕ್ಕೂ ಕೂಡ ಕೆಎಸ್ಆರ್ಟಿಸಿ ಎನ್ನುವಂತಹ ಹೆಸರೇ ಇದೆ. ಅಲ್ಲಿ ನಡೆದಿರುವಂತಹ ಒಂದು ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಎಲ್ಲಾ ಕಡೆ ವೈರಲ್ ಆಗುತ್ತಿದೆ.
ನೆಯ್ಯಾಟಿಂಕಾರ ಬಸ್ ಡಿಪೋದ ಬಸ್ ಒಂದರಲ್ಲಿ ನಡೆದಿರುವಂತಹ ಒಂದು ಘಟನೆ ಈಗ ಬೆಳಕಿಗೆ ಬಂದಿದೆ ಈ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಒಬ್ಬ ನರ್ಸಿಂಗ್ ಸ್ಟೂಡೆಂಟ್ ಬಸ್ ನಲ್ಲಿ ವಾಂತಿ ಮಾಡಿಕೊಂಡಿದ್ದಾರೆ. ಡ್ರೈವರ್ ಆಕೆಯ ಬಳಿ ಅದನ್ನು ಕ್ಲೀನ್ ಮಾಡಿಸಿದ್ದ ಎಂಬುದಾಗಿ ತಿಳಿದು ಬಂದಿದೆ. ಡ್ರೈವರ್ ಹೆಸರು ಎಸ್ ಎನ್ ಶಿಜಿ ಎಂಬುದಾಗಿ ಗುರುತಿಸಲಾಗಿದೆ.ಆತ ಅದಾಗಲೇ ಟೆಂಪ್ರವರಿ ಕೆಲಸದಲ್ಲಿ ಇದ್ದ ಆದರೆ ಆತನನ್ನು ಕೂಡಲೇ ಕೆಲಸದಿಂದ ತೆಗೆದು ಹಾಕಲಾಗಿದೆ. ಆ ಮಂಗಳವಾರ ಮಧ್ಯಾನ ಮೂರು ಗಂಟೆಯ ಸಂದರ್ಭದಲ್ಲಿ ವೆಳ್ಳಾಡ ಸಮೀಪದಲ್ಲಿ ಈ ಘಟನೆ ನಡೆದಿತ್ತು ಎಂಬುದಾಗಿ ತಿಳಿದುಬಂದಿದೆ. ಒಬ್ಬ ನರ್ಸಿಂಗ್ ಸ್ಟೂಡೆಂಟ್ ತನ್ನ ಸಹೋದರಿಯ ಜೊತೆಗೆ ಹಾಸ್ಪಿಟಲ್ ಗೆ ಹೋಗಿ ಬರುತ್ತಿರುವ ವೇಳೆ ಈ ಘಟನೆ ನಡೆದಿದೆ.
ವೆಳ್ಳಾಡ ಬಸ್ ಡಿಪೋಗೆ ಬಂದ ನಂತರ ಆ ಹುಡುಗಿಯ ಬಳಿ ವಾಂತಿ ಮಾಡಿರುವ ಸ್ಥಳವನ್ನು ಕ್ಲೀನ್ ಮಾಡದೆ ಬಸ್ಸಿನಿಂದ ಇಳಿಯಲು ಬಿಡುವುದಿಲ್ಲ ಎಂಬುದಾಗಿ ಡ್ರೈವರ್) ಕಠಿಣವಾಗಿ ನಡೆದುಕೊಂಡಿದ್ದಾನೆ. ಇದಾದ ನಂತರ ಆ ಹುಡುಗಿ ಅಲ್ಲೇ ಇದ್ದ ಬಕೆಟ್ ಹಾಗೂ ನೀರಿನ ಪೈಪ್ ತೆಗೆದುಕೊಂಡು ವಾಂತಿ ಮಾಡಿದ ಸ್ಥಳವನ್ನು ಸಂಪೂರ್ಣವಾಗಿ ಶುಚಿಗೊಳಿಸಿ ನಂತರವಷ್ಟೇ ಬಸ್ಸಿನಿಂದ ಹಿಡಿದು ಹೋಗಿದ್ದಾಳೆ.
ಈ ಪ್ರಕರಣ ಈಗ ತಡವಾಗಿ ಬೆಳಕಿಗೆ ಬಂದಿದೆ.
KSRTC ಅಂದರೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಚಾರ ತಿಳಿದು ಬಂದಿದ್ದು ಕೆಲವೇ ಸಮಯಗಳಲ್ಲಿ ಈ ಸುದ್ದಿ ಕೇರಳದಾದ್ಯಂತ ಎಲ್ಲಾ ಕಡೆ ವೈರಲ್ ಆಗಿದ್ದು ಆ ಡ್ರೈವರ್ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುವಂತೆ ರಾಜ್ಯ ರಸ್ತೆ ಸಾರಿಗೆ ನಿಗಮದ ವಿರುದ್ಧ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕೂಡಲೆ ಆತನನು ಅಧಿಕಾರಿಗಳು ಕೆಲಸದಿಂದ ತೆಗೆದಿದ್ದಾರೆ ಅಧಿಕಾರಿಗಳು ಡ್ರೈವರ್ ವಿರುದ್ಧ ತೆಗೆದುಕೊಂಡಿರುವಂತಹ ನಿರ್ಧಾರವನ್ನು ಕೇಳಿ ಮೆಚ್ಚುಗೆ ವ್ಯಕ್ತವಾಗಿದೆ.