KSRTC Bus Fare Cut 2026: ಕರ್ನಾಟಕ ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಅಡಿಯಲ್ಲಿ ಈಗಾಗಲೇ ರಾಜ್ಯದ ಮಹಿಳೆಯರು KSRTC ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಇದೀಗ 2026 ರ ವರ್ಷ ಆರಂಭವಾದ ಬೆನ್ನಲ್ಲೇ ಬಸ್ ಪ್ರಯಾಣಿಕರಿಗೆ ಒಂದೊಳ್ಳೆ ಸಿಹಿ ಸುದ್ದಿ ಲಭಿಸಿದೆ. KSRTC ಬಸ್ ತನ್ನ ಪ್ರಯಾಣ ದರದಲ್ಲಿ ಕಡಿತವನ್ನು ಘೋಷಣೆ ಮಾಡಿದೆ. ಈಗಾಗಲೇ ಮಹಿಳೆಯರಿಗೆ KSRTC ನಲ್ಲಿ ಉಚಿತ ಪ್ರಯಾಣ ಲಭ್ಯವಿದ್ದು, ಈಗ ಪುರುಷರಿಗೆ ಟಿಕೆಟ್ ದರದಲ್ಲಿ ಇಳಿಕೆಯನ್ನು ಮಾಡಿದೆ. ಹಾಗಾದರೆ KSRTC ಬಸ್ ಟಿಕೆಟ್ ದರದಲ್ಲಿ ಎಷ್ಟು ಇಳಿಕೆಯಾಗಿದೆ ಮತ್ತು ಎಲ್ಲಿ ಇಳಿಕೆಯಾಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
KSRTC ಟಿಕೆಟ್ ದರದಲ್ಲಿ ಕಡಿತ
2026 ರ ಆರಂಭದಲ್ಲಿ KSRTC ತನ್ನ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಇದೀಗ KSRTC ಜನವರಿ 5, 2026 ರಿಂದ ಕೆಲವು ಆಯ್ದ ಮಾರ್ಗಗಳಲ್ಲಿ ತನ್ನ ಪ್ರಯಾಣ ದರವನ್ನು ಕಡಿಮೆ ಮಾಡಿದೆ. ಪ್ರಮುಖವಾಗಿ ಮಂಗಳೂರು ಮತ್ತು ದಾವಣಗೆರೆ ವಿಭಾಗಗಳಲ್ಲಿ ಬೆಂಗಳೂರು ಮಾರ್ಗದ ಬಸ್ ಗಳ ಟಿಕೆಟ್ ದರವನ್ನು ಶೇಕಡಾ 10 ರಿಂದ15 ರಷ್ಟು ದರವನ್ನು ಇಳಿಕೆ ಮಾಡಿದೆ. ನಾಲ್ಕು ಅಥವಾ ಹೆಚ್ಚು ಜನ ಮುಂಗಡ ಬುಕ್ಕಿಂಗ್ ಮಾಡಿದ್ರೆ 5% ರಿಯಾಯಿತಿ, ಇನ್ನು ಹೋಗಿ ಬರುವ ಟಿಕೆಟ್ ಸೇರಿ ಒಟ್ಟಿಗೆ ಬುಕ್ ಮಾಡಿದ್ರೆ 10% ರಿಯಾಯಿತಿ ಪಡೆದುಕೊಳ್ಳಬಹುದು. ಮಂಗಳೂರು, ಉಡುಪಿ, ಕುಂದಾಪುರದಿಂದ ಬೆಂಗಳೂರಿಗೆ ಹೊರಡುವ KSRTC ಬಸ್ ನ ಟಿಕೆಟ್ ದರ ರಿಯಾಯಿತಿ ನಂತರ ಎಷ್ಟು ಅನ್ನುವ ಬಗ್ಗೆ ನೋಡೋಣ.
KSRTC ಈಗಿನ ದರ (ಬೆಂಗಳೂರಿಗೆ)
- ಅಂಬಾರಿ ಉತ್ಸವ ಕ್ಲಾಸ್ ನಲ್ಲಿ ಮಂಗಳೂರು ನಿಂದ ಬೆಂಗಳೂರು ಪ್ರಯಾಣಕ್ಕೆ 1350 ರೂಪಾಯಿ, ಉಡುಪಿಯಿಂದ 1460, ಕುಂದಾಪುರದಿಂದ 1510 ರೂಪಾಯಿ
- ಡ್ರೀಮ್ ಕ್ಲಾಸ್ ಗೆ ಮಂಗಳೂರುನಿಂದ 1200 ರೂಪಾಯಿ, ಉಡುಪಿಯಿಂದ 1300 ರೂಪಾಯಿ, ಕುಂದಾಪುರದಿಂದ 1350 ರೂಪಾಯಿ
- ಮಲ್ಟಿ ಆಕ್ಸಲ್ ಗೆ ಮಂಗಳೂರುನಿಂದ 1000 ರೂಪಾಯಿ, ಉಡುಪಿಯಿಂದ 1060 ರೂಪಾಯಿ, ಕುಂದಾಪುರದಿಂದ 1110 ರೂಪಾಯಿ
- Non AC ಸ್ಲೀಪರ್ ಗೆ ಮಂಗಳೂರುನಿಂದ 900 ರೂಪಾಯಿ, ಉಡುಪಿಯಿಂದ 1000 ರೂಪಾಯಿ, ಕುಂದಾಪುರದಿಂದ 1050 ರೂಪಾಯಿ
- ರಾಜಹಂಸ ಮಂಗಳೂರುನಿಂದ 650 ರೂಪಾಯಿ, ಉಡುಪಿಯಿಂದ 700 ರೂಪಾಯಿ, ಕುಂದಾಪುರದಿಂದ 750 ರೂಪಾಯಿ
- ಮಲ್ಟಿ ಆಕ್ಸಲ್ 2.0 ಮಂಗಳೂರು ನಿಂದ 1150 ರೂಪಾಯಿ, ಉಡುಪಿಯಿಂದ 1250 ರೂಪಾಯಿ, ಕುಂದಾಪುರದಿಂದ 1310 ರೂಪಾಯಿ
- ಪಲ್ಲಕ್ಕಿ Non AC ಸ್ಲೀಪರ್ ಮಂಗಳೂರುನಿಂದ 950 ರೂಪಾಯಿ, ಉಡುಪಿಯಿಂದ 1060 ರೂಪಾಯಿ, ಕುಂದಾಪುರದಿಂದ 1110 ರೂಪಾಯಿ
ದಾವಣೆಗೆರೆಯಿಂದ ಟಿಕೆಟ್ ದರ
- ದಾವಣಗೆರೆಯಿಂದ ಬೆಂಗಳೂರಿಗೆ Volvo bus ದರ 650 ರೂಪಾಯಿ
- ದಾವಣಗೆರೆಯಿಂದ ಬೆಂಗಳೂರಿಗೆ EV Power Plus 600 ರೂಪಾಯಿ
- ದಾವಣಗೆರೆಯಿಂದ ಬೆಂಗಳೂರಿಗೆ Volvo bus 2.0 ದರ 680 ರೂಪಾಯಿ
ಈ ರೀತಿಯಾಗಿ ಟಿಕೆಟ್ ಬುಕ್ ಮಾಡಿಕೊಳ್ಳಿ
- ಅಧಿಕೃತ ವೆಬ್ ಸೈಟ್ ksrtc.in ಅಥವಾ KSRTC AWATAR ಆಪ್ ನಲ್ಲಿ ಬುಕ್ ಮಾಡಿ
- ರಿಜಿಸ್ಟರ್ ಮಾಡಿಕೊಳ್ಳಿ
- ಮಂಗಳೂರು, ಉಡುಪಿ ಅಥವಾ ಕುಂದಾಪುರವನ್ನು ಮೂಲಸ್ಥಳವಾಗಿ ಆಯ್ಕೆ ಮಾಡಿಕೊಂಡು, ಬೆಂಗಳೂರನ್ನು ಗಮ್ಯ ಸ್ಥಳವಾಗಿ ಆಯ್ಕೆ ಮಾಡಿಕೊಳ್ಳಿ
- ದಿನಾಂಕ ಮತ್ತು ಸಮಯ ಆಯ್ಕೆಮಾಡಿ
- ಬಸ್ ವಿಧ ನೋಡಿ ಟಿಕೆಟ್ ಬುಕ್ ಮಾಡಿ
- ಪೇಮೆಂಟ್ ಅನ್ನು UPI, ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಮಾಡಿ
- ಇ-ಟಿಕೆಟ್ SMS ಅಥವಾ App ನಲ್ಲಿ ಸಿಗುತ್ತದೆ
ಇದೆ ರೀತಿಯಲ್ಲಿ ಕಲಬುರಗಿ ಮತ್ತು ಹೈದರಾಬಾದ್ ಮಾರ್ಗಗಳ Non AC ಸ್ಲೀಪರ್ ದರ ಕೂಡ ಇಳಿಕೆ ಆಗಿದೆ. ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣಕ್ಕೆ KSRTC ಯಾವಾಗಲು ಉತ್ತಮ ಆಯ್ಕೆ. ಸಾಮಾನ್ಯ ಪ್ರಯಾಣಿಕರಿಗೆ ಈ ರಿಯಾಯಿತಿ ಹೆಚ್ಚಿನ ಲಾಭ ನೀಡಲಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

