Mandya Election: ಸುಮಲತಾಗೆ ನೇರವಾಗಿ ಪ್ರಶ್ನೆ ಮಾಡಿದ ಕುಮಾರಸ್ವಾಮಿ, ಉತ್ತರ ಕೊಡಿ ಅಂದ HDK.
ನನ್ನ ಮೇಲೆ ಯಾಕಿಷ್ಟು ದ್ವೇಷ, ನಾನು ನಿಮ್ಮ ಕುಟುಂಬಕ್ಕೆ ಏನು ಅನ್ಯಾಯ ಮಾಡಿದ್ದೇನೆ.
Sumalastha And H.D Kumaraswamy: ಇದೀಗ ಮಂಡ್ಯ ವಿಧಾನಸಭ ಕ್ಷೇತ್ರದ ಚುನಾವಣೆಯ (Mandya Assembly Election) ಕಾವು ಹೆಚ್ಚಾಗಿದೆ. ಈ ಬಾರಿ ಮಂಡ್ಯ ಚುನಾವಣೆ ಭಾರಿ ಪೈಪೋಟಿ ಉಂಟಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತದೆ.
ಕಳೆದ ಬಾರಿ ಸೋತಿದ್ದ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಸದ್ಯ ರಾಮನಗರ ಅಭ್ಯರ್ಥಿ ಆಗಿ ನಾಮಪತ್ರ ಸಲ್ಲಿಸಿದ್ದಾರೆ.
ಸುಮಲತಾಗೆ ನೇರವಾಗಿ ಪ್ರಶ್ನೆ ಮಾಡಿದ ಕುಮಾರಸ್ವಾಮಿ
ಇನ್ನು ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಹಾಗೂ ಜೆಡಿಎಸ್ ಪಕ್ಷದ ಹೆಚ್ ಡಿ ಕುಮಾರಸ್ವಾಮಿ (H.D Kumaraswamy) ಅವರ ನಡುವೆ ಸಾಕಷ್ಟು ಚರ್ಚೆಗಳು ನಡೆದಿದ್ದವು.
ಇದೀಗಾ ಕಾರ್ನಾಟಕ ರಾಜ್ಯ ವಿಧಾನಸಭಾ ಚುನಾವಣಬೆ ಹತ್ತಿರವಾಗುತ್ತಿದಂತೆ ಇದೀಗ ಇಬ್ಬರು ನಡುವೆ ಮತ್ತೆ ವಾಗ್ದಾಳಿ ಆರಂಭಗೊಂಡಿದೆ. ಜೆಡಿಎಸ್ ಸಮಾವೇಶದ ವೇಳೆ ಮಾತನಾಡುವಾಗ ಹೆಚ್ಚ್ ಡಿ ಕುಮಾರಸ್ವಾಮಿ ಅವರು ಸುಮಲತಾ ಅವರಿಗೆ ನೇರವಾಗಿ ಪ್ರಶ್ನೆ ಹಾಕಿದ್ದಾರೆ.
ಸುಮಲತಾ ಅವರನ್ನು ಉದ್ದೇಶಿಸಿದ ಪ್ರಶ್ನೆ ಮಾಡಿದ HDK
“ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಏನು ಅನ್ಯಾಯ ಮಾಡಿದ್ದೇನೆ? ನನ್ನ ಮೇಲೆ ಯಾಕಿಷ್ಟು ದ್ವೇಷ?” ಎಂದು ಹೆಚ್ ಡಿಕೆ ಸುಮಲತಾ ಅವರಿಗೆ ಜೆಡಿಎಸ್ ಸಮಾವೇಶದಲ್ಲಿ ಪ್ರಶ್ನೆ ಮಾಡಿದ್ದಾರೆ. ಮಂಡ್ಯದಲ್ಲಿ ಯಾವುದಾದರು ಒಂದು ಕ್ಷೇತ್ರದಲ್ಲಿ ಸ್ಪರ್ದಿಸುವಂತೆ ಪುಟ್ಟರಾಜು ಹೇಳಿದ್ದಾರೆ.
ಮಂಡ್ಯ ಜನರ ಬಗ್ಗೆ ನನಗೆ ವಿಶ್ವಾಸ ಇದೆ. ಆದರೆ ಜಿಲ್ಲೆಯಲ್ಲಿರುವ ಕುತಂತ್ರಗಳು ಅಷ್ಟು ಸುಲಭವಾಗಿ ಚುನಾವಣೆ ನಡೆಸಲು ಬಿಡುವುದಿಲ್ಲ. ಈಗಾಗಲೇ ಮಂಡ್ಯದಲ್ಲಿ ಅರ್ಜಿ ಹಾಕಲು ಮಹಾನ್ ಘಟಾನುಘಟಿ ನಾಯಕಿ ಸಿದ್ಧವಾಗಿದ್ದಾರೆ. ಮಂಡ್ಯದಲ್ಲಿ ಸ್ವಾಭಿಮಾನ ಉಳಿದವರು ಅವರು. ಇತ್ತೀಚಿಗೆ ಬಿಜೆಪಿ ಸೇರಿದವರು ಅರ್ಜಿ ಹಾಕಲು ತಯಾರಾಗಿದ್ದಾರೆ ಎಂದು ಸುಮಲತಾ ಅವರನ್ನು ಉದ್ದೇಶಿಸಿ ಹೆಚ್ ಡಿಕೆ ಮಾತನಾಡಿದ್ದಾರೆ.