KVS Recruitment 2025: ಇದೀಗ ಪದವಿ ಹಾಗೆ ಪೋಸ್ಟ್ ಗ್ರಾಜುಯೇಷನ್ ಮುಗಿಸಿ ಉದ್ಯೋಗ ಹುಡುಕುತ್ತಿರುವವರಿಗೆ ಕೇಂದ್ರೀಯ ವಿದ್ಯಾಲಯ ಸಂಘಟನೆ (KVS ) ಮತ್ತು ನವೋದಯ ವಿದ್ಯಾಲಯ ಸಮಿತಿ (NVS) ಒಟ್ಟು 14,967 ಭೋದಕ ಹಾಗು ಬೋಧಕೇತರ ಹುದ್ದೆಗಳಿಗೆ ನೇಮಕಾತಿಯನ್ನು ಘೋಷಣೆ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಸ್ಥಿರ ಉದ್ಯೋಗ ಹುಡುಕುತ್ತಿರುವವರಿಗೆ ಇದು ಉತ್ತಮವಾದ ಅವಕಾಶವಾಗಿದೆ. ಇದರ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
KVS ಹುದ್ದೆಯ ವಿವರ
KVS ನಲ್ಲಿ 9126 ಹುದ್ದೆಗಳು ಖಾಲಿ ಇದೆ. ಅದರಲ್ಲಿ ಭೋದಕ – 7444 , ಬೋಧಕೇತರ – 1682 ಹುದ್ದೆಗಳು ಖಾಲಿ ಇದೆ. ಹಾಗೆ NVS ನಲ್ಲಿ 5841 ಹುದ್ದೆಗಳು ಖಾಲಿ ಇದೆ. ಅದರಲ್ಲಿ ಭೋದಕ – 5581 , ಬೋಧಕೇತರ – 260 ಹುದ್ದೆಗಳು ಖಾಲಿ ಇದೆ. ಒಟ್ಟು 14,967 ಹುದ್ದೆಗಳು ಖಾಲಿ ಇದೆ. ಪ್ರದಾನ ಹುದ್ದೆಗಳು, ಪ್ರಿನ್ಸಿಪಲ್, ವೈಸ್ ಪ್ರಿನ್ಸಿಪಲ್, PGT (ಪೋಸ್ಟ್ ಗ್ರಾಜುಯೇಟ್ ಟೀಚರ್) , TGT (ಟ್ರೈನ್ ಗ್ರಾಜುಯೇಟ್ ಟೀಚರ್) ,PRT (ಪ್ರೈಮರಿ ಟೀಚರ್) , ಲೈಬ್ರೇರಿಯನ್, ಸ್ಟೇನಗ್ರಾಪರ್, ಅಸ್ಸಿಸ್ಟೆಂಟ್ ಇಂಜಿನಿಯರ್, MTS (ಮಲ್ಟಿ ಟಾಸ್ಕಿಂಗ್ ಸ್ಟಾಪ್) .
KVS ಹುದ್ದೆಯ ಅರ್ಹತೆ
ಅರ್ಹತೆಯನ್ನು ಹುದ್ದೆಗೆ ಅನುಗುಣವಾಗಿರುತ್ತದೆ.
* ಬೋಧಕ ಹುದ್ದೆಗಳಿಗೆ (PGT, TGT, PRT) ಸಂಬಂಧಿತ ವಿಷಯದಲ್ಲಿ ಪದವಿ/ಪೋಸ್ಟ್ ಗ್ರಾಜುಯೇಷನ್ , ಬಿ.ಎಡ್/ಎಂ.ಎಡ್ , CTET / ಟೆಟ್ ಕಡ್ಡಾಯವಾಗಿದೆ.
* ಬೋಧಕೇತರ ಹುದ್ದೆಗಳಿಗೆ ಸಂಬಂಧಿತ ವಿಷಯದಲ್ಲಿ ಪದವಿ, ಡಿಪ್ಲೊಮೊ, ಅಥವಾ BE/ B.tec ಕಡ್ಡಾಯವಾಗಿದೆ.
* 18-40 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. SC/ST ಗೆ 5 ವರ್ಷ, ಒಬಿಸಿ ಗೆ 3 ವರ್ಷ PWD ಗೆ 10 ವರ್ಷ ಸಡಿಲತೆ ಲಭ್ಯವಿದೆ.
* ಕೆಲವು ಹುದ್ದೆಗೆ 2-5 ವರ್ಷಗಳ ಅನುಭವ ಅಗತ್ಯವಾಗಿದೆ.
* ದಾಖಲೆಗಳು (FIR , 10 ನೇ / 12 ನೇ ತರಗತಿ ಮಾರ್ಕ್ ಸೀಟ್ , ಕ್ಯಾಸ್ಟ್ ಸರ್ಟಿಫಿಕೇಟ್ , CTET ಸ್ಕೋರ್ ಕಾರ್ಡ್)
ಅರ್ಜಿ ಪ್ರಕ್ರಿಯೆ
ಮೊದಲು ಆನ್ಲೈನ್ ನಲ್ಲಿ cbse.gov.in, kvsangathan.nic.in, navodaya.gov.in ವೆಬ್ ಸೈಟ್ ಗೆ ಭೇಟಿ ನೀಡಿ ಮೊಬೈಲ್ ಅಥವಾ ಇಮೇಲ್ ನೊಂದಿಗೆ ನೋಂದಣಿ ಮಾಡಿ, ಫಾರ್ಮ್ ಭರ್ತಿ ಮಾಡಿಕೊಳ್ಳಿ (ವಯಕ್ತಿಕ ಹಾಗೆ ಶೈಕ್ಷಣಿಕ ವಿವರ ) , ಡಾಕ್ಯುಮೆಂಟ್ ಅಪ್ಲೋಡ್ ಮಾಡಿ, ಶುಲ್ಕ ಪಾವತಿಸಿ, ಫಾರ್ಮ್ ಪ್ರಿಂಟ್ ಪಡೆದುಕೊಳ್ಳಿ. ಒಂದೇ ಫಾರ್ಮ್ ಮೂಲಕ 2 ಸಂಸ್ಥೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಶುಲ್ಕ
* General/ OBC / EWS ಗೆ 1,700 – 2,800
* SC/ST / PWD / ಮಹಿಳೆಯರಿಗೆ 500
* ಪಾವತಿ – ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ , ನೆಟ್ ಬ್ಯಾಂಕಿಂಗ್ , UPI
ಆಯ್ಕೆ ಪ್ರಕ್ರಿಯೆ
1 ) ಟೈರ್ – 1 : ಲಿಖಿತ ಪರೀಕ್ಷೆ (CBT – 180 ಪ್ರಶ್ನೆಗಳು, 180 ಅಂಕಗಳು, 3 ಗಂಟೆಗಳು, ನೆಗೆಟಿವ್ ಮಾರ್ಕ್ ಇಲ್ಲ)
2 ) ಟೈರ್ – 2 : ಕೌಶಲ್ಯ ಟೆಸ್ಟ್ / ಡೆಮೋ ಟೀಚಿಂಗ್ / ಸ್ಟೆನೋಗ್ರಫಿ ಟೆಸ್ಟ್ (ಹುದ್ದೆಗೆ ಅನುಗುಣವಾಗಿ, 100 ಅಂಕಗಳು)
3 ) ಇಂಟರ್ವ್ಯೂ (85 % ವೇತನಕ್ಕೆ 15 % ತೂಕ)
4 ) ದಾಖಲೆ ಪರಿಶೀಲನೆ
5 ) ಮೆಡಿಕಲ್ ಟೆಸ್ಟ್
{ಟೈರ್ 1 ವಿಷಯಗಳು – ಜನರಲ್ ಇಂಗ್ಲಿಷ್ (20), ಜನರಲ್ ಹಿಂದಿ (20), ಅವೇರ್ನೆಸ್ (20), ರಿಜನಿಂಗ್ (20), ಕಂಪ್ಯೂಟರ್ ಲಿಟರಸಿ (20), ಪೆಡಗಾಜಿ ಕಾನ್ಸೆಪ್ಟ್ (40), ಸಬ್ಜೆಕ್ಟ್ ಸ್ಪೆಸಿಫಿಕ್ (40), PRT / PGT ಗೆ ಸಬ್ಜೆಕ್ಟ್ ಟೆಸ್ಟ್ ಇದೆ}
ಸಂಬಳ
* PGT / TGT – 44,900 ರೂ. ನಿಂದ 1,42,400 ರೂ. (7 ನೇ ವೇತನ ಆಯೋಗ)
* PRT – 35,400 ರೂ. ನಿಂದ 1,12,400 ರೂ.
* ಪ್ರಿನ್ಸಿಪಾಲ್ – 1,18,500 ರೂ. ನಿಂದ 2,14,100
(ಹೆಚ್ಚುವರಿಯಾಗಿ – DA , HRA , ಟ್ರಾವೆಲ್ ಅಲವೆನ್ಸ್, ಪೆನ್ಷನ್, ಮೆಡಿಕಲ್ ಇನ್ಸೂರೆನ್ಸ್)
ಅಗತ್ಯ ಮಾಹಿತಿ
ನವೆಂಬರ್ 14 ರಿಂದ ಡಿಸೆಂಬರ್ 4, 2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ. ಜನವರಿ / ಫೆಬ್ರುವರಿ 2026 ರಲ್ಲಿ ಪರೀಕ್ಷೆಗಳು ನೆಡೆಯುತ್ತದೆ. ಹಾಗೆ ಮಾರ್ಚ್ 2026 ರಲ್ಲಿ ಫಲಿತಾಂಶ ಪ್ರಕಟವಾಗುತ್ತದೆ. ದೇಶಾಧ್ಯಂತ ಸಾವಿರಕ್ಕೂ ಅಧಿಕ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನೆಡೆಸಲಾಗುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

