Labour Law: ದೇಶದ ಎಲ್ಲಾ ಕಾರ್ಮಿಕರಿಗಾಗಿ ಕೇಂದ್ರದ ಬಹುದೊಡ್ಡ ಘೋಷಣೆ, ಈ ಕೆಲಸಕ್ಕೆ ಇನ್ನುಮುಂದೆ ಹೆಚ್ಚು ವೇತನ.
ಇದೀಗ ದೇಶದ ಕಾರ್ಮಿಕ ಕಾನೂನಿನಲ್ಲಿ ಬಹುದೊಡ್ಡ ಬದಲಾವಣೆಯನ್ನು ತರಲಾಗಿದೆ.
Labour Law Rule Change: ದೇಶದಲ್ಲಿ ಸಾಕಷ್ಟು ನಿಯಮಗಳು ಬದಲಾಗುತ್ತಿವೆ. ಈವರೆಗೂ ದೇಶದ ಕಾರ್ಮಿಕರಿಗೆ ವಿವಿಧ ರೀತಿಯ ನಿಯಮವನ್ನು ಪರಿಚಯಿಸಲಾಗಿತ್ತು. ಇನ್ನು ದೇಶದಲ್ಲಿ ಕಾರ್ಮಿಕ ಕಾನೂನುಗಳು ಸಾಕಷ್ಟಿವೆ.
ಕೆಲವು ಪ್ರದೇಶದಲ್ಲಿ ಕಾರ್ಮಿಕ ಕಾನೂನಿಗಳು ಜಾರಿಯಲಿದ್ದರೆ ಇನ್ನು ಕೆಲ ಪ್ರದೇಶದಲ್ಲಿ ಕಾರ್ಮಿಕ ಕಾನೂನಿನಲ್ಲಿ ಸಂಪೂರ್ಣ ಬದಲಾವಣೆಯನ್ನು ತರಲಾಗುತ್ತಿದೆ. ಇದೀಗ ದೇಶದ ಕಾರ್ಮಿಕ ಕಾನೂನಿನಲ್ಲಿ ಬಹುದೊಡ್ಡ ಬದಲಾವಣೆಯನ್ನು ತರಲಾಗಿದೆ. nಹೌದು ಕಾರ್ಮಿಕ ಭವಿಷ್ಯದ ಮತ್ತು ಅವರ ಸುರಕ್ಷತೆಯ ಉದ್ದೇಶದಿಂದ ಕಾನೂನಿನಲ್ಲಿ ದೊಡ್ಡ ಬದಲಾವಣೆಯನ್ನ ಮಾಡಲಾಗಿದ್ದು ಸದ್ಯ ಇದು ದೇಶದ ಕಾರ್ಮಿಕರ ಸಂತಸಕ್ಕೆ ಕಾರಣವಾಗಿದೆ ಎಂದು ಹೇಳಬಹುದು.
ನಾಲ್ಕು ಕಾರ್ಮಿಕ ಕಾನೂನುಗಳ ವಿವರ
ದೇಶದಲ್ಲಿ ಈಗಾಗಲೇ ನಾಲ್ಕು ಕಾರ್ಮಿಕ ಕಾನೂನುಗಳಿವೆ. ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿಯ ಸಂಹಿತೆ, ವೇತನ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ ಮತ್ತು ಸಾಮಾಜಿಕ ಭದ್ರತಾ ಸಂಹಿತೆಯ ನಾಲ್ಕು ಕಾರ್ಮಿಕ ಕಾನೂನುಗಳಿವೆ. ಈ ನಾಲ್ಕು ಕಾರ್ಮಿಕ ಕಾನೂನುಗಳ ಕುರಿತು ಸಂಸತ್ತು ಅಂಗೀಕರಿಸಿದೆ ಹಾಗೂ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ. ಇದೀಗ ಈ ಕಾನೂನುಗಳಲ್ಲಿ ಬದಲಾವಣೆ ಮಾಡಲಾಗಿದೆ.
ದೇಶದ ಎಲ್ಲಾ ಕಾರ್ಮಿಕರಿಗಾಗಿ ಕೇಂದ್ರದ ಬಹುದೊಡ್ಡ ಘೋಷಣೆ
ಕಾರ್ಮಿಕ ಕಾನೂನುಗಳು ಜಾರಿಗೆ ಬಂದ ನಂತರ ನೌಕರರು ಕ್ಯಾಲೆಂಡರ್ ವರ್ಷದಲ್ಲಿ 30 ದಿನಗಳಿಗಿಂತ ಹೆಚ್ಚು ವೇತನ ಸಹಿತ ರಜೆಯನ್ನು ಸಂಗ್ರಹಿಸುವಂತಿಲ್ಲ. ರಜೆಗಳು 30 ದಿನಗಳಿಗಿಂತ ಹೆಚ್ಚಿದ್ದರೆ ಕಂಪನಿ ಅಥವಾ ಉದ್ಯೋಗದಾತರು ಉದ್ಯೋಗಿಗಳಿಗೆ ಹೆಚ್ಚುವರಿ ರಜೆಯನ್ನು ಪಾವತಿಸಬೇಕಾಗುತ್ತದೆ.
ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿಯ ಸಂಹಿತೆ, 2020 ರ ಸೆಕ್ಷನ್ 32 , ವಾರ್ಷಿಕ ರಜೆ ಪಡೆಯಲು, ರಜೆಯನ್ನು ಮುಂದುವರೆಸಲು ಮತ್ತು ನಗದೀಕರಣಕ್ಕೆ ಸಂಬಂಧಿಸಿದಂತೆ ಹಲವಾರು ಷರತ್ತುಗಳನ್ನು ಹೊಂದಿದೆ. ಸೆಕ್ಷನ್ 32 ಒಬ್ಬ ಕೆಲಸಗಾರನಿಗೆ ಮುಂದಿನ ಕ್ಯಾಲೆಂಡರ್ ವರ್ಷಕ್ಕೆ 30 ದಿನಗಳ ವರೆಗೆ ವಾರ್ಷಿಕ ರಜೆಯನ್ನು ಮುಂದುವರೆಸಲು ಅನುಮತಿಸುತ್ತದೆ.
ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ವಾರ್ಷಿಕ ರಜೆ ಬ್ಯಾಲೆನ್ಸ್ 30 ಕ್ಕಿಂತ ಹೆಚ್ಚಿದ್ದರೆ, ಉದ್ಯೋಗಿಯೂ ಹೆಚ್ಚುವರಿ ರಜೆಯನ್ನು ನಗದೀಕರಿಸಲು ಮತ್ತು ಮುಂದಿನ ವರ್ಷಕ್ಕೆ 30 ದಿನಗಳನ್ನು ಮುಂದುವರಿಸಲು ಅರ್ಹರಾಗಿರುತ್ತಾರೆ.ಅದೇ ರೀತಿಯಲ್ಲಿ ಈ ಹೊಸ ಕಾನೂನು ದೇಶದ ಎಲ್ಲಾ ಕಾರ್ಮಿಕರಿಗೂ ಸೀಮಿತವಾಗಿದೆ ಎಂದು ಕೇಂದ್ರ ಸರ್ಕಾರ ಆದೇಶವನ್ನ ಹೊರಡಿಸಿದೆ.