PM-SYM: ಪ್ರತಿ ತಿಂಗಳು 3000 ರೂ ಪಿಂಚಣಿ, ದೇಶದ ಎಲ್ಲಾ ಕಾರ್ಮಿಕರಿಗೆ ಕೇಂದ್ರದಿಂದ ಹೊಸ ಯೋಜನೆ.

ಕೇಂದ್ರದ ಈ ಯೋಜನೆಯಲ್ಲಿ ಕಾರ್ಮಿಕರಿಗೆ ಪ್ರತಿ ತಿಂಗಳು 3000 ರೂ ಪಿಂಚಣಿ

Prime Minister Shrama Yogi Mandhan Yojana: ಮಾಧ್ಯಮ ವರ್ಗದವರಿಗೆ ಆರ್ಥಿಕ ಸಮಸ್ಯೆ ಉಂಟಾಗುವ ಸಾಮಾನ್ಯವಾದ ವಿಚಾರ. ಆರ್ಥಿಕ ಸಮಸ್ಯೆ ಉಂಟಾದಾಗ ಪರಿಹಾರವನ್ನು ಕಂಡುಕೊಳ್ಳಲು ಮೊದಲೇ ಹೂಡಿಕೆಯ ಯೋಜನೆಯಲ್ಲಿ ಉಳಿತಾಯ ಮಾಡುವುದು ಉತ್ತಮ. ಉನ್ನಿ ಸರ್ಕಾರೀ ನೌಕರರಿಗೆ ಸರ್ಕಾರವೇ ನಿವೃತ್ತಿಯ ನಂತರ ಪಿಂಚಣಿಯ ನೀಡುತ್ತದೆ.

ಆದರೆ ಸಾಮಾನ್ಯ ಜನರಿಗೆ ಯಾವುದೇ ನಿವೃತ್ತಿಯ ವೇತನ ದೊರೆಯುವುದಿಲ್ಲ. ಇದಕ್ಕಾಗಿ ಹೂಡಿಕೆಯನ್ನು ಮಾಡಬೇಕಾಗುತ್ತದೆ. ಅಂತಹ ಹೂಡಿಕೆಯ ಯೋಜನೆಯ ಬಗ್ಗೆ ನಾವೀಗ ಮಾಹಿತಿ ನೀಡಲಿದ್ದೇವೆ. ಕೇಂದ್ರ ಸರ್ಕಾರವು 2019 ರಲ್ಲಿ ಪ್ರಧಾನ ಮಂತ್ರಿ ಮಂತ್ರಿ ಶ್ರಮಯೋಗಿ ಮಂಧನ್ (PM-SYM) ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿನ ಹೂಡಿಕೆಯ ಬಗ್ಗೆ ಮಾಹಿತಿ ತಿಳಿಯಲು ಈ ಲೇಖನವನ್ನು ಓದಿ.

Prime Minister Shram Yogi Mandhan Yojana
Image Credit: Jagran

ದೇಶದ ಎಲ್ಲಾ ಕಾರ್ಮಿಕರಿಗೆ ಕೇಂದ್ರದಿಂದ ಹೊಸ ಯೋಜನೆ
ಅಸಂಘಟಿತ ವಲಯದ ಕಾರ್ಮಿಕರಿಗಾಗಿ PM-SYM ಯೋಜನೆ ಜಾರಿಗೊಳಿಸಲಾಗಿದೆ. ಅಸಂಘಟಿತ ವಲಯದ ಜನರಿಗೆ ಆರ್ಥಿಕ ಭದ್ರತೆ ಒದಗಿಸುವ ಗುರಿ ಹೊಂದಿದೆ. ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರಿಗೆ ನಿರ್ದಿಷ್ಟ ವಯಸ್ಸು (60 ವರ್ಷ) ತಲುಪಿದ ನಂತರ ಪಿಂಚಣಿ ನೀಡುತ್ತದೆ. ಇದಕ್ಕಾಗಿ ಅವರು ಮಾಡಬೇಕಾಗಿರುವುದು ಇಷ್ಟೇ. ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಬೇಕು. ಸರ್ಕಾರವೂ ಅಷ್ಟೇ ಮೊತ್ತವನ್ನು ಭರಿಸುತ್ತಿದೆ. 60 ವರ್ಷ ವಯಸ್ಸಿನ ನಂತರ, ಫಲಾನುಭವಿಯು ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಮೊತ್ತವನ್ನು ಪಡೆಯಬಹುದು.

ಪ್ರತಿ ತಿಂಗಳು 3000 ರೂ ಪಿಂಚಣಿ
ಫಲಾನುಭವಿಯು 18 ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾನೆ ಎಂದು ನಾವು ಭಾವಿಸೋಣ. ನಂತರ ಅವರು ಪ್ರತಿ ತಿಂಗಳು (60 ವರ್ಷಗಳವರೆಗೆ) ರೂ 55 ಪಾವತಿಸುತ್ತಾರೆ. ಸರ್ಕಾರವೂ ಅಷ್ಟೇ ಮೊತ್ತವನ್ನು ಠೇವಣಿ ಇಡುತ್ತದೆ. ಅಂದರೆ ಪ್ರತಿ ತಿಂಗಳು ಅವರ ಹೆಸರಿನಲ್ಲಿ 110 ರೂ. ಠೇವಣಿ ಇಡಲಾಗುವುದು. 19 ನೇ ವಯಸ್ಸಿನಲ್ಲಿ 58 ಮತ್ತು ರೂ. 20 ನೇ ವಯಸ್ಸಿನಲ್ಲಿ 61 ರೂ. ಠೇವಣಿ ಮಾಡಬೇಕಾಗುತ್ತದೆ.

Prime Minister Shram Yogi Mandhan Yojana Pension
Image Credit: Housing

ಹೀಗೆ ವಯಸ್ಸು ಹೆಚ್ಚಾದಂತೆ ಪಾವತಿಸಬೇಕಾದ ಮೊತ್ತವು ಹೆಚ್ಚಾಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಗರಿಷ್ಠ ವಯಸ್ಸು 40 ವರ್ಷಗಳು. 30 ವರ್ಷದ ಫಲಾನುಭವಿಗೆ 30 ವರ್ಷಗಳಲ್ಲಿ ಒಟ್ಟು 37,800 ರೂ. (105×12=1260, 1260×30=37,800) ಪಾವತಿಸಲಾಗುವುದು. ಅಷ್ಟೇ ಮೊತ್ತವನ್ನು ಸರಕಾರ ಭರಿಸಲಿದೆ. ಈ ಹೂಡಿಕೆಯೊಂದಿಗೆ ತಿಂಗಳಿಗೆ 3,000 ರೂಪಾಯಿ ಪಿಂಚಣಿಯಾಗಿ ವಿತರಿಸಲಾಗುತ್ತದೆ.

Join Nadunudi News WhatsApp Group

ಯೋಜನೆಯ ಲಾಭ ಪಡೆಯಲು ಯಾರೂ ಅರ್ಹರು..?
•ಫಲಾನುಭವಿಯು 18 ರಿಂದ 40 ವರ್ಷಗಳ ನಡುವೆ ಇರಬೇಕು

•ಮಾಸಿಕ ಆದಾಯ 15,000 ರೂ. ಅಥವಾ ಕಡಿಮೆ ಇರಬೇಕು.

•ಆದಾಯ ತೆರಿಗೆ ಪಾವತಿದಾರರಾಗಿರಬಾರದು.

•ಸಂಘಟಿತ ವಲಯದ ಕಾರ್ಮಿಕರಾಗಿರಬಾರದು ಮತ್ತು ಇ.ಎಸ್.ಐ. / ಪಿ.ಎಫ್. / ಎನ್.ಪಿ.ಎಸ್. ಯೋಜನೆಗೆ ಒಳಪಡಬಾರದು.

•ಮಾಸಿಕ ಕೊಡುಗೆ ಮೊತ್ತವನ್ನು ವಯಸ್ಸಿಗೆ ಅನುಗುಣವಾಗಿ 60 ವರ್ಷ ವಯಸ್ಸಿನವರೆಗೆ ಪಾವತಿಸಬೇಕು.

•ಫಲಾನುಭವಿಯು ಮಾಸಿಕ ಕಂತುಗಳನ್ನು ಸರಿಯಾಗಿ ಪಾವತಿಸಿದರೆ ಮತ್ತು 60 ವರ್ಷಕ್ಕಿಂತ ಮೊದಲು ಮರಣಹೊಂದಿದರೆ ಸಂಗಾತಿಯು ಮುಂದುವರಿಯಬಹುದು.

•ಚಂದಾದಾರರು 60 ವರ್ಷಗಳ ಮೊದಲು ಯೋಜನೆಯಿಂದ ನಿರ್ಗಮಿಸಿದರೆ ಪಾವತಿಸಿದ ಮೊತ್ತಕ್ಕೆ ಮಾತ್ರ ಬಡ್ಡಿ ದೊರೆಯುತ್ತದೆ.

Prime Minister Shram Yogi Mandhan Yojana 2024
Image Credit: Indiafilings

Join Nadunudi News WhatsApp Group