Ladli Bahana Yojana: ಮಹಿಳೆಯರ ಖಾತೆಗೆ ಮುಂದಿನ ತಿಂಗಳಿಂದ ಜಮಾ ಆಗಲಿದೆ 1000 ರೂ, ಈ ರಾಜ್ಯದವರಿಗೆ ಮಾತ್ರ.

Ladli Bahana ಯೋಜನೆಯ ಅಡಿಯಲ್ಲಿ ಮಹಿಳೆಯರ ಖಾತೆಗೆ ಜಮಾ ಆಗಲಿದೆ 1000 ರೂಪಾಯಿ.

Madhya Pradesh Government: ಕೇಂದ್ರ ಸರ್ಕಾರ (Central Government) ಜನಸಾಮಾನ್ಯರಿಗಾಗಿ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಜನಸಾಮಾನ್ಯರು ಸರಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಸರ್ಕಾರ ದೇಶದ ಮಹಿಳೆಯರಿಗೆ ಹಲವಾರು ಯೋಜನೆಗಳನ್ನು ಬಿಡುಗಡೆಗೊಳಿಸಿದೆ.

ಮಹಿಳೆಯರು ಸ್ವಾವಲಂಭಿಯಾಗಿ  ಜೀವನ ಸಾಗಿಸುವುದು ಸರ್ಕಾರದ ಗುರಿಯಾಗಿದೆ. ಇದೀಗ ಈ ಸರ್ಕಾರ ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ ಹಣ ನೀಡಲು ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಯಾವ ರಾಜ್ಯದ ಈ ಯೋಜನೆ ಜಾರಿಗೊಳಿಸಲಾಗಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Ladli Bahana Yojana
Image Source: Hindi News

ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ
ಇದೀಗ 1.25 ಕೋಟಿ ಮಹಿಳೆಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಜೂನ್ 2023 ರಿಂದ ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಈ ಸರ್ಕಾರ ಕೈಗೊಂಡಿದೆ. ಜೂನ್ ತಿಂಗಳಿಂದ ಮಹಿಳೆಯರು ಹಾಗೂ ಹೆಣ್ಣುಮಕ್ಕಳಿಗೆ ಮಾಸಿಕವಾಗಿ 1000 ರೂ. ಖಾತೆಗೆ ಜಮಾ ಆಗಲಿದೆ.

Ladli Bahana Yojana
Image Source: Outlook India

ಲಾಡ್ಲಿ ಬಹನ ಯೋಜನೆ (Ladli Bahana Yojana) 
ಮಧ್ಯಪ್ರದೇಶ ಸರ್ಕಾರ (Madhya Pradesh Government) ಮುಖ್ಯಮಂತ್ರಿ ಲಾಡ್ಲಿ ಬಹನ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಈ ಯೋಜನೆಯಡಿಯಲ್ಲಿ ರಾಜ್ಯದ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ಪ್ರತಿ ತಿಂಗಳು 1000 ರೂಪಾಯಿಗಳನ್ನು ನೀಡಲಾಗುತ್ತದೆ. ಇನ್ನು ಮದ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇದನ್ನು ಘೋಷಿಸಿದ್ದಾರೆ.

ಕುಟುಂಬದ ಆದಾಯ ಎಷ್ಟೇ ಆಗಿದ್ದರು ಈ ಯೋಜನೆಯ ಲಾಭವನ್ನು ಪಡೆಯಬಹುದು. 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕುಟುಂಬದ ಮಹಿಳೆಯರು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಲ್ಲಿ ತಿಂಗಳಿಗೆ ರೂ. 1000 ಕ್ಕಿಂತ ಕಡಿಮೆ ಹಣ ಪಡೆಯುತ್ತಿದ್ದಾರೆ, ಆ ಮಹಿಳೆಗೆ ರೂ. 1,000 ವರೆಗೆ ಮರುಪಾವತಿ ಮಾಡಲಾಗುತ್ತದೆ. ವಿಧವೆ ಹಾಗೂ ವಿಚ್ಛೇದಿತ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಸದ್ಯ ಈ ಯೋಜನೆ ಮಧ್ಯ ಪ್ರದೇಶದಲ್ಲಿ ಜಾರಿಗೆ ಬಂದಿರುತ್ತದೆ.

Join Nadunudi News WhatsApp Group

Ladli Bahana Yojana
Image Source: Investment help

Join Nadunudi News WhatsApp Group