Lakhpati Didi: ದೇಶದ ಮಹಿಳೆಯರಿಗೆ ಪ್ರತಿ ತಿಂಗಳು 20 ಸಾವಿರ ರೂ ಗಳಿಸುವ ಅವಕಾಶ, ಕೇಂದ್ರದಿಂದ ಲಖಪತಿ ದೀದಿ ಯೋಜನೆಗೆ ಜಾರಿ.
ದೇಶದಲ್ಲಿ ಮಹಿಳೆಯರಿಗಾಗಿ ಜಾರಿಗೆ ಬಂತು ಇನ್ನೊಂದು ಯೋಜನೆ.
Lakhpati Didi Scheme For Women’s: ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಹೊಸ ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ. ಮಹಿಳೆಯರಿಗೆ ಆರ್ಥಿಕವಾಗಿ ನೆರವಾಗಬೇಕೆನ್ನುವುದು ಸರ್ಕಾರದ ಉದ್ದೇಶವಾಗಿದೆ.
ಈಗಾಗಲೇ ಕೇಂದ್ರದ ಮೋದಿ ಸರ್ಕಾರ ಮಹಿಳೆಯರಿಗಾಗಿ ವಿವಿಧ ಯೋಜನೆಗಳನ್ನು ಪಾರಿಚಯಿಸಿದ್ದು, ಮಹಿಳೆಯರು ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುವ ಮೂಲಕ ಸ್ವಾವಲಂಭಿ ಜೀವನವನ್ನು ನಡೆಸುತ್ತಿದ್ದಾರೆ ಎನ್ನಬಹೌದು.
ದೇಶದ ಮಹಿಳೆಯರಿಗೆ ಹೊಸ ಯೋಜನೆ ಜಾರಿ
ಇದೀಗ ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ದೇಶದ ಮಹಿಳೆಯರನ್ನು ಲಕ್ಷಾಧಿಪತಿಯನ್ನಾಗಿಸುವ ಉದ್ದೇಶದಿಂದ ಸರ್ಕಾರ ಹೊಸ ಯೋಜನೆಯನ್ನು ಪರಿಚಯಿಸಲು ನಿರ್ಧರಿಸಿದೆ. ಕೇಂದ್ರದ ಹೊಸ ಯೋಜನೆಯು ಎರಡು ಕೋಟಿ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಉತ್ತೇಜಿಸಲು ಮತ್ತು ತಮ್ಮದೇ ಆದ ಸಣ್ಣ ವ್ಯವಹಾರವನ್ನು ಪ್ರಾರಂಭಿಸಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ ಮಹಿಳೆಯರು ಮಾಸಿಕ ವೇತನವನ್ನು ಪಡೆಯಬಹುದು.
ಕೇಂದ್ರದಿಂದ ಲಖಪತಿ ದೀದಿ ಯೋಜನೆಗೆ ಜಾರಿ
ಕೇಂದ್ರ ಸರ್ಕಾರ ಮಹಿಳೆಯರನ್ನು ಲಕ್ಷಾಧಿಪತಿಯನ್ನಾಗಿಸುವ ಉದ್ದೇಶದಿಂದ ಲಖಪತಿ ದೀದಿ ಯೋಜನೆಯನ್ನು ಪರಿಚಯಿಸಿದೆ. ಲಖಪತಿ ದೀದಿ ಯೋಜನೆಯನ್ನು ಈಗಾಗಲೇ ಕೆಲವು ರಾಜ್ಯಗಳಲ್ಲಿ ಪ್ರಾರಂಭಿಸಲಾಗಿದ್ದು, ಕೇಂದ್ರವು ಈಗ ಕಲ್ಯಾಣ ಉದ್ಯಮದ ಅಡಿಯಲ್ಲಿ ಸುಮಾರು ಎರಡು ಕೋಟಿ ಮಹಿಳೆಯರಿಗೆ ತರಬೇತಿ ನೀಡಲು ಯೋಜಿಸುತ್ತಿದೆ.
ದೇಶದ ಮಹಿಳೆಯರಿಗೆ ಪ್ರತಿ ತಿಂಗಳು 20 ಸಾವಿರ ರೂ ಗಳಿಸುವ ಅವಕಾಶ
ಲಖ್ಪತಿ ದೀದಿ ಯೋಜನೆಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಗಂಜಿ, ಹಿಟ್ಟು, ಬೇಳೆ ಹಿಟ್ಟು, ಹೊಲಿಗೆಯಿಂದ ಹಿಡಿದು ಪ್ಲಂಬಿಂಗ್, LED Bulb ತಯಾರಿಕೆ, ಡ್ರೋನ್ ಗಳ ನಿರ್ವಹಣೆ ಮತ್ತು ದುರಸ್ತಿ ಮಾಡುವುದು ಸೇರಿದಂತೆ ವಿವಿಧ ಕೌಶಲ್ಯಗಳಿಗೆ ಹಳ್ಳಿಗಳು ಹಾಗೂ ಸಣ್ಣ ಪಟ್ಟಣಗಳಲ್ಲಿ ತರಬೇತಿ ನೀಡಲಾಗುತ್ತದೆ. ಸ್ವಯಂ ಗುಂಪಿನ ಸಹಾಯದಿಂದ 15 ಸಾವಿರ ಮಹಿಳೆಯರು ಕೃಷಿಗಾಗಿ ಡ್ರೋನ್ ತರವಿಬೆತಿ ಪಡೆಯುತ್ತಿದ್ದಾರೆ. ಕೇಂದ್ರದ ಈ ಯೋಜನೆಯಡಿ ಮಹಿಳೆಯರು ಮನೆಯಲ್ಲಿಯೇ ಕುಳಿತು ಪ್ರತಿ ತಿಂಗಳು 15 ರಿಂದ 20 ಸಾವಿರ ಹಣವನ್ನು ಗಳಿಸಬಹುದಾಗಿದೆ.